ವೈಭವ್ ಸೂರ್ಯವಂಶಿ 
ಕ್ರಿಕೆಟ್

IPL 2025: ವೇಗದ ಶತಕ, ಯಶಸ್ಸಿನ ಗುಟ್ಟು ಬಿಚ್ಚಿಟ್ಟ ವೈಭವ್ ಸೂರ್ಯವಂಶಿ! Video

14 ನೇ ವರ್ಷದ ಸೂರ್ಯವಂಶಿ 11 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಹೊಡೆದು ತಾನೂ ಆಡಿದ ಮೂರನೇ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಜೈಪುರ: ಟಿ20ಯಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ವೈಭವ್ ಸೂರ್ಯವಂಶಿ, 5 ವರ್ಷ ಇದ್ದಾಗಲೇ ಕ್ರಿಕೆಟ್ ಆಡಲು ಶುರು ಮಾಡಿದ್ದರಂತೆ.

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ 5 ಎಸೆತಗಳಲ್ಲಿ ಮೂರು ಅಂಕಿಗಳ ಗಡಿ ತಲುಪಿ, ಐಪಿಎಲ್ ಇತಿಹಾಸದಲ್ಲಿ ವೇಗದಲ್ಲಿ ಶತಕ ಬಾರಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡರು. 14 ನೇ ವರ್ಷದ ಸೂರ್ಯವಂಶಿ 11 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಹೊಡೆದು ತಾನೂ ಆಡಿದ ಮೂರನೇ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

210 ರನ್ ಗಳ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ರಾಯಲ್ಸ್ 15.5 ಓವರ್‌ಗಳಲ್ಲಿ 8 ವಿಕೆಟ್‌ಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತು. ಯಶಸ್ವಿ ಜೈಸ್ವಾಲ್ 40 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 70 ರನ್ ಗಳಿಸಿದರು.

5 ವರ್ಷದವನಿದ್ದಾಗಲೇ ಕ್ರಿಕೆಟ್ ಕಲಿಕೆ: ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಸೂರ್ಯವಂಶಿ, ನಾನು 5 ವರ್ಷದವನಿದ್ದಾಗಲೇ ನನ್ನ ತಂದೆ ನನಗೆ ಕ್ರಿಕೆಟ್ ಬಗ್ಗೆ ಕಲಿಸಿದರು. ಟರ್ಫ್ ವಿಕೆಟ್‌ಗಳಲ್ಲಿ ಆಡಲು ಪ್ರಾರಂಭಿಸಿದೆ ಮತ್ತು ಸಮಸ್ತಿಪುರದಲ್ಲಿ ನನ್ನ ವಿರುದ್ಧ ಉತ್ತಮ ಬೌಲರ್‌ಗಳನ್ನು ನಿಯೋಜಿಸಲಾಗಿತ್ತು. ಪಾಟ್ನಾದ ಕ್ರಿಕೆಟ್ ಅಕಾಡೆಮಿಗೆ ಸೇರುವ ಮೊದಲು ಎರಡು ವರ್ಷ ಹೀಗೆಯೇ ನಡೆಯಿತು. ಸಮಸ್ತಿಪುರ ಮತ್ತು ಪಾಟ್ನಾ ಎರಡೂ ಕಡೆಗಳಲ್ಲಿದ್ದಾಗ ಏರಿಳಿತ ಇತ್ತು. ನನ್ನಗೆ ಸಿಕ್ಕ ಅವಕಾಶದಲ್ಲಿ ಸಾಧ್ಯವಾದಷ್ಟು ಕೊಡುಗೆ ನೀಡಿದ್ದೇನೆ ಎಂದರು.

ಪ್ರತಿದಿನ ಆರು ಗಂಟೆ ಅಭ್ಯಾಸ:

ಪ್ರತಿದಿನ ಆರು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಇದು ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಫಿಟ್ನೆಸ್ ಒಳಗೊಂಡಿತ್ತು ಎಂದು ತಿಳಿಸಿದ ಸೂರ್ಯವಂಶಿ, ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ತಂಡದ ನಿರ್ದೇಶಕ ಜುಬಿನ್ ಭರುಚಾ ಅವರನ್ನು ಶ್ಲಾಘಿಸಿದರು.

ರಾಹುಲ್ ದ್ರಾವಿಡ್ ಬೆನ್ನೆಲುಬು: ದ್ರಾವಿಡ್ ಸರ್, ವಿಕ್ರಮ್ ಸರ್ ಮತ್ತು ಜುಬಿನ್ ಸರ್ ನನ್ನೊಂದಿಗೆ ತಿಂಗಳುಗಟ್ಟಲೆ ಕೆಲಸ ಮಾಡಿದ್ದಾರೆ. ದ್ರಾವಿಡ್ ಸರ್ ನನಗೆ ತುಂಬಾ ಬೆಂಬಲ ನೀಡಿದ್ದು, ಆತ್ಮವಿಶ್ವಾಸ ಮೂಡಿಸಿದ್ದಾರೆ. ಐಪಿಎಲ್‌ನಲ್ಲಿ ಪ್ರದರ್ಶನ ನೀಡುತ್ತೇನೆ ಎಂದು ಅವರು ನನಗೆ ವಿಶ್ವಾಸ ನೀಡಿದರು. ಅಲ್ಲದೇ, ನನಗೆ ಅವಕಾಶ ನೀಡಿದರು. ಸಹಜವಾಗಿ ಆಟ ಆಡಲು ಮತ್ತು ತಾಳ್ಮೆಯಿಂದ ಇರಲು ಹೇಳಿದ್ದರು ಎಂದು ಸೂರ್ಯವಂಶಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

SCROLL FOR NEXT