ವೈಭವ್ ಸೂರ್ಯವಂಶಿ 
ಕ್ರಿಕೆಟ್

IPL 2025: ವೈಭವ್ ಸೂರ್ಯವಂಶಿ ಕ್ರಿಕೆಟ್ ಕನಸಿಗೆ ಕೃಷಿ ಭೂಮಿಯನ್ನೇ ಮಾರಿದ ತಂದೆ; ವಿಶ್ವ ದಾಖಲೆ ಬರೆದ ಮಗ

ಬಿಹಾರದ ಸಮಷ್ಟಿಪುರದಿಂದ ಪ್ರಾರಂಭವಾದ ಈ ಯುವ ಆಟಗಾರನ ಪ್ರಯಾಣ ಅಷ್ಟೇನು ಸುಲಭವಾಗಿರಲಿಲ್ಲ. 14 ವರ್ಷದ ಈತನ ಅಬ್ಬರದ ಬ್ಯಾಟಿಂಗ್‌ಗೆ ಕ್ರಿಕೆಟ್ ಲೋಕವೇ ದಂಗಾಗಿದೆ.

ಸೋಮವಾರ ರಾಜಸ್ಥಾನ್ ರಾಯಲ್ಸ್ (RR) ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 14 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ 35 ಎಸೆತಗಳಲ್ಲೇ ಅಬ್ಬರದ ಶತಕ ಸಿಡಿಸುವ ಮೂಲಕ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಇದು ಭಾರತೀಯ ಕ್ರಿಕೆಟಿಗನೊಬ್ಬ ಐಪಿಎಲ್‌ನಲ್ಲಿ ಸಿಡಿಸಿದ ವೇಗದ ಶತಕವಾಗಿದೆ. ಈ ಆವೃತ್ತಿಯಲ್ಲಿ ಮೂರನೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ, ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಬೌಲರ್‌ಗಳ ನೀರಿಳಿಸಿದರು. 35 ಎಸೆತಗಳಲ್ಲಿ ಶತಕ ಗಳಿಸಿ ಮಿಂಚಿದರು. ಅಲ್ಲದೆ, ವೈಭವ್ ಸೂರ್ಯವಂಶಿ ಈಗ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

ಬಿಹಾರದ ಸಮಷ್ಟಿಪುರದಿಂದ ಪ್ರಾರಂಭವಾದ ಈ ಯುವ ಆಟಗಾರನ ಪ್ರಯಾಣ ಅಷ್ಟೇನು ಸುಲಭವಾಗಿರಲಿಲ್ಲ. 14 ವರ್ಷದ ಈತನ ಅಬ್ಬರದ ಬ್ಯಾಟಿಂಗ್‌ಗೆ ಕ್ರಿಕೆಟ್ ಲೋಕವೇ ದಂಗಾಗಿದೆ. ನಾಯಕ ಸಂಜು ಸ್ಯಾಮ್ಸನ್ ಗಾಯಗೊಂಡ ಬಳಿಕ ತಂಡದಲ್ಲಿ ಅವಕಾಶ ಪಡೆದ ಅವರು ಸಿಕ್ಕ ಅವಕಾಶವನ್ನು ಉತ್ತಮವಾಗಿಯೇ ಬಳಸಿಕೊಂಡಿದ್ದಾರೆ.

ಯುವ ಕ್ರಿಕೆಟಿಗ (ಸೂರ್ಯವಂಶಿ) ಪಾಟ್ನಾದಲ್ಲಿ ತನ್ನ ಆರಂಭಿಕ ವರ್ಷಗಳಲ್ಲಿ ಮಾಡಿದ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಈಗ ಫಲ ಸಿಕ್ಕಿದೆ. 10ನೇ ವಯಸ್ಸಿನಿಂದಲೇ ಅವರು ದಿನಕ್ಕೆ 600 ಎಸೆತಗಳನ್ನು ಎದುರಿಸುತ್ತಾ ತೀವ್ರವಾಗಿ ಅಭ್ಯಾಸ ಮಾಡುತ್ತಿದ್ದರು. ಹಿರಿಯ ಮತ್ತು ಕಠಿಣ ಬೌಲರ್‌ಗಳನ್ನು ಎದುರಿಸುವ ಮೂಲಕ ತರಬೇತಿ ಪಡೆಯುತ್ತಿದ್ದರು. ಸೂರ್ಯವಂಶಿಗೆ ಬೆಂಬಲ ನೀಡುತ್ತಿದ್ದ ಅವರ ತಂದೆ ಸಂಜೀವ್ ಸೂರ್ಯವಂಶಿ, ಆ ದೀರ್ಘ ಅಭ್ಯಾಸ ಅವಧಿಗಳಿಗಾಗಿ 10 ಹೆಚ್ಚುವರಿ ಟಿಫಿನ್ ಬಾಕ್ಸ್‌ಗಳನ್ನು ತರುತ್ತಿದ್ದರು.

ಮಗನ ಕ್ರಿಕೆಟ್ ಕನಸುಗಳನ್ನು ಪೂರೈಸಲು ಸೂರ್ಯವಂಶಿ ಅವರ ತಂದೆ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದ ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಾರೆ. ಆಗ ಇವರ ಬಳಿಯಲ್ಲಿ ಕುಟುಂಬ ನಿರ್ವಹಣೆಗೆ ಬೇರೆ ಯಾವುದೇ ದಾರಿಗಳೇ ಇರಲಿಲ್ಲ. ಆ ದಿಟ್ಟ ನಿರ್ಧಾರ ಇದೀಗ ವೈಭವ್ ಸೂರ್ಯವಂಶಿ ಅವರ ಶತಕದ ಮೂಲಕ ಸಾರ್ಥಕತೆ ಪಡೆದಿದೆ.

ಮೊದಲ ಪಂದ್ಯದಲ್ಲೇ ಶಾರ್ದೂಲ್ ಠಾಕೂರ್ ವಿರುದ್ಧ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದ ವೈಭವ್, ಈಗ ಮೂರು ಪಂದ್ಯಗಳಲ್ಲಿ 75.50 ಸರಾಸರಿ ಮತ್ತು 222.05 ಸ್ಟ್ರೈಕ್ ರೇಟ್‌ನಲ್ಲಿ 151 ರನ್ ಗಳಿಸಿದ್ದಾರೆ. ಕಳೆದ ವರ್ಷ ನಡೆದ ಐಪಿಎಲ್ ಮೆಗಾ-ಹರಾಜಿನಲ್ಲಿ, ಸೂರ್ಯವಂಶಿ ಅವರನ್ನು 1.1 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಖರೀದಿಸಿದ್ದು, ಬಹುತೇಕರಿಗೆ ಅಚ್ಚರಿ ಮೂಡಿಸಿತ್ತು.

2011ರ ಮಾರ್ಚ್ 27ರಂದು ಬಿಹಾರದಲ್ಲಿ ಜನಿಸಿದ ವೈಭವ್, ಈ ಆವೃತ್ತಿಯಲ್ಲಿರುವ ಆಟಗಾರರ ಪೈಕಿ ಅತ್ಯಂತ ಕಿರಿಯ ಆಟಗಾರ. ಜನವರಿ 2024 ರಲ್ಲಿ ಅವರಿಗೆ ಕೇವಲ 12 ವರ್ಷ ಮತ್ತು 284 ದಿನಗಳ ವಯಸ್ಸಾಗಿತ್ತು. ಆಗ ಬಿಹಾರ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಕಳೆದ ವರ್ಷ, ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಭಾರತದ U19 ಪಂದ್ಯದ ಭಾಗವಾಗಿದ್ದರು. ಅಲ್ಲಿ ಅವರು 58 ಎಸೆತಗಳಲ್ಲಿ ಶತಕ ಬಾರಿಸಿದರು.

ಅವರು SMAT 2024 ಟೂರ್ನಮೆಂಟ್‌ನಲ್ಲಿ ಬಿಹಾರ ಪರ ತಮ್ಮ T20 ಚೊಚ್ಚಲ ಪಂದ್ಯವನ್ನು ಆಡಿದರು. ಆದರೆ, ಅವರ ಏಕೈಕ ಪಂದ್ಯದಲ್ಲಿ ಅವರು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. 2024-25ರ ACC ಅಂಡರ್ 19 ಏಷ್ಯಾ ಕಪ್‌ನಲ್ಲಿ ಅವರು ಏಳನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಅವರು ಪಂದ್ಯಾವಳಿಯಲ್ಲಿ 5 ಪಂದ್ಯಗಳಲ್ಲಿ 176 ರನ್ ಗಳಿಸಿದರು ಮತ್ತು 76* ಅತ್ಯಧಿಕ ಸ್ಕೋರ್ ಆಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT