ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ 
ಕ್ರಿಕೆಟ್

IPL 2025: 'Virat Kohli ನನ್ನ ಸ್ನೇಹಿತನಲ್ಲ.. Just ಸಹಆಟಗಾರ ಅಷ್ಟೇ'; RCB ಸ್ಟಾರ್ ಬ್ಯಾಟರ್ ಸ್ಫೋಟಕ ಹೇಳಿಕೆ!

ನಿಮ್ಮೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯುವ ವಿರಾಟ್ ಕೊಹ್ಲಿ ಅವರು ಈಗ ಸ್ನೇಹಿತರಾಗಿದ್ದಾರೆ ಅಲ್ಲವೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಸಾಲ್ಟ್ ಇಲ್ಲ ಸಹೋದ್ಯೋಗಿಯಷ್ಟೇ ಎಂದು ಹೇಳಿದರು.

ಬೆಂಗಳೂರು: ವಿರಾಟ್ ಕೊಹ್ಲಿ ನನ್ನ ಸ್ನೇಹಿತನಲ್ಲ.. ಕೇವಲ ನನ್ನ ಸಹಆಟಗಾರ ಅಷ್ಟೇ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ಫಿಲ್ ಸಾಲ್ಟ್ (Phil Salt) ಹೇಳಿದ್ದಾರೆ.

ಫಿಲ್ ಸಾಲ್ಟ್ ಅವರನ್ನು ಇತ್ತೀಚೆಗೆ ನಾಗ್ಸ್ ಸಂದರ್ಶನ ಮಾಡಿದ್ದರು. ಇದೇ ಸಂದರ್ಶನದಲ್ಲಿ ಫಿಲ್ ಸಾಲ್ಟ್ ವಿರಾಟ್ ಕೊಹ್ಲಿ ಮತ್ತು ತಂಡದ ಇತರೆ ಆಟಗಾರರ ಕುರಿತು ಮಾತನಾಡಿದ್ದು, ವಿರಾಟ್ ಕೊಹ್ಲಿ ಸ್ನೇಹಿತರಲ್ಲ.. ಕೇವಲ ಅವರು ಸಹೋದ್ಯೋಗಿ ಎಂದು ಹೇಳಿದ್ದಾರೆ. ಬಳಿಕ ಇದೇ ಸಂದರ್ಶನದಲ್ಲಿ ಸಾಲ್ಟ್ ಆರ್ ಸಿಬಿಯಲ್ಲಿ ನನ್ನ ಜೊತೆ ಆಡುವ ಎಲ್ಲರೂ ನನ್ನ ಸ್ನೇಹಿತರೇ ಎಂದು ಸ್ಪಷ್ಟನೆ ಕೂಡ ನೀಡಿದ್ದಾರೆ.

ಇಷ್ಟಕ್ಕೂ ಫಿಲ್ ಸಾಲ್ಟ್ ಹೇಳಿದ್ದೇನು?

ಮಿಸ್ಟರ್ ನಾಗ್ಸ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಫಿಲ್ ಸಾಲ್ಟ್ ರನ್ನು ನಾಗ್ಸ್ ಹಲವು ಪ್ರಶ್ನೆಗಳನ್ನು ಕೇಳಿದ್ದು, ಈ ಪ್ರಶ್ನೆಗೆ ಸಾಲ್ಟ್ ಕೂಡ ಉತ್ತರ ನೀಡಿದ್ದಾರೆ. ಸಂದರ್ಶನದಲ್ಲಿ ನಾಗ್ಸ್ ಐಪಿಎಲ್ ನಲ್ಲಿ ನಿಮಗ್ಯಾರೂ ಸ್ನೇಹಿತರಿಲ್ಲ ಎಂದು ಹೇಳಿದ್ದಿರಿ. ಹಾಗಿದ್ದರೆ ನಿಮ್ಮೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯುವ ವಿರಾಟ್ ಕೊಹ್ಲಿ ಅವರು ಈಗ ಸ್ನೇಹಿತರಾಗಿದ್ದಾರೆ ಅಲ್ಲವೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಸಾಲ್ಟ್ ಇಲ್ಲ ಸಹ ಆಟಗಾರ ಅಷ್ಟೇ ಎಂದು ಹೇಳಿದರು.

ಅದಕ್ಕೆ ನಾಗ್ಸ್ ಅವರು ನೋಡಿ, ಇದು ಈಗಿನ ದೊಡ್ಡ ಬ್ರೇಕಿಂಗ್ ನ್ಯೂಸ್. ಇನ್ನೊಮ್ಮೆ ಯೋಚಿಸಿ ಹೇಳಿ ಎಂದು ಹೇಳಿದಾಗ ಕ್ರಿಕೆಟ್ ಆಡುವ ಎಲ್ಲರೂ ನನ್ನ ಸ್ನೇಹಿತರು ಎಂದು ಹೇಳುವ ಮೂಲಕ ಮೊದಲ ಹೇಳಿಕೆಯಿಂದ ಉಂಟಾಗಬಲ್ಲ ಡ್ಯಾಮೇಜ್ ಕಂಟ್ರೋಲ್ ಗೆ ಯತ್ನಿಸಿದರು. ಆದರೆ ಅಭಿಮಾನಿಗಳಿಗೆ ಮಾತ್ರ ಅವರು ಮೊದಲು ನೀಡಿದ ಹೇಳಿಕೆ ನೋವು ತಂದಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಆರ್​ಸಿಬಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದು, ವೈರಲ್​​ ಆಗುತ್ತಿದೆ.

ಆರ್ ಸಿಬಿ ಅಭಿಮಾನಿಗಳ ಕುರಿತು ಮೆಚ್ಚುಗೆ

ಇದೇ ವೇಳೆ ಫಿಲ್ ಸಾಲ್ಟ್ ಆರ್ ಸಿಬಿ ಅಭಿಮಾನಿಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದು, ಇಂಥಹ ಅಭಿಮಾನ ಮತ್ತು ಅಭಿಮಾನಿಗಳನ್ನು ನಾನು ಹಿಂದೆಂದೂ ನೋಡಿಯೇ ಇಲ್ಲ ಎಂದಿದ್ದಾರೆ. ಈ ಸಂದರ್ಶನದಲ್ಲಿ ಸಾಕಷ್ಟು ಫನ್ನಿಯಾಗಿ ಸಾಲ್ಟ್​ ಮಾತನಾಡಿದರು. ಕೊನೆಯಲ್ಲಿ ಮಿ. ನಾಗ್ಸ್​ ಕಿರಿಕಿರಿಯನ್ನು ಸಹಿಸಲಾರದೇ ಕೋಪದಿಂದ ಎದ್ದು ಹೋದರು. ಆದರೆ, ಅದು ಕೂಡ ತಮಾಷೆಗೆ ಮಾಡಿದ್ದು ಎಂಬುದು ನೈಜ ಸಂಗತಿ.

ಅಂದಹಾಗೆ ಐಪಿಎಲ್ ಮೆಗಾ ಹರಾಜಿನಲ್ಲಿ ಫಿಲ್ ಸಾಲ್ಟ್ ಅವರನ್ನು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿಯು 11.5 ಕೋಟಿ ರೂ.ಗೆ ಖರೀದಿಸಿತ್ತು. ಈ ಬಾರಿಯ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಮಾತ್ರ ಅನಾರೋಗ್ಯದ ಕಾರಣ ಆಡಿರಲಿಲ್ಲ.

ಸಿಎಸ್ ಕೆ ವಿರುದ್ಧ ಮುಂದಿನ ಪಂದ್ಯ

ಆರ್ ಸಿಬಿಯ ಮುಂದಿನ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 3 ಶನಿವಾರದಂದು ನಡೆಯಲಿದೆ. ಆಗ ಫಿಲ್ ಸಾಲ್ಟ್ ಅವರು ಮತ್ತೆ ವಿರಾಟ್ ಕೊಹ್ಲಿ ಅವರೊಂದಿಗೆ ಆರಂಭಿಕರಾಗಿ ಕಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಆಡಿರುವ 10 ಪಂದ್ಯಗಳಲ್ಲಿ 7 ಗೆಲುವು ಮತ್ತು 3 ಸೋಲುಗಳನ್ನು ಕಂಡಿರುವ ಆರ್ ಸಿಬಿ ಪ್ರಸ್ತುತ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿ ವಿರಾಜಮಾನವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT