ಯುಜುವೇಂದ್ರ ಚಹಲ್ ಹ್ಯಾಟ್ರಿಕ್ ಸಾಧನೆ 
ಕ್ರಿಕೆಟ್

IPL 2025: CSK ವಿರುದ್ಧ Yuzvendra Chahal ಹ್ಯಾಟ್ರಿಕ್; ದಾಖಲೆಗಳ ಸುರಿಮಳೆ, Elite Group ಸೇರ್ಪಡೆ!

2ನೇ ಎಸೆತದಲ್ಲಿ ಧೋನಿ ವಿಕೆಟ್ ಪಡೆದ ಚಹಲ್ ಬಳಿಕ ಓವರ್ ನ 4, 5 ಮತ್ತು ಅಂತಿಮ ಎಸೆತಗಳಲ್ಲಿ ಚಹಲ್ ಸತತ ವಿಕೆಟ್ ಗಳನ್ನು ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು.

ಚೆನ್ನೈ: ಐಪಿಎಲ್ ಟೂರ್ನಿಯ ಇಂದಿನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಸ್ಪಿನ್ನರ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಈ ಮೂಲಕ ದಾಖಲೆಗಳ ಸುರಿಮಳೆಯೇ ಸೃಷ್ಟಿಯಾಗಿದೆ.

ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆ ಮೂಲಕ ಮೊದಲು ಬ್ಯಾಟಿಂಗ್ ಮಾಡಿದ ಚೆ್ನೈ ಸೂಪರ್ ಕಿಂಗ್ಸ್ ತಂಡ 19.2 ಓವರ್ ನಲ್ಲಿ 190 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಪಂಜಾಬ್ ಕಿಂಗ್ಸ್ ಗೆ ಗೆಲ್ಲಲು 191 ರನ್ ಗಳ ಬೃಹತ್ ಗುರಿ ನೀಡಿತು.

ಇದೇ ಪಂದ್ಯದಲ್ಲಿ ಚೆ್ನೈ ಇನ್ನಿಂಗ್ಸ್ ನ ಅಂತಿಮ ಹಂತದಲ್ಲಿ 19ನೇ ಓವರ್ ಮಾಡಿದ ಯುಜುವೇಂದ್ರ ಚಹಲ್ ಅದ್ಭುತ ಬೌಲಿಂಗ್ ಮಾಡಿ ಹ್ಯಾಟ್ರಿಕ್ ಸಹಿತ 4 ವಿಕೆಟ್ ಪಡೆದರು. 2ನೇ ಎಸೆತದಲ್ಲಿ ಧೋನಿ ವಿಕೆಟ್ ಪಡೆದ ಚಹಲ್ ಬಳಿಕ ಓವರ್ ನ 4, 5 ಮತ್ತು ಅಂತಿಮ ಎಸೆತಗಳಲ್ಲಿ ಚಹಲ್ ಸತತ ವಿಕೆಟ್ ಗಳನ್ನು ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು.

ಮೂರನೇ ಎಸೆತದಲ್ಲಿ ದೀಪಕ್ ಹೂಡಾರನ್ನು ಔಟ್ ಮಾಡಿದ ಚಹಲ್, 5ನೇ ಎಸೆತದಲ್ಲಿ ಅನ್ಶುಲ್ ಕಂಬೋಜ್ ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಂತಿಮ ಎಸೆತದಲ್ಲಿ ನೂರ್ ಅಹ್ಮದ್ ಮಾರ್ಕೇ ಜಾನ್ಸನ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಆ ಮೂಲಕ ಚಹಲ್ ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.

ದಾಖಲೆಗಳ ಸುರಿಮಳೆ ಸೃಷ್ಟಿ

ಈ ಹ್ಯಾಟ್ರಿಕ್ ಮೂಲಕ ದಾಖಲೆಗಳ ಸುರಿಮಳೆ ಸೃಷ್ಟಿಯಾಗಿದ್ದು, ಇದು ಐಪಿಎಲ್ ಇತಿಹಾಸದ 23ನೇ ಹ್ಯಾಟ್ರಿಕ್ ಸಾಧನೆಯಾಗಿದ್ದು, ಹಾಲಿ ಟೂರ್ನಿಯಲ್ಲಿ ಯುಜುವೇಂದ್ರ ಚಹಲ್ ರ ಮೊದಲ ಹ್ಯಾಟ್ರಿಕ್ ಆಗಿದೆ. ಅಂತೆಯೇ 2023ರ ಬಳಿಕ ಐಪಿಎಲ್ ನಲ್ಲಿ ಬಂದ ಮೊದಲ ಹ್ಯಾಟ್ರಿಕ್ ಸಾಧನೆಯಾಗಿದ್ದು, ವೈಯುಕ್ತಿಕವಾಗಿ ಚಹಲ್ ಗೆ 2ನೇ ಹ್ಯಾಟ್ರಿಕ್ ಸಾಧನೆಯಾಗಿದೆ.

ಅಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬಂದ ಹ್ಯಾಟ್ರಿಕ್ ಆಗಿದ್ದು, ಅಂತೆಯೇ ಚೆಪಾಕ್ ಕ್ರೀಡಾಂಗಣದಲ್ಲಿ ಬಂದ 2ನೇ ಹ್ಯಾಟ್ರಿಕ್ ವಿಕೆಟ್ ಆಗಿದೆ. ಈ ಹಿಂದೆ ಇದೇ ಚೆಪಾಕ್ ಕ್ರೀಡಾಂಗಣದಲ್ಲಿ 2008ರಲ್ಲಿ ಲಕ್ಷ್ಮಿಪತಿ ಬಾಲಾಜಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

ಐಪಿಎಲ್ ಅತೀ ಹೆಚ್ಚು 4 ವಿಕೆಟ್ ಗೊಂಚಲು

ಇಂದಿನ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಚಹಲ್ ಐಪಿಎಲ್ ನ ಅಪರೂಪದ ದಾಖಲೆಗೆ ಪಾತ್ರರಾಗಿದ್ದು, ಐಪಿಎಲ್ ನಲ್ಲಿ ಅತೀ ಹೆಚ್ಚು ಬಾರಿ 4 ವಿಕೆಟ್ ಗೊಂಚಲು ಪಡೆದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಸುನಿಲ್ ನರೈನ್ (8 ಬಾರಿ), ಲಸಿತ್ ಮಲಿಂಗ (7 ಬಾರಿ) ಮತ್ತು ಕಗಿಸೋ ರಬಾಡಾ (6 ಬಾರಿ) ಇದ್ದಾರೆ.

Most 4-plus wicket hauls in the IPL

  • 9 - Yuzvendra Chahal*

  • 8 - Sunil Narine

  • 7 - Lasith Malinga

  • 6 - Kagiso Rabada

ಒಂದೇ ಓವರ್ ನಲ್ಲಿ 4 ವಿಕೆಟ್, ಐಪಿಎಲ್ ನಲ್ಲಿ 4ನೇ ನಿದರ್ಶನ

ಇನ್ನು ಚಹಲ್ ತಮ್ಮ 3ನೇ ಓವರ್ ನಲ್ಲಿ 4 ವಿಕೆಟ್ ಪಡೆದು ಆ ಮೂಲಕ ಐಪಿಎಲ್ ನಲ್ಲಿ ಒಂದೇ ಓವರ್ ನಲ್ಲಿ 4 ವಿಕೆಟ್ ಪಡೆದ 4ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಈ ಹಿಂದೆ 2013ರಲ್ಲಿ ಪುಣೆ ವಿರುದ್ದ ಅಮಿತ್ ಮಿಶ್ರಾ, 2022ರಲ್ಲಿ ಕೆಕೆಆರ್ ವಿರುದ್ಧ ಯುಜುವೇಂದ್ರ ಚಹಲ್, ಅದೇ ವರ್ಷ ಗುಜರಾತ್ ವಿರುದ್ಧ ಆಂಡ್ರೆ ರಸೆಲ್ ಈ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಗೆ 2ನೇ ಬಾರಿಗೆ ಚಹಲ್ ಸೇರ್ಪಡೆಯಾಗಿದ್ದಾರೆ.

Four wickets in an over for a bowler in IPL

  • Amit Mishra SRH vs PWI Pune 2013

  • Yuzvendra Chahal RR vs KKR Brabourne 2022

  • Andre Russell KKR vs GT Navi Mumbai 2022

  • Yuzvendra Chahal PBKS vs CSK Chennai 2025

ಐಪಿಎಲ್ ನಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್, Elite Group ಸೇರ್ಪಡೆ!

ಇಂದಿನ ಪಂದ್ಯದ ಹ್ಯಾಟ್ರಿಕ್ ಮೂಲಕ ಚಹಲ್ ಐಪಿಎಲ್ ನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ 3ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಅಮಿತ್ ಮಿಶ್ರಾ 3 ಬಾರಿ(2008, 2011 & 2013ರಲ್ಲಿ) ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಬಳಿಕ ಯುವರಾಜ್ ಸಿಂಗ್ 2009ರಲ್ಲಿ 2 ಬಾರಿ ಈ ಸಾಧನೆಗೈದಿದ್ದರು. ಇದೀಗ ಚಹಲ್ 2022 ಮತ್ತು 2025ರಲ್ಲಿ ಈ ಸಾಧನೆ ಮಾಡಿ Elite Group ಸೇರ್ಪಡೆಯಾಗಿದ್ದಾರೆ.

Multiple hat-tricks in IPL

  • Amit Mishara X 3 (2008, 2011 & 2013)

  • Yuvraj Singh X 2 (2009)

  • Yuzvendra Chahal X 2 (2022, 2025)

ಪಂಜಾಬ್ ಪರ ಹ್ಯಾಟ್ರಿಕ್

ಇನ್ನು ಇಂದಿನ ಹ್ಯಾಟ್ರಿಕ್ ನೊಂದಿಗೆ ಚಹಲ್ ಪಂಜಾಬ್ ಪರ ಹ್ಯಾಟ್ರಿಕ್ ಸಾಧನೆಗೈದ 4ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಯುವರಾಜ್ ಸಿಂಗ್ 2 ಬಾರಿ ಪಂಜಾಬ್ ಪರ ಹ್ಯಾಟ್ರಿಕ್ ಸಾಧನೆ ಮಾಡಿದ್ದರೆ, ಅಮಿತ್ ಮಿಶ್ರಾ, ಸ್ಯಾಮ್ ಕರನ್ ಮತ್ತು ಚಹಲ್ ತಲಾ 1 ಬಾರಿ ಪಂಜಾಬ್ ಪರ ಹ್ಯಾಟ್ರಿಕ್ ಸಾಧನೆಗೈದಿದ್ದಾರೆ.

Hat-trick for PBKS

  • 2 - Yuvraj Singh

  • 1 - Amit MIishra

  • 1 - Sam Curran

  • 1 - Yuzvendra Chahal*

ಅಂತೆಯೇ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಖಲೀಲ್ ಅಹ್ಮದ್ ಕೂಡ ಒಂದು ದಾಖಲೆಗೆ ಪಾತ್ರರಾಗಿದ್ದು, ಹಾಲಿ ಐಪಿಎಲ್ ಟೂರ್ನಿಯಲ್ಲಿ ಪವರ್ ಪ್ಲೇನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇಂದು ಪಂಜಾಬ್ ವಿರುದ್ದ ಖಲೀಲ್ 3 ಓವರ್ ಎಸೆದು 1 ಮೇಡನ್ ಸಹಿತ 23 ರನ್ ನೀಡಿ 1 ವಿಕೆಟ್ ಪಡೆದರು. ಅಂತೆಯೇ ಪವರ್ ಪ್ಲೇ ನಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 9ಕ್ಕೆ ಏರಿಕೆ ಮಾಡಿಕೊಂಡರು. ಈ ಪಟ್ಟಿಯಲ್ಲಿ ಮಹಮದ್ ಸಿರಾಜ್ 2ನೇ ಸ್ಥಾನದಲ್ಲಿದ್ದು ಅವರು 8 ವಿಕೆಟ್ ಪಡೆದಿದ್ದಾರೆ. 7 ವಿಕೆಟ್ ನೊಂದಿಗೆ ಜಾಶ್ ಹೇಜಲ್ ವುಡ್ 3ನೇ ಸ್ಥಾನದಲ್ಲಿದ್ದಾರೆ.

Most wickets in the powerplay in IPL 2025

  • 9 - Khaleel Ahmed (ER 8.59)*

  • 8 - Mohammed Siraj (ER 8.65)

  • 7 - Josh Hazlewood (ER 7.22)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT