ರೋಹಿತ್ ಶರ್ಮಾ - ವಿರಾಟ್ ಕೊಹ್ಲಿ 
ಕ್ರಿಕೆಟ್

ಏಕದಿನ ವಿಶ್ವಕಪ್ ಬಗ್ಗೆ BCCI ಅಂತಿಮ ನಿರ್ಧಾರ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಹಿನ್ನಡೆ?

ವಿರಾಟ್ ಅಥವಾ ರೋಹಿತ್ ಇಬ್ಬರೂ 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಿಲ್ಲ.

ಭಾರತೀಯ ಕ್ರಿಕೆಟ್‌ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ಇತ್ತೀಚೆಗೆ ಟಿ20 ಮತ್ತು ಟೆಸ್ಟ್ ಎರಡಕ್ಕೂ ನಿವೃತ್ತಿ ಘೋಷಿಸಿದ್ದು, ಏಕದಿನ ಕ್ರಿಕೆಟ್ ಸ್ವರೂಪದಲ್ಲಿ ಸದ್ಯ ಸಕ್ರಿಯರಾಗಿದ್ದಾರೆ. ರೋಹಿತ್ ಶರ್ಮಾ ಇನ್ನೂ 50 ಓವರ್‌ಗಳ ತಂಡದ ನಾಯಕನಾಗಿ ಉಳಿದಿದ್ದಾರೆ. ಏಕದಿನ ಸ್ವರೂಪಕ್ಕೆ ಬಂದಾಗ, 2027ರ ವಿಶ್ವಕಪ್ ಮೇಲೆ ಉಭಯ ಆಟಗಾರರ ದೃಷ್ಟಿ ನೆಟ್ಟಿರುವಂತೆ ತೋರುತ್ತದೆಯಾದರೂ, ಈ ಜೋಡಿ ತಮ್ಮ ಭವಿಷ್ಯದ ಯೋಜನೆಯನ್ನು ಅಧಿಕೃತವಾಗಿ ತಿಳಿಸಿಲ್ಲ. ಆದರೆ, ವರದಿ ಪ್ರಕಾರ, ವಿರಾಟ್ ಮತ್ತು ರೋಹಿತ್ ಈ ಸ್ವರೂಪದಲ್ಲಿ ಯಶಸ್ಸಿನ ಹೊರತಾಗಿಯೂ, ಮುಂದಿನ ಎರಡು ವರ್ಷಗಳಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಆಡುವುದು ಸುಲಭವಲ್ಲ.

ದೈನಿಕ್ ಜಾಗರಣ್ ವರದಿ ಪ್ರಕಾರ, ವಿರಾಟ್ ಅಥವಾ ರೋಹಿತ್ ಇಬ್ಬರೂ 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಿಲ್ಲ. ಇಬ್ಬರೂ ಟಿ20 ಮತ್ತು ಟೆಸ್ಟ್ ಕ್ರಿಕೆಟ್ ಆಡದ ಕಾರಣ, ಮುಂಬರುವ ವರ್ಷಗಳಲ್ಲಿ ಪಂದ್ಯದ ಸಮಯವೂ ಸೀಮಿತವಾಗಲಿದೆ. ಆದ್ದರಿಂದ ಈ ಪರಿಸ್ಥಿತಿಯು ಆಯ್ಕೆ ಸಮಿತಿ ಮತ್ತು ಬಿಸಿಸಿಐನ ಉನ್ನತ ಅಧಿಕಾರಿಗಳ ಮನಸ್ಸಿನಲ್ಲಿ ದೊಡ್ಡ ಅನುಮಾನವನ್ನು ಹುಟ್ಟುಹಾಕುತ್ತದೆ.

ಆದಾಗ್ಯೂ, ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಏಕದಿನ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಸ್ಪರ್ಧೆಯಲ್ಲಿ ಉಳಿಯಬೇಕಾದರೆ, ಈ ವರ್ಷದ ಡಿಸೆಂಬರ್‌ನಲ್ಲಿ ಪ್ರಾರಂಭವಾಗುವ ದೇಶೀಯ ಏಕದಿನ ಪಂದ್ಯವಾದ ವಿಜಯ್ ಹಜಾರೆ ಟ್ರೋಫಿಯನ್ನು ಆಡಬೇಕಾಗುತ್ತದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾಗವಹಿಸದೆ, ಅವರಿಗೆ ಅವಕಾಶ ಬಾಗಿಲು ತೆರೆಯುವ ಸಾಧ್ಯತೆ ಕಡಿಮೆ ಎಂದು ವರದಿ ಹೇಳಿದೆ.

'2027ರ ಏಕದಿನ ವಿಶ್ವಕಪ್‌ಗಾಗಿ ನಮ್ಮ ಯೋಜನೆಗಳಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊಂದಿಕೊಳ್ಳುವುದಿಲ್ಲ' ಎಂದು ತಂಡದ ಆಡಳಿತ ಮಂಡಳಿಯ ಮೂಲವೊಂದು ತಿಳಿಸಿರುವುದಾಗಿ ವರದಿಯಾಗಿದೆ. ಇಂಗ್ಲೆಂಡ್ ಪ್ರವಾಸದ ಭಾಗವಾಗಲು ಈ ಜೋಡಿ ಬಯಸಿದ್ದರು. ಆದರೆ, ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇಲ್ಲ ಎಂಬುದು ತಿಳಿದ ಬಳಿಕವೇ ಅವರು ಈ ಸ್ವರೂಪದಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದರು ಎಂದು ವರದಿ ತಿಳಿಸಿದೆ.

ಭಾರತದ ಮುಂದಿನ ಏಕದಿನ ಪಂದ್ಯ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದ್ದು, ಈ ಸರಣಿಯು ಈ ಐಕಾನಿಕ್ ಜೋಡಿಯ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆಯುವ ಸಾಧ್ಯತೆ ಇದೆ. ಏಕೆಂದರೆ ಈ ಹಂತದಲ್ಲಿ ದೇಶೀಯ ಕ್ರಿಕೆಟ್‌ಗೆ ಮರಳುವುದು ತುಂಬಾ ಅಸಂಭವವಾಗಿದೆ ಎಂದು ವರದಿ ಹೇಳುತ್ತದೆ.

ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಮುಕ್ತಾಯಗೊಂಡ ಸರಣಿಯಲ್ಲಿ ಭಾರತದ ಟೆಸ್ಟ್ ನಾಯಕ ಶುಭಮನ್ ಗಿಲ್ ಅವರ ಯಶಸ್ಸು, ಅವರ ದೀರ್ಘಕಾಲೀನ ನಾಯಕನ ಮೇಲಿನ ಆಯ್ಕೆ ಸಮಿತಿಯ ನಂಬಿಕೆಯನ್ನು ಬಲಪಡಿಸಿದೆ. ಗಿಲ್ ಅವರನ್ನು ದೀರ್ಘಾವಧಿಯಲ್ಲಿ ಭಾರತದ ಎಲ್ಲ ಸ್ವರೂಪದ ನಾಯಕ ಎಂದು ನೋಡಲು ಬಯಸುವ ಅನೇಕರಿದ್ದಾರೆ. ತಂಡದಲ್ಲಿ ಅನೇಕ ಯುವಕರು ತಮ್ಮ ಛಾಪು ಮೂಡಿಸುತ್ತಿರುವುದರಿಂದ, ಆಯ್ಕೆದಾರರು 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗಾಗಿ ಹೊಸ ಪ್ರತಿಭೆಗಳೊಂದಿಗೆ ಮುಂದುವರಿಯಲು ನಿರ್ಧರಿಸಬಹುದು.

ಟಿ20ಐ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಈಗಾಗಲೇ ಯಶಸ್ವಿಯಾಗಿ ತಂಡವನ್ನು ರೂಪಿಸಲಾಗಿದ್ದು, ಏಕದಿನ ಮಾದರಿಯಲ್ಲೂ ಅದೇ ರೀತಿ ಆಗುವ ನಿರೀಕ್ಷೆಯಿದೆ. ಈ ಬೆಳವಣಿಗೆಗಳು ಕೊಹ್ಲಿ ಮತ್ತು ರೋಹಿತ್ ಅವರನ್ನು ಅನಿಶ್ಚಿತ ಪರಿಸ್ಥಿತಿಗೆ ದೂಡುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bihar: 'ಅಂದು ಇದೇ ಕೊಳಕು ಕಿಡ್ನಿ ನಿಮ್ಮ ಪ್ರಾಣ ಉಳಿಸಿತು, ಇಂದು ಚಪ್ಪಲಿಯಲ್ಲಿ ಥಳಿಸುತ್ತಿದ್ದಾರೆ'..: ಲಾಲು ಪ್ರಸಾದ್ ಪುತ್ರಿ ರೋಹಿಣಿ ಆಚಾರ್ಯ

ದೆಹಲಿ ಸ್ಫೋಟಕ್ಕೆ 'Mother of Satan' ಬಾಂಬ್ ಬಳಕೆ ಸಾಧ್ಯತೆ: ಇದು ಎಷ್ಟು 'ವಿನಾಶಕಾರಿ' ತನಿಖಾಧಿಕಾರಿಗಳು ಹೇಳಿದ್ದೇನು?

Cricket: ಭಾರತ vs ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ, 3 ದಾಖಲೆಗಳ ನಿರ್ಮಾಣ

India vs South Africa: 93 ವರ್ಷಗಳ ಇತಿಹಾಸದಲ್ಲೇ ಹೀನಾಯ ದಾಖಲೆ ಬರೆದ ಭಾರತ!

'ಶ್ರೀರಾಮನನ್ನು ಎಂದಿಗೂ ಇಷ್ಟಪಟ್ಟಿಲ್ಲ': Varanasi ಟೈಟಲ್ ಘೋಷಣೆ ಬೆನ್ನಲ್ಲೇ ರಾಜಮೌಳಿ ಟ್ವೀಟ್ ವೈರಲ್!

SCROLL FOR NEXT