ಎಂಎಸ್ ಧೋನಿ - ವೀರೇಂದ್ರ ಸೆಹ್ವಾಗ್ 
ಕ್ರಿಕೆಟ್

'ಎಂಎಸ್ ಧೋನಿ ನನ್ನನ್ನು ಕೈಬಿಟ್ಟರು...': ಏಕದಿನ ಕ್ರಿಕೆಟ್‌ಗೆ ಬೇಗ ನಿವೃತ್ತಿ ಘೋಷಿಸುವ ನಿರ್ಧಾರದ ಬಗ್ಗೆ ವೀರೇಂದ್ರ ಸೆಹ್ವಾಗ್

ಸೆಹ್ವಾಗ್ 1999 ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು ಮತ್ತು 2001ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು.

ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಂದ ಬೇಗನೆ ನಿವೃತ್ತಿ ಹೊಂದಿದ ಬಗ್ಗೆ ಮಾತನಾಡಿದ್ದಾರೆ. 2007-08ರಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಏಕದಿನ ತ್ರಿಕೋನ ಸರಣಿಯಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ನನ್ನನ್ನು ತಂಡದಿಂದ ಕೈಬಿಡಲಾಯಿತು ಮತ್ತು ಆಗ ನಾನು ವೃತ್ತಿಜೀವನಕ್ಕೆ ವಿದಾಯ ಹೇಳುವ ಬಗ್ಗೆ ಯೋಚಿಸಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಸಲಹೆ ನನಗೆ ಮತ್ತೆ ನಂಬಿಕೆಯನ್ನು ಮರಳಿ ಪಡೆಯಲು ಮತ್ತು ನಂತರ ಭಾರತಕ್ಕಾಗಿ ಆಡಲು ಸಹಾಯ ಮಾಡಿತು ಎಂದು ಸೆಹ್ವಾಗ್ ಹೇಳಿದರು.

'2007-08ರ ಸರಣಿಯಲ್ಲಿ ನಾವು ಆಸ್ಟ್ರೇಲಿಯಾದಲ್ಲಿದ್ದಾಗ, ನಾನು ಕಾಮನ್‌ವೆಲ್ತ್ ಬ್ಯಾಂಕ್ ಸರಣಿಯ ಮೊದಲ ಮೂರು ಪಂದ್ಯಗಳನ್ನು ಆಡಿದ್ದೆ ಮತ್ತು ನಂತರ ಎಂಎಸ್ ಧೋನಿ ನನ್ನನ್ನು ತಂಡದಿಂದ ಕೈಬಿಟ್ಟರು. ಆ ನಂತರ ಸ್ವಲ್ಪ ಸಮಯದವರೆಗೆ ನನ್ನನ್ನು ಆಯ್ಕೆ ಮಾಡಲಿಲ್ಲ. ನಂತರ ನಾನು ಪ್ಲೇಯಿಂಗ್ XI ನ ಭಾಗವಾಗಲು ಸಾಧ್ಯವಾಗದಿದ್ದರೆ, ನಾನು ODI ಕ್ರಿಕೆಟ್ ಆಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನನಗೆ ಅನಿಸಿತು' ಎಂದು ಪದಮ್‌ಜೀತ್ ಸೆಹ್ರಾವತ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಸೆಹ್ವಾಗ್ ಹೇಳಿದರು.

'ನಂತರ ನಾನು ಸಚಿನ್ ಬಳಿ ಹೋಗಿ, 'ನಾನು ಏಕದಿನ ಪಂದ್ಯಗಳಿಂದ ನಿವೃತ್ತಿ ಹೊಂದುವ ಬಗ್ಗೆ ಯೋಚಿಸುತ್ತಿದ್ದೇನೆ' ಎಂದು ಹೇಳಿದೆ. ಅವರು, ಬೇಡ, 'ನಾನು 1999-2000ದಲ್ಲಿ ಇದೇ ರೀತಿಯ ಹಂತವನ್ನು ಎದುರಿಸಿದೆ. ಅಲ್ಲಿ ನಾನು ಕ್ರಿಕೆಟ್ ಬಿಡಬೇಕೆಂದು ಭಾವಿಸಿದೆ. ಆದರೆ, ಆ ಹಂತ ಬಂದು ಹೋಯಿತು. ಆದ್ದರಿಂದ, ನೀವು ಕಷ್ಟದ ಹಾದಿಯನ್ನು ಎದುರಿಸುತ್ತಿದ್ದೀರಿ. ಆದರೆ, ಅದು ಹಾದುಹೋಗುತ್ತದೆ. ನೀವು ಭಾವನಾತ್ಮಕವಾಗಿದ್ದಾಗ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮಗೆ ಸ್ವಲ್ಪ ಸಮಯ ನೀಡಿ ಮತ್ತು 1-2 ಸರಣಿಗಳನ್ನು ಬಿಡಿ ಮತ್ತು ನಂತರ ನಿರ್ಧಾರ ತೆಗೆದುಕೊಳ್ಳಿ ಎಂದರು. ಆ ಸರಣಿ ಮುಗಿದಾಗ, ನಾನು ಮುಂದಿನ ಸರಣಿಯಲ್ಲಿ ಆಡಿದೆ ಮತ್ತು ಬಹಳಷ್ಟು ರನ್‌ಗಳನ್ನು ಮಾಡಿದೆ. ನಾನು 2011ರ ವಿಶ್ವಕಪ್ ಆಡಿದೆ ಮತ್ತು ನಾವು ವಿಶ್ವಕಪ್ ಅನ್ನು ಸಹ ಗೆದ್ದಿದ್ದೇವೆ' ಎಂದು ಹೇಳಿದರು.

ಸೆಹ್ವಾಗ್ 1999 ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು ಮತ್ತು 2001ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ತ್ರಿಶತಕಗಳನ್ನು ಗಳಿಸಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಅವರಾಗಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್ ಏಕದಿನ ಮಾದರಿಯಲ್ಲಿ ದ್ವಿಶತಕ ಕೂಡ ದಾಖಲಿಸಿದ್ದಾರೆ. 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅವರು 219 ರನ್ ಗಳಿಸಿದ್ದಾರೆ. ಸೆಹ್ವಾಗ್ ದೇಶವನ್ನು ಪ್ರತಿನಿಧಿಸಿ 104 ಟೆಸ್ಟ್‌ಗಳಲ್ಲಿ 49.34 ಸರಾಸರಿಯಲ್ಲಿ 8,586 ರನ್ ಗಳಿಸಿದ್ದಾರೆ. ಅವರು ಆಟದ ದೀರ್ಘ ಸ್ವರೂಪದಲ್ಲಿ 23 ಶತಕಗಳು ಮತ್ತು 32 ಅರ್ಧಶತಕಗಳನ್ನು ಬಾರಿಸಿದ್ದಾರೆ.

2010 ರಲ್ಲಿ ಸೆಹ್ವಾಗ್ ಅವರನ್ನು ಐಸಿಸಿ ವರ್ಷದ ಟೆಸ್ಟ್ ಆಟಗಾರ ಎಂದು ಆಯ್ಕೆ ಮಾಡಿತು. ಏಕೆಂದರೆ, ಅವರು 10 ಟೆಸ್ಟ್ ಪಂದ್ಯಗಳಲ್ಲಿ ಆರು ಶತಕಗಳು ಸೇರಿದಂತೆ 1,282 ರನ್ ಗಳಿಸಿದ್ದಾರೆ.

251 ಏಕದಿನ ಪಂದ್ಯಗಳಲ್ಲಿ, ಸೆಹ್ವಾಗ್ 104 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 8,273 ರನ್ ಗಳಿಸಿದ್ದಾರೆ. ಮಾಜಿ ಆರಂಭಿಕ ಆಟಗಾರ 15 ಶತಕಗಳು ಮತ್ತು 38 ಅರ್ಧಶತಕಗಳನ್ನು ಬಾರಿಸಿದ್ದಾರೆ. ಸೆಹ್ವಾಗ್ 2007 ರ ವಿಶ್ವ ಟಿ 20 ಮತ್ತು 2011 ರ ವಿಶ್ವಕಪ್ ವಿಜೇತ ತಂಡಗಳ ಭಾಗವಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!

SCROLL FOR NEXT