ಸಾಂದರ್ಭಿಕ ಚಿತ್ರ  
ಕ್ರಿಕೆಟ್

ಗೇಮಿಂಗ್ ನಿಷೇಧ ನಂತರ ಹಿಂದೆ ಸರಿದ ಡ್ರೀಮ್ 11: ಜೆರ್ಸಿ ಪ್ರಾಯೋಜಕತ್ವವಿಲ್ಲದೆ ಭಾರತ ಏಷ್ಯಾ ಕಪ್ 2025 ಪ್ರವೇಶ?

ಫ್ಯಾಂಟಸಿ ಕ್ರೀಡಾ ದೈತ್ಯ ಡ್ರೀಮ್ 11 ಇನ್ನು ಮುಂದೆ ಭಾರತೀಯ ಪುರುಷರ ಕ್ರಿಕೆಟ್ ತಂಡವನ್ನು ಪ್ರಾಯೋಜಿಸುವುದಿಲ್ಲ ಎಂದು ಎನ್‌ಡಿಟಿವಿ ವರದಿ ಹೇಳುತ್ತದೆ.

ಯುಎಇಯಲ್ಲಿ ನಡೆಯಲಿರುವ ಏಷ್ಯಾ ಕಪ್ 2025 ರಲ್ಲಿ ಭಾರತ ಕಣಕ್ಕಿಳಿಯಲು ಸಜ್ಜಾಗಿದ್ದು, ಆತಿಥೇಯರ ವಿರುದ್ಧ ಅಭಿಯಾನ ಆರಂಭಿಸಲಿದೆ. ಆದರೆ ತಮ್ಮ ಆರಂಭಿಕ ಪಂದ್ಯಕ್ಕೆ ಕೇವಲ 18 ದಿನಗಳು ಬಾಕಿ ಇರುವಾಗ, ತಂಡವು ದೊಡ್ಡ ಹಿನ್ನಡೆಯನ್ನು ಎದುರಿಸಿದೆ. ವರದಿಗಳ ಪ್ರಕಾರ ಭಾರತ ತಂಡ ಜೆರ್ಸಿ ಪ್ರಾಯೋಜಕರಿಲ್ಲದೆ ಪಂದ್ಯಾವಳಿಗೆ ಪ್ರವೇಶಿಸಬಹುದು.

ಫ್ಯಾಂಟಸಿ ಕ್ರೀಡಾ ದೈತ್ಯ ಡ್ರೀಮ್ 11 ಇನ್ನು ಮುಂದೆ ಭಾರತೀಯ ಪುರುಷರ ಕ್ರಿಕೆಟ್ ತಂಡವನ್ನು ಪ್ರಾಯೋಜಿಸುವುದಿಲ್ಲ ಎಂದು ಎನ್‌ಡಿಟಿವಿ ವರದಿ ಹೇಳುತ್ತದೆ. ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸುವ 'ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025' ನ್ನು ಸಂಸತ್ತಿನಲ್ಲಿ ಮೊನ್ನೆ ಅಂಗೀಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಇಲ್ಲಿಯವರೆಗೆ, ಬಿಸಿಸಿಐ ಅಥವಾ ಡ್ರೀಮ್ 11 ಈ ವಿಷಯದ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಮಂಡಳಿಯು ದೇಶದ ಕಾನೂನುಗಳನ್ನು ಅನುಸರಿಸುತ್ತದೆ ಎಂದು ಹೇಳಿದ್ದಾರೆ.

ಅನುಮತಿ ಸಿಗದಿದ್ದರೆ ನಾವು ಏನನ್ನೂ ಮಾಡುವುದಿಲ್ಲ. ಕೇಂದ್ರ ಸರ್ಕಾರವು ರೂಪಿಸಿದ ದೇಶದ ಪ್ರತಿಯೊಂದು ನೀತಿಯನ್ನು ಬಿಸಿಸಿಐ ಅನುಸರಿಸುತ್ತದೆ ಎಂದು ದೇವಜಿತ್ ಸೈಕಿಯಾ ಹೇಳಿದ್ದಾರೆ.

ಬಿಸಿಸಿಐ ಶೀಘ್ರದಲ್ಲೇ ಜೆರ್ಸಿ ಪ್ರಾಯೋಜಕತ್ವಕ್ಕಾಗಿ ಹೊಸ ಬಿಡ್‌ಗಳನ್ನು ಆಹ್ವಾನಿಸುವ ಸಾಧ್ಯತೆಯಿದೆ ಎಂದು ವರದಿ ಹೇಳುತ್ತದೆ. ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗುವ ಏಷ್ಯಾ ಕಪ್ 2025 ರ ಮೊದಲು ಪ್ರಾಯೋಜಕರು ಸಿಗದಿದ್ದರೆ, ಮೆನ್ ಇನ್ ಬ್ಲೂ ಪ್ರಮುಖ ಪ್ರಾಯೋಜಕರಿಲ್ಲದೆ ಪಂದ್ಯ ಆಡಬಹುದು.

ಡ್ರೀಮ್ 11 ಲೋಗೋಗಳನ್ನು ಹೊಂದಿರುವ ಏಷ್ಯಾ ಕಪ್ ಜೆರ್ಸಿಗಳನ್ನು ಈಗಾಗಲೇ ಮುದ್ರಿಸಲಾಗಿದ್ದರೂ, ಅದನ್ನು ಕಾರ್ಯಕ್ರಮದಲ್ಲಿ ಬಳಸಲಾಗುವುದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT