ಭಾರತೀಯ ಕ್ರಿಕೆಟ್ ತಂಡದ ದಂತಕಥೆ ವಿರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್, ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಇಬ್ಬರಿಗಿಂತ ಸದ್ಯದ ಟೆಸ್ಟ್ ನಾಯಕ ಶುಭಮನ್ ಗಿಲ್ ಉತ್ತಮ ಎಂದಿದ್ದಾರೆ. ಸದ್ಯ ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್) 2025 ರಲ್ಲಿ ಸೆಂಟ್ರಲ್ ದೆಹಲಿ ಕಿಂಗ್ಸ್‌ನ ಭಾಗವಾಗಿರುವ ಅವರನ್ನು ಹರಾಜಿನಲ್ಲಿ 8 ಲಕ್ಷ ರೂ.ಗಳಿಗೆ ಖರೀದಿಸಲಾಯಿತು.
ಇನ್‌ಸೈಡ್‌ಸ್ಪೋರ್ಟ್‌ನೊಂದಿಗಿನ ಇತ್ತೀಚಿನ ಸಂವಾದದ ಸಮಯದಲ್ಲಿ, 17 ವರ್ಷದ ಈ ಆಟಗಾರನನ್ನು ಕ್ರಿಕೆಟಿಗರ ನಡುವೆ ಆಯ್ಕೆ ಮಾಡಲು ಕೇಳಲಾಯಿತು. ಆಗ ಗಿಲ್ ಅವರನ್ನು ಆಯ್ಕೆ ಮಾಡಿಕೊಂಡರಾದರೂ, ವಿರಾಟ್ ಕೊಹ್ಲಿ ಮುಂದೆ ಅವರನ್ನು ಕೈಬಿಟ್ಟರು.
ಇದಕ್ಕೂ ಮೊದಲು, ವೀರೇಂದ್ರ ಸೆಹ್ವಾಗ್ ಸೂರ್ಯಕುಮಾರ್ ಯಾದವ್ ಅವರ "ನಿರ್ಭೀತ ನಾಯಕತ್ವ"ದಲ್ಲಿ ಮುಂಬರುವ ಏಷ್ಯಾ ಕಪ್ ಗೆಲ್ಲಲು ಪ್ರಸ್ತುತ ಟಿ20ಐ ತಂಡವನ್ನು ಬೆಂಬಲಿಸಿದ್ದರು. ಈ ಕಾಂಟಿನೆಂಟಲ್ ಟೂರ್ನಮೆಂಟ್ ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ನಡೆಯಲಿದೆ.
ಭಾರತ, ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ, ಓಮನ್ ಮತ್ತು ಆತಿಥೇಯ ಯುಎಇ ಜೊತೆ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ. ಗ್ರೂಪ್ ಬಿಯಲ್ಲಿ ಶ್ರೀಲಂಕಾ, ಹಾಂಗ್ ಕಾಂಗ್, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಸೇರಿವೆ.
'ಈ ಭಾರತೀಯ ತಂಡವು ಯುವ ಮತ್ತು ಅನುಭವದ ಸರಿಯಾದ ಮಿಶ್ರಣವನ್ನು ಹೊಂದಿದೆ. ಸೂರ್ಯ ಅವರ ನಿರ್ಭೀತ ನಾಯಕತ್ವದಲ್ಲಿ, ಅವರು ಮತ್ತೊಮ್ಮೆ ಏಷ್ಯಾದಲ್ಲಿ ಪ್ರಾಬಲ್ಯ ಸಾಧಿಸಬಹುದು. ಅವರ ಆಕ್ರಮಣಕಾರಿ ಮನಸ್ಥಿತಿ T20 ಸ್ವರೂಪಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಮತ್ತು ತಂಡವು ಅದೇ ಉದ್ದೇಶದಿಂದ ಆಡಿದರೆ, ಭಾರತವು ಟ್ರೋಫಿಯನ್ನು ಎತ್ತಿಹಿಡಿಯುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ' ಎಂದು ಸೆಹ್ವಾಗ್ ಹೇಳಿದರು.
ಮುಂಬರುವ ಟೂರ್ನಮೆಂಟ್‌ಗಾಗಿ ಪ್ರಸಾರಕ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನ 'ರಾಗ್‌ರಾಗ್‌ಮೇ ಭಾರತ್' ಅಭಿಯಾನದ ಭಾಗವಾಗಿ ಅವರು ಮಾತನಾಡುತ್ತಿದ್ದರು.
ಎಲ್ಲ ಪಂದ್ಯಗಳು ದುಬೈ ಮತ್ತು ಅಬುಧಾಬಿ ಎಂಬ ಎರಡು ಸ್ಥಳಗಳಲ್ಲಿ ನಡೆಯಲಿವೆ.