
ದೆಹಲಿಯಲ್ಲಿ ಜನಿಸಿದ ಯಾರಿಗಾದರೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅಚ್ಚುಮೆಚ್ಚಲ್ಲ ಎಂದು ಊಹಿಸಿಕೊಳ್ಳುವುದು ಕಷ್ಟ. ದಂತಕಥೆ ವೀರೇಂದ್ರ ಸೆಹ್ವಾಗ್ ಅವರ ಮಗ ಕೂಡ ಇದಕ್ಕೆ ಹೊರತಲ್ಲ. ಆರ್ಯವೀರ್ ಸೆಹ್ವಾಗ್, ದೇಶಾದ್ಯಂತದ ಪ್ರತಿಯೊಬ್ಬ ಕ್ರಿಕೆಟಿಗರಿಗೂ ಮಾದರಿಯಾಗಿರುವ ಕೊಹ್ಲಿಯ ದೀರ್ಘಕಾಲದ ಅಭಿಮಾನಿ. ಆರ್ಯವೀರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸೂಪರ್‌ಸ್ಟಾರ್‌ನೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ಬಯಸುತ್ತಾರೆ.
ತಂದೆ ವೀರೇಂದ್ರ ಸೆಹ್ವಾಗ್ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳನ್ನು ಪ್ರತಿನಿಧಿಸಿದ್ದರೂ, ಆರ್ಯವೀರ್ ತಮ್ಮ ಸ್ಪಷ್ಟ ಗುರಿಗಳನ್ನು ಹೊಂದಿದ್ದಾರೆ. ಇನ್‌ಸೈಡ್‌ಸ್ಪೋರ್ಟ್‌ನೊಂದಿಗಿನ ವಿಶೇಷ ಸಂಭಾಷಣೆಯಲ್ಲಿ ಯುವ ಪ್ರತಿಭೆ, ಐಪಿಎಲ್‌ನಲ್ಲಿ ವಿಶೇಷವಾಗಿ ಐಪಿಎಲ್ 2025 ವಿಜೇತ ತಂಡಕ್ಕಾಗಿ ಆಡುವ ಬಯಕೆಯನ್ನು ಬಹಿರಂಗಪಡಿಸಿದರು.
'ವಿರಾಟ್ ಕೊಹ್ಲಿ ನನ್ನ ಯುಗದ ಶ್ರೇಷ್ಠ ಬ್ಯಾಟ್ಸ್‌ಮನ್. ಹೌದು, ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ನನ್ನ ಕನಸು. ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಕ್ಕರೆ, ಖಂಡಿತ ನಾನು ಅವರೊಂದಿಗೆ (ಕೊಹ್ಲಿ) ಆಡುತ್ತೇನೆ' ಎನ್ನುತ್ತಾರೆ ಆರ್ಯವೀರ್.
ಭಾರತದ ಅತ್ಯಂತ ಸ್ಫೋಟಕ ಆರಂಭಿಕ ಆಟಗಾರರಲ್ಲಿ ಒಬ್ಬರ ಮಗ ಆರ್ಯವೀರ್ ಸೆಹ್ವಾಗ್ ಎಂಬ ಹೆಸರು ಮೊದಲು ದೆಹಲಿ ಪ್ರೀಮಿಯರ್ ಲೀಗ್ (DPL) 2025ರ ಹರಾಜಿನ ಸಂದರ್ಭದಲ್ಲಿ ಸುದ್ದಿಯಾಯಿತು.
3 ಲಕ್ಷ ರೂ. ಮೂಲ ಬೆಲೆಯೊಂದಿಗೆ ಬಿ ವಿಭಾಗದಲ್ಲಿ ಸ್ಥಾನ ಪಡೆದಿದ್ದ ಅವರನ್ನು ಅಂತಿಮವಾಗಿ ಸೌತ್ ಡೆಲ್ಲಿ ಸೂಪರ್‌ಸ್ಟಾರ್ಜ್ ಮತ್ತು ವೆಸ್ಟ್ ಡೆಲ್ಲಿ ಲಯನ್ಸ್ ತಂಡಗಳ ಭಾರಿ ಪೈಪೋಟಿಯ ನಂತರ ಸೆಂಟ್ರಲ್ ಡೆಲ್ಲಿ ಕಿಂಗ್ಸ್ 9 ಲಕ್ಷ ರೂ.ಗೆ ಖರೀದಿಸಿತು. ಅವರಿಗೆ ಇನ್ನೂ ಯಾವುದೇ ಪಂದ್ಯಗಳಲ್ಲಿ ಆಡಲು ಅವಕಾಶ ಸಿಕ್ಕಿಲ್ಲವಾದರೂ, ಯಶ್ ಧುಲ್ ದುಲೀಪ್ ಟ್ರೋಫಿಗೆ ತಯಾರಿ ನಡೆಸಲು ತೆರಳಿದ ನಂತರ CDK ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಳ್ಳಬಹುದು.
ಆರ್ಯವೀರ್ ತಮ್ಮ ಡಬಲ್ ಸೆಂಚುರಿಯಿಂದಲೇ ಸಾಕಷ್ಟು ಪ್ರಚಾರ ಪಡೆದುಕೊಂಡಿದ್ದಾರೆ. ಕೂಚ್ ಬೆಹಾರ್ ಟ್ರೋಫಿಯಲ್ಲಿ ದೆಹಲಿ U-19 ತಂಡವನ್ನು ಪ್ರತಿನಿಧಿಸುತ್ತಿದ್ದ ಆರ್ಯವೀರ್ ಸತತ ಎರಡು ಇನಿಂಗ್ಸ್‌ಗಳನ್ನು ಉತ್ತಮ ಪ್ರದರ್ಶನ ನೀಡಿದರು. ಮೊದಲು ಮೇಘಾಲಯ ವಿರುದ್ಧ 34 ಬೌಂಡರಿಗಳೊಂದಿಗೆ ಅಜೇಯ 200 ರನ್ ಗಳಿಸಿದರು.
ಮರುದಿನವೇ ಅವರು 297 ರನ್ ಗಳಿಸಿದರು. ತ್ರಿಶತಕದಿಂದ ವಂಚಿತರಾದರು. ಜೂನಿಯರ್ ಸೆಹ್ವಾಗ್ ತಮ್ಮ ತಂದೆ ಕಲಿಸಿದ ಮೌಲ್ಯಗಳನ್ನು ಹಂಚಿಕೊಂಡರು.
'ವಿನಮ್ರರಾಗಿರಲು. ಎಲ್ಲರೊಂದಿಗೆ ದಯೆಯಿಂದ ಮಾತನಾಡಲು ಮತ್ತು ನೀವು ಕ್ರಿಕೆಟ್‌ನಲ್ಲಿ ಹೇಗೆ ಪ್ರದರ್ಶನ ನೀಡಿದರೂ, ನಯ-ವಿಯನದಿಂದ ಇರಬೇಕು' ಎಂದು ಹೇಳಿದ್ದಾಗಿ ತಿಳಿಸಿದರು.
Advertisement