ದಕ್ಷಿಣ ಆಫ್ರಿಕಾ ವಿರುದ್ಧದ 2-1 ಅಂತರದ ಸರಣಿಯ ಗೆಲುವಿನ ನಂತರ ಭಾರತ ತಂಡ ತಂಗಿದ್ದ ಹೋಟೆಲ್‌ನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸುವ ವಿರಾಟ್ ಕೊಹ್ಲಿ, ಏಕದಿನ ಪಂದ್ಯದಲ್ಲಿ ತಂಡದ ಗೆಲುವನ್ನು ಆಚರಿಸಲು ಸ್ವಲ್ಪ ಕೇಕ್ ತಿಂದರು. ಆದರೆ, ಯಶಸ್ವಿ ಜೈಸ್ವಾಲ್ ನೀಡಿದ ಒಂದು ತುಂಡನ್ನು ತಿನ್ನಲು ಸಹ ರೋಹಿತ್ ಶರ್ಮಾ ನಿರಾಕರಿಸಿದರು. ಟೆಸ್ಟ್ ಸ್ವರೂಪಕ್ಕೆ ನಿವೃತ್ತಿ ಘೋಷಿಸಿದ ನಂತರ 10 ಕೆಜಿಗೂ ಹೆಚ್ಚು ತೂಕ ಇಳಿಸಿಕೊಂಡಿರುವ ರೋಹಿತ್, ಫಿಟ್ ಆಗಿರಲು ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಒಂದು ಸಣ್ಣ ತುಂಡು ಕೇಕ್ ತಿನ್ನಲು ಸಹ ಅವರು ನಿರಾಕರಿಸಿರುವುದು ಈಗ ತಮ್ಮ ಆಹಾರದ ಬಗ್ಗೆ ಎಷ್ಟು ಶಿಸ್ತುಬದ್ಧರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.
ವಿಶಾಖಪಟ್ಟಣಂನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಪರ ಜೈಸ್ವಾಲ್ ಅಜೇಯ ಶತಕ ಬಾರಿಸಿ ಮಿಂಚಿದರು. ತಂಡದ ಆಟಗಾರರು ಮೈದಾನದಿಂದ ಹಿಂತಿರುಗಿದ ನಂತರ ಹೋಟೆಲ್‌ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಜೈಸ್ವಾಲ್ ಅವರಿಂದ ಕೊಹ್ಲಿ ಕೇಕ್ ತಿಂದರು. ಆದರೆ, ರೋಹಿತ್ ಶರ್ಮಾ ಮಾತ್ರ ಬೇಡವೇ ಬೇಡ ಎಂದು ಹೇಳುವ ಮೂಲಕ ಗಮನಸೆಳೆದರು.
'ಮೋತಾ ಹೋ ಜೌಂಗಾ ಮೈ ತಪಸ್ (ನಾನು ಮತ್ತೆ ದಪ್ಪಗಾಗುತ್ತೇನೆ)' ಎಂದು ರೋಹಿತ್ ಶರ್ಮಾ ಕೇಕ್ ತಿನ್ನಿಸಲು ಬಂದ ಜೈಸ್ವಾಲ್‌ಗೆ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ
ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಗಮನಾರ್ಹ ಮತ್ತು ಪರಿಣಾಮಕಾರಿ ಪ್ರದರ್ಶನ ನೀಡಿದರು. ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿತು. ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ 51 ಎಸೆತಗಳಲ್ಲಿ 57 ರನ್ ಗಳಿಸಿದರು. ಈ ಇನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌ಗಳು ಮತ್ತು ಐದು ಬೌಂಡರಿ ಬಾರಿಸಿದರು. ಈ ಮೂಲಕ ಪುರುಷರ ಏಕದಿನ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಶಾಹಿದ್ ಅಫ್ರಿದಿ ಅವರ ದೀರ್ಘಕಾಲದ ದಾಖಲೆಯನ್ನು ಮುರಿದರು.
ಎರಡನೇ ಪಂದ್ಯದಲ್ಲಿ ಅವರು ಕೇವಲ 14 ರನ್ ಗಳಿಸಿ ಔಟಾದರೂ, ವಿಶಾಖಪಟ್ಟಣದಲ್ಲಿ ನಡೆದ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಯಶಸ್ವಿ ಚೇಸಿಂಗ್‌ಗೆ ಆಧಾರಸ್ತಂಭವಾದರು. ಅವರು 73 ಎಸೆತಗಳಲ್ಲಿ 75 ರನ್ ಗಳಿಸುವ ಮೂಲಕ ತಮ್ಮ 61ನೇ ಏಕದಿನ ಅರ್ಧಶತಕ ಗಳಿಸಿದರು.
ಈ ಇನಿಂಗ್ಸ್ ಯಶಸ್ವಿ ಜೈಸ್ವಾಲ್ ಜೊತೆಗಿನ 155 ರನ್‌ಗಳ ಆರಂಭಿಕ ಜೊತೆಯಾಟವಾಡಿದರು. ಈ ಇನಿಂಗ್ಸ್‌ನಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್‌ಗಳ ಪ್ರಮುಖ ಮೈಲಿಗಲ್ಲನ್ನು ಮೀರಿಸಿದರು. ಒಟ್ಟಾರೆಯಾಗಿ, ರೋಹಿತ್ ಸರಣಿಯಾದ್ಯಂತ 146 ರನ್‌ಗಳನ್ನು ಗಳಿಸಿದರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.