ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಕ್ಯೂನಲ್ಲಿ ನಿಂತಿದ್ದಾಗ ಸೆಲ್ಫಿ ಕೇಳಿದ ಅಭಿಮಾನಿಯೊಂದಿಗೆ ತಾಳ್ಮೆ ಕಳೆದುಕೊಂಡಿರುವ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಅಭಿಮಾನಿಯೊಬ್ಬರಿಗೆ ಬುಮ್ರಾ ನಿಮ್ಮ ಫೋನ್ ಕೆಳಗೆ ಬಿದ್ದು ಒಡೆಯುತ್ತದೆ ಎಂದು ಎಚ್ಚರಿಸುತ್ತಿರುವುದು ಕಂಡುಬಂದಿದೆ. ಆದಾಗ್ಯೂ, ಅಭಿಮಾನಿ ರೆಕಾರ್ಡ್ ಮಾಡುವುದನ್ನು ಮುಂದುವರೆಸಿದ್ದಾರೆ ಮತ್ತು ಅದಾದ ಸ್ವಲ್ಪ ಸಮಯದ ನಂತರ, ವೇಗಿ ಫೋನ್ ತೆಗೆದುಕೊಂಡು ಹೋಗಲು ನಿರ್ಧರಿಸಿದರು.
ಬುಮ್ರಾ ಮತ್ತು ಅಭಿಮಾನಿ ನಡುವಿನ ಮಾತಿನ ಚಕಮಕಿ ಹೇಗೆ ನಡೆಯಿತು ಎಂಬುದು ಇಲ್ಲಿದೆ -
ಅಭಿಮಾನಿ: ನಾನು ನಿಮ್ಮ ಜೊತೆ ಮಾತ್ರ ಹೋಗುತ್ತೇನೆ ಸರ್.
ಬುಮ್ರಾ: ನಿಮ್ಮ ಫೋನ್ ಬಿದ್ದರೆ, ನನ್ನನ್ನು ದೂಷಿಸಬೇಡಿ.
ಅಭಿಮಾನಿ: ತೊಂದರೆ ಇಲ್ಲ ಸರ್.
ಇದಕ್ಕೂ ಮೊದಲು, ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20ಐ ಪಂದ್ಯವು ಅತಿಯಾದ ಮಂಜು ಕವಿದಿದ್ದರಿಂದಾಗಿ ರದ್ದಾಗಿತ್ತು. ಅಂಪೈರ್‌ಗಳಾದ ರೋಹನ್ ಪಂಡಿತ್ ಮತ್ತು ಕೆ.ಎನ್. ಅನಂತಪದ್ಮನಾಭನ್ ಟಾಸ್ ಅನ್ನು ವಿಳಂಬಗೊಳಿಸಿದರು ಮತ್ತು ಬ್ಯಾಟರ್‌ನ ಕ್ರೀಸ್‌ನಿಂದ ಫ್ಲಡ್‌ಲೈಟ್‌ಗಳನ್ನು ನೋಡುವ ಮೂಲಕ ರಾತ್ರಿ 9.25ರವರೆಗೂ ಹಲವಾರು ಬಾರಿ ತಪಾಸಣೆಗಳನ್ನು ನಡೆಸಿದರು. ನಂತರ ರಾತ್ರಿ 9.30ಕ್ಕೆ ಪಂದ್ಯವನ್ನು ರದ್ದುಗೊಳಿಸಿದರು.
ಲಖನೌನಲ್ಲಿ ಪಂದ್ಯ ನಡೆಯದ ಕಾರಣ, ಕ್ರೀಡಾಂಗಣದಲ್ಲಿದ್ದ ಉತ್ಸಾಹಭರಿತ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಭಾರತವು ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ. ಉಭಯ ತಂಡಗಳು ಈಗ ಶುಕ್ರವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಪಂದ್ಯದತ್ತ ಗಮನ ಹರಿಸಲಿವೆ.