ಶುಕ್ರವಾರ ಅಹಮದಾಬಾದ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಟಿ20ಐ ಪಂದ್ಯದಲ್ಲಿ ಸಿಕ್ಸರ್ ಬಾರಿಸಿದ ನಂತರ ಬಾಲ್ ಕ್ಯಾಮೆರಾಮೆನ್‌ಗೆ ತಗುಲಿದ ನಂತರ ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ಧಿಕ್ ಪಾಂಡ್ಯ ಅವರ ನಡೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಹಾರ್ದಿಕ್ ಅವರು ತಾವು ಎದುರಿಸಿದ ಮೊದಲ ಎಸೆತದಲ್ಲೇ ಕ್ರೀಸ್‌ನಿಂದ ಹೊರಬಂದು ಕಾರ್ಬಿನ್ ಬಾಷ್ ಅವರಿಗೆ ಭರ್ಜರಿ ಸಿಕ್ಸರ್ ಬಾರಿಸಿದರು. ಈ ಫ್ಲಾಟ್ ಸಿಕ್ಸ್ ಸುಲಭವಾಗಿ ಬೌಂಡರಿ ದಾಟಿತು ಆದರೆ, ಅಂತಿಮವಾಗಿ ತಂಡದ ಡಗೌಟ್‌ಗಳಲ್ಲಿ ಒಂದರ ಪಕ್ಕದಲ್ಲಿ ನಿಂತಿದ್ದ ಕ್ಯಾಮೆರಾಮೆನ್‌ಗೆ ಡಿಕ್ಕಿ ಹೊಡೆಯಿತು. ಕ್ಯಾಮೆರಾಮೆನ್‌ಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದ ಕಾರಣ ಆಟವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಬೇಕಾಯಿತು. ಆದರೆ, ಬೇಗನೆ ಚೇತರಿಸಿಕೊಂಡ ಅವರು ತಮ್ಮ ಕರ್ತವ್ಯವನ್ನು ಪುನರಾರಂಭಿಸಿದರು.
ಪಂದ್ಯ ಮುಗಿದ ತಕ್ಷಣ, ಹಾರ್ದಿಕ್ ಕ್ಯಾಮೆರಾಮೆನ್ ಬಳಿಗೆ ಹೋಗಿ ಅವರನ್ನು ನೋಡಿ ಅಪ್ಪಿಕೊಂಡರು. ಸ್ಟಾರ್ ಆಲ್‌ರೌಂಡರ್ ಕ್ಯಾಮೆರಾಮೆನ್ ಭುಜಕ್ಕೆ ಐಸ್ ಪ್ಯಾಕ್ ಹಚ್ಚಿದರು. ಈ ಕ್ಷಣದ ವಿಡಿಯೋ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 30 ರನ್‌ಗಳಿಂದ ಸೋಲಿಸಿ, ಐದನೇ ಮತ್ತು ಅಂತಿಮ ಟಿ20ಐ ಜಯದೊಂದಿಗೆ ಜಯ ಸಾಧಿಸಿತು. ಈ ಮೂಲಕ 3-1 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತು.
ಹಾರ್ಧಿಕ್ ಪಾಂಡ್ಯ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಭಾರತದ ಪರ ಎರಡನೇ ವೇಗದ ಅರ್ಧಶತಕವಾಗಿದೆ. ತಿಲಕ್ ವರ್ಮಾ 42 ಎಸೆತಗಳಲ್ಲಿ 73 ರನ್ ಗಳಿಸಿ ಭಾರತ ಐದು ವಿಕೆಟ್ ನಷ್ಟಕ್ಕೆ 231 ರನ್ ಗಳಿಸಲು ನೆರವಾದರು. ಇದಕ್ಕುತ್ತರವಾಗಿ, ಕ್ವಿಂಟನ್ ಡಿ ಕಾಕ್ (65) ಮಧ್ಯದಲ್ಲಿದ್ದಾಗ ದಕ್ಷಿಣ ಆಫ್ರಿಕಾ ತಂಡವು ಉತ್ತಮ ಪ್ರದರ್ಶನ ನೀಡಿತು. ಆದರೆ, 81 ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಕಳೆದುಕೊಂಡು 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.