ಜೈಪುರ: ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಾದ್ಯಂತ 'ಮುಂಬೈ ಚಾ ರಾಜಾ' ಗೀತೆಗಳು ಮೊಳಗುತ್ತಿದೆ. ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು, ನಗರ ನೀಲಿ ಬಣ್ಣದಿಂದ ಕಂಗೊಳಿಸುತ್ತಿದೆ.
ಎಲ್ಲೆಲ್ಲೂ ರೋಹಿತ್ ಶರ್ಮಾ ಪರ ಘೋಷಣೆಗಳು ಮೊಳಗುತ್ತಿವೆ. ಭಾರತದ ಮಾಜಿ ನಾಯಕ ಏಳು ವರ್ಷಗಳ ಅಂತರದ ನಂತರ ವಿಜಯ್ ಹಜಾರೆ ಟ್ರೋಫಿಗೆ ಮರಳಿದ್ದಾರೆ.
ಪ್ರೇಕ್ಷಕರಿಗೆ ಉಚಿತ ಪ್ರವೇಶ ಘೋಷಿಸುವುದರೊಂದಿಗೆ ಬುಧವಾರ ನಿಗದಿತ ಪಂದ್ಯ ಪ್ರಾರಂಭವಾಗುವ ಮೊದಲೇ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣದ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದರು.
ಮುಂಬೈ ತಂಡದ ಬಸ್ ಸ್ಥಳಕ್ಕೆ ಆಗಮಿಸುವ ಮುಂಚೆಯೇ ರೋಹತ್ ಶರ್ಮಾ ಅವರನ್ನು ಪ್ರೋತ್ಸಾಹಿಸಲು ಅಭಿಮಾನಿಗಳ ದಂಡೆ ನೆರಿದಿತ್ತು. ರೋಹಿತ್ ಅವರನ್ನು ತೀರಾ ಹತ್ತಿರದಿಂದ ನೋಡುವ ಅಪರೂಪದ ಅವಕಾಶ ಅಭಿಮಾನಿಗಳಿಗೆ ಸಿಕ್ಕಿತ್ತು. ಪ್ರೇಕ್ಷಕರ ಪ್ರೀತಿಯನ್ನು ಅಪ್ಪಿಕೊಂಡ ರೋಹಿತ್ ಶರ್ಮಾ, ಫೀಲ್ಡಿಂಗ್ ಮಾಡುವಾಗ ಬೌಂಡರಿ ಹಗ್ಗಗಳ ಬಳಿ ನಿಂತು ಕೈಬೀಸಿದರು.
ಇಂದು ಸಿಕ್ಕಿಂ ಹಾಗೂ ಮುಂಬೈ ನಡುವಣ ಪಂದ್ಯ ನಡೆಯುತ್ತಿದ್ದು, ಸಿಕ್ಕಿಂ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಹೆಚ್ಚಿನ ಪ್ರೇಕ್ಷಕರು ರೋಹಿತ್ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ರೋಹಿತ್ ಗಾಗಿ ಕಾಯುತ್ತಿದ್ದಾರೆ.