ಕೊಹ್ಲಿ, ಪೃಥ್ವಿ ಶಾ ಮತ್ತು ರೋಹಿತ್ ಶರ್ಮಾ 
ಕ್ರಿಕೆಟ್

Vijay Hazare Trophy: ಕೊಹ್ಲಿ ಮತ್ತೊಂದು ದಾಖಲೆ, ಆಯ್ಕೆದಾರರಿಗೆ ಪೃಥ್ವಿ ಶಾ ಖಡಕ್ ಸಂದೇಶ, ರೋಹಿತ್ ಶರ್ಮಾ ಗೋಲ್ಡನ್ ಡಕೌಟ್..!

ವಿಜಯ್ ಹಜಾರೆ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ಮುಂದುವರೆದಿದ್ದು, ಗುಜರಾತ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ನವದೆಹಲಿ: ಭಾರತದ ದೇಶೀಯ ಕ್ರೆಕೆಟ್ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಟೀಂ ಇಂಡಿಯಾ ಆಟಗಾರರ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಹೌದು.. ವಿಜಯ್ ಹಜಾರೆ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ಮುಂದುವರೆದಿದ್ದು, ಗುಜರಾತ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.

61 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 13 ಬೌಂಡರಿಗಳ ನೆರವಿನಿಂದ ಕೊಹ್ಲಿ 77 ರನ್ ಗಳಿಸಿ ವಿಶಾಲ್ ಜೈಸ್ವಾಲ್ ಬೌಲಿಂಗ್ ನಲ್ಲಿ ಔಟಾದರು. ಆ ಮೂಲಕ ಕೇವಲ 23 ರನ್ ಗಳ ಅಂತರದಲ್ಲಿ ಮತ್ತೊಂದು ಶತಕ ಸಿಡಿಸುವ ಅವಕಾಶ ಮಿಸ್ ಮಾಡಿಕೊಂಡರು.

ದೆಹಲಿ ನಾಯಕ ರಿಷಭ್ ಪಂತ್ ಕೂಡ 70 ರನ್ ಗಳಿಸಿ ಗಮನ ಸೆಳೆದರು.

ಕೊಹ್ಲಿ ಅಪರೂಪದ ದಾಖಲೆ

ಆದಾಗ್ಯೂ ಕೊಹ್ಲಿ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಲಿಸ್ಟ್ ಎ ಬ್ಯಾಟಿಂಗ್ ಸರಾಸರಿಯನ್ನು ಹೊಂದಿರುವ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಈ ದಾಖಲೆ ಈ ಹಿಂದೆ ಆಸ್ಟ್ರೇಲಿಯಾದ ದಂತಕಥೆ ಮೈಕೆಲ್ ಬೆವನ್ ಅವರ ಹೆಸರಲ್ಲಿತ್ತು.

ಆಯ್ಕೆದಾರರಿಗೆ ಪೃಥ್ವಿ ಶಾ ಖಡಕ್ ಸಂದೇಶ

ಮತ್ತೊಂದು ಪಂದ್ಯದಲ್ಲಿ ಸಿಕ್ಕಿಂ ವಿರುದ್ಧ ಮಹಾರಾಷ್ಟ್ರದ 151 ರನ್ ಗಳ ಗುರಿ ಬೆನ್ನಟ್ಟುವಲ್ಲಿ ಪೃಥ್ವಿ ಶಾ ನೆರವಾದರು. ಮಹಾರಾಷ್ಟ್ರದ ಆರಂಭಿಕ ಆಟಗಾರ ಪೃಥ್ವಿ ಶಾ 43 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಅರ್ಧಶತಕ ಸಿಡಿಸಿದರು. ಆ ಮೂಲಕ ಪೃಥ್ವಿಶಾ ತಾವಿನ್ನೂ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲು ಫಿಟ್ ಆಗಿರುವುದಾಗಿ ಆಯ್ಕೆ ಸಮಿತಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ರೋಹಿತ್ ಶರ್ಮಾ ಗೋಲ್ಡನ್ ಡಕೌಟ್

ಚಂಡೀಗಢ ವಿರುದ್ಧ ಉತ್ತರ ಪ್ರದೇಶ ಪರ ರಿಂಕು ಸಿಂಗ್ 56 ಎಸೆತಗಳಲ್ಲಿ ಶತಕ ಬಾರಿಸಿದ್ದು ವಿಶೇಷವಾಗಿತ್ತು. ಆದಾಗ್ಯೂ, ಉತ್ತರಾಖಂಡ್ ವಿರುದ್ಧ ಮುಂಬೈ ಪರ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡುವಲ್ಲಿ ವಿಫಲರಾದರು, ಆಘಾತಕಾರಿಯಾಗಿ ಗೋಲ್ಡನ್ ಡಕ್ ಗೆ ರೋಹಿತ್ ಶರ್ಮಾ ಔಟಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕ್ರಿಕೆಟಿಗ ವೈಭವ್ ಸೂರ್ಯವಂಶಿ ಸೇರಿ 20 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ!

ಕೇರಳದಲ್ಲಿ ಇತಿಹಾಸ ಸೃಷ್ಟಿಸಿದ BJP: ತಿರುವನಂತಪುರಂನ ಮೇಯರ್ ಆಗಿ ವಿ.ವಿ ರಾಜೇಶ್ ಆಯ್ಕೆ!

ಅರಣ್ಯಾಧಿಕಾರಿ ಮೇಲೆ ಕಾಡು ಹಂದಿ ದಾಳಿ, ಒಂದೂವರೆ ನಿಮಿಷ ಭೀಕರ ಕಾಳಗ.. ಮುಂದೇನಾಯ್ತು? Video

Video: ಅಮ್ಮನ ಹೆಸರಿಗೆ ಆಸ್ತಿ.. ವಿಚ್ಚೇದನದ ಬಳಿಕ ಸಿಗದ ಜೀವನಾಂಶ, ಕೋರ್ಟ್ ಹಾಲ್ ನಲ್ಲೇ ಪತಿಗೆ ಮಹಿಳೆ ಹಿಗ್ಗಾಮುಗ್ಗಾ ಥಳಿತ!

ಹೊಸ ವರ್ಷಕ್ಕೂ ಮುನ್ನ ಯುದ್ಧ ಅಂತ್ಯಗೊಳಿಸುವ ಬಗ್ಗೆ ಝೆಲೆನ್ಸ್ಕಿ ಸುಳಿವು

SCROLL FOR NEXT