‘Rohit and Kohli are rightly idolised’: Tim David shares experience of playing with Indian duo ಟಿಮ್ ಡೇವಿಡ್
ಕ್ರಿಕೆಟ್

ಐಪಿಎಲ್ ಆರಂಭಕ್ಕೂ ಮುನ್ನವೇ RCBಗೆ ಆಘಾತ, ತಂಡದ ಸ್ಟಾರ್ ಆಲ್ರೌಂಡರ್ ಗಾಯ, ಟೂರ್ನಿ ಆಡೋದೇ ಡೌಟ್!

2025ರ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಪ್ರಶಸ್ತಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಟಿಮ್ ಡೇವಿಡ್ ಗಾಯಗೊಂಡಿದ್ದು, ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ.

ನವದೆಹಲಿ: ಐಪಿಎಲ್ 2026ಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಇದರ ನಡುವೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರೂ ತಂಡದ ಸ್ಟಾರ್ ಆಟಗಾರ ಟೂರ್ನಿಯಲ್ಲಿ ಪಾಲ್ಗೊಳ್ಳುವುದೇ ಅನುಮಾನ ಎನ್ನಲಾಗುತ್ತಿದೆ.

ಹೌದು.. 2025ರ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಪ್ರಶಸ್ತಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಟಿಮ್ ಡೇವಿಡ್ ಗಾಯಗೊಂಡಿದ್ದು, ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಆರಂಭಕ್ಕೆ ಇನ್ನು ಉಳಿದಿರುವುದು ತಿಂಗಳುಗಳು ಮಾತ್ರ. ಆದರೆ ತಿಂಗಳುಗಳು ಉಳಿದಿರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಗಾಯಗೊಂಡಿರುವುದು ಇದೀಗ RCB ಫ್ರಾಂಚೈಸಿಯ ಚಿಂತೆಯನ್ನು ಹೆಚ್ಚಿಸಿದೆ.

ಆರ್​ಸಿಬಿ ತಂಡದ ಪ್ರಮುಖ ಆಟಗಾರ ಟಿಮ್ ಡೇವಿಡ್ ಬಿಗ್ ಬ್ಯಾಷ್ ಲೀಗ್ ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಪರ್ತ್​ನಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್​ನ 12ನೇ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ಪರ ಕಣಕ್ಕಿಳಿದಿದ್ದ ಟಿಮ್ ಡೇವಿಡ್ ಬ್ಯಾಟಿಂಗ್ ವೇಳೆ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದಾರೆ. ಈ ಗಾಯದ ಕಾರಣ ಟಿಮ್ ಡೇವಿಡ್ ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್​ಗೆ ಮರಳಿದ್ದಾರೆ.

ಪ್ರಸ್ತುತ ಮಾಹಿತಿ ಪ್ರಕಾರ ಟಿಮ್ ಡೇವಿಡ್ ಅವರ ಗಾಯವು ಗಂಭೀರವಾಗಿದ್ದು, ಹೀಗಾಗಿ ವೈದ್ಯರು ಅವರಿಗೆ ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಟಿಮ್ ಡೇವಿಡ್ ಮುಂಬರುವ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವುದು ಅನುಮಾನ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ.

ಫೆಬ್ರವರಿ 7 ರಿಂದ ಟಿ20 ವಿಶ್ವಕಪ್ ಆರಂಭವಾಗಲಿದ್ದು, ಫೆಬ್ರವರಿ-ಮಾರ್ಚ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಿಂದ ಟಿಮ್ ಡೇವಿಡ್ ಹೊರಗುಳಿದರೆ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲೂ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಐಪಿಎಲ್ 2026 ಮಾರ್ಚ್ 26 ರಿಂದ ಆರಂಭವಾಗಲಿದೆ.

ಅತ್ತ ಟಿ20 ವಿಶ್ವಕಪ್​ನಿಂದ ಟಿಮ್ ಡೇವಿಡ್ ಹೊರಗುಳಿದರೆ ಮಾರ್ಚ್​​ನಲ್ಲಿ ಆರಂಭವಾಗಲಿರುವ ಐಪಿಎಲ್​ನಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಗೆ ನೂತನ ಸಾರಥಿ: ಜ. 20ರೊಳಗೆ ನಿತಿನ್ ನಬಿನ್ 'ರಾಷ್ಟ್ರೀಯ ಅಧ್ಯಕ್ಷ'ರಾಗಿ ಆಯ್ಕೆ ಸಾಧ್ಯತೆ!

ಜಮ್ಮು-ಕಾಶ್ಮೀರ: ಭೀಕರ ಅಪಘಾತದಲ್ಲಿ ಸಿಬಿಐ ವಕೀಲ ಶೇಖ್ ಆದಿಲ್ ಸಾವು, ಅಪಘಾತದ ದೃಶ್ಯ ವೈರಲ್!

ಬಹಿರಂಗವಾಗಿ BJP- RSS ಹೊಗಳಿ, 'ವಿವಾದದ ಕಿಡಿ' ಹೊತ್ತಿಸಿದ ದಿಗ್ವಿಜಯ್ ಸಿಂಗ್!

ದೃಶ್ಯಂ 3 ಸಿನಿಮಾದಿಂದ ನಿರ್ಗಮನ: ಅಕ್ಷಯ್ ಖನ್ನಾಗೆ ಲೀಗಲ್ ನೋಟಿಸ್

Kalaburagi: ದೆವ್ವ ಬಿಡಿಸುವ ನೆಪದಲ್ಲಿ ಥಳಿತ, ಮಹಿಳೆ ಸಾವು!

SCROLL FOR NEXT