ಅಕ್ಸರ್ ಪಟೇಲ್ ತಬ್ಬಿಕೊಂಡಿರುವ ರೋಹಿತ್ ಶರ್ಮಾ 
ಕ್ರಿಕೆಟ್

2nd ODI: ರೋಹಿತ್ ಶರ್ಮಾ ಭರ್ಜರಿ ಶತಕ; ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಗೆಲುವು; ಸರಣಿ ಗೆದ್ದ ಭಾರತ!

ಕಟಕ್ ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತೆ ಫಾರ್ಮ್ ಗೆ ಮರಳುವ ಮೂಲಕ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕಟಕ್: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಆಕರ್ಷಕ ಶತಕದ ನೆರವಿನಿಂದ ಇಂಗ್ಲೆಂಡ್ ನ್ನು ನಾಲ್ಕು ವಿಕೆಟ್ ಗಳಿಂದ ಸೋಲಿಸಿದ ಭಾರತ, ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.

ಕಟಕ್ ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತೆ ಫಾರ್ಮ್ ಗೆ ಮರಳುವ ಮೂಲಕ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

304 ರನ್ ಗಳಿಗೆ ಇಂಗ್ಲೆಂಡ್ ಆಲೌಟ್:

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 49.5 ಓವರ್ ಗಳಲ್ಲಿ 304 ರನ್ ಗಳಿಸುವ ಮೂಲಕ ಆಲೌಟ್ ಆಯಿತು. ಇಂಗ್ಲೆಂಡ್ ತಂಡದ ಪರ ಆರಂಭಿಕ ಆಟಗಾರ ಪಿಲ್ ಸಾಲ್ಟ್ 26 ರನ್ ಗಳಿಸಿದಾಗ ವರುಣ್ ಬೌಲಿಂಗ್ ನಲ್ಲಿ ಜಡೇಜಾ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಜೊತೆಯಾದ ಬೆನ್ ಡಕೆಟ್ ಮತ್ತು ಜೊ ರೂಟ್ ಉತ್ತಮ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಜಡೇಜಾ ಯಶಸ್ವಿಯಾದರು.

ಬೆನ್ ಡಕೆಟ್ 65, ಜೋ ರೂಟ್ 69 ರನ್ ಗಳಿಸಿದ ಕ್ರಮವಾಗಿ ಪಾಂಡ್ಯ ಹಾಗೂ ಕೊಹ್ಲಿ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಹ್ಯಾರಿ ಬ್ರೂಕ್ 31, ನಾಯಕ ಜೊಸ್ ಬಟ್ಲರ್ 34, ಲಿಯಾಮ್ ಲಿವಿಂಗ್ ಸ್ಟೊನ್ 41 ರನ್ ಗಳಿಸದರು. ಇವರನ್ನು ಹೊರತುಪಡಿಸಿದರೆ ಬೇರೆ ಯಾವುದೇ ಆಟಗಾರರು ಕ್ರೀಸ್ ನಲ್ಲಿ ನಿಲ್ಲಲು ಭಾರತದ ಬೌಲರ್ ಗಳು ಬಿಡಲಿಲ್ಲ. ಪರಿಣಾಮ ಇಂಗ್ಲೆಂಡ್ 304 ರನ್ ಗಳಿಗೆ ಆಲೌಟ್ ಆಯಿತು.

ಮತ್ತೆ ಫಾರ್ಮ್ ಗೆ ಮರಳಿದ 'ಹಿಟ್ ಮ್ಯಾನ್ '

ಇಂಗ್ಲೆಂಡ್ ನೀಡಿದ 305 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತದ ಪರ ರೋಹಿತ್ ಶರ್ಮಾ ಮತ್ತೆ ಫಾರ್ಮ್ ಗೆ ಮರಳುವ ಮೂಲಕ ಇಂಗ್ಲೆಂಡ್ ಬೌಲರ್ ಗಳ ಬೆವರಿಳಿಸಿದರು. 90 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 119 ರನ್ ಗಳಿಸಿದರು. ಅಲ್ಲದೇ ಏಕದಿನ ಪಂದ್ಯಗಳಲ್ಲಿ 32ನೇ ಶತಕ ಬಾರಿಸುವ ಮೂಲಕ ಅತಿ ಹೆಚ್ಚು ಶತಕ ಗಳಿಸಿದ ಭಾರತದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದರು. ಪ್ರಸ್ತುತ ಮೂರನೇ ಸ್ಥಾನದಲ್ಲಿರುವ ರೋಹಿತ್, ವಿರಾಟ್ ಕೊಹ್ಲಿ (81) ಮತ್ತು ಸಚಿನ್ ತೆಂಡೂಲ್ಕರ್ (100) ನಂತರದ ಸ್ಥಾನದಲ್ಲಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಒಟ್ಟು 7 ಸಿಕ್ಸರ್ ಸಿಡಿಸಿದ್ದು, ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್ ಕ್ರಿಸ್ ಗೇಲ್ ಅವರನ್ನೂ ಹಿಂದಿಕ್ಕಿದ್ದಾರೆ.

ಕೊಹ್ಲಿ ಮತ್ತೆ ವೈಫಲ್ಯ: ಇನ್ನೂ ಶುಭ್ಮನ್ ಗಿಲ್ 52 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಗಳೊಂದಿಗೆ 60 ರನ್ ಗಳಿಸಿದರು. ಆದರೆ ವಿರಾಟ್ ಕೊಹ್ಲಿ ಮತ್ತೆ ವೈಫಲ್ಯ ಅನುಭವಿಸುವ ಮೂಲಕ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. 8 ಎಸೆತ ಎದುರಿಸಿದ ಕೊಹ್ಲಿ ಕೇವಲ 1 ಬೌಂಡರಿಗಳೊಂದಿಗೆ 5 ರನ್ ಗಳಿಸಿ ಔಟ್ ಆದರು. ನಂತರ ಬಂದ ಶ್ರೇಯಸ್ ಅಯ್ಯರ್ 44, ಅಕ್ಸರ್ ಪಟೇಲ್ ಅಜೇಯ 41 ರನ್ ಗಳಿಸಿ, ತಂಡದ ಮೊತ್ತವನ್ನು ಹಿಗ್ಗಿಸಿದರು.

ಶ್ರೇಯಸ್ ಪಟೇಲ್ ರನ್ ಔಟ್ ಆದ ಬಳಿಕ ಕೆಎಲ್ ರಾಹುಲ್ ಕೇವಲ 10 ರನ್ ಗಳಿಸಿ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಹಾರ್ದಿಕ್ ಪಾಂಡ್ಯ 10, ರವೀಂದ್ರ ಜಡೇಜ ಅಜೇ. 11 ರನ್ ಗಳಿಸುವುದರೊಂದಿಗೆ ಭಾರತ ಇನ್ನೂ 33 ಎಸೆತ ಬಾಕಿ ಇರುವಾಗಲೇ 44.3 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 308 ರನ್ ಗಳಿಸುವ ಮೂಲಕ 2ನೇ ಏಕದಿನ ಪಂದ್ಯವನ್ನು ಗೆದ್ದುಕೊಂಡಿತು. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಗೆದ್ದುಕೊಂಡಿತು.

ಫ್ಲೇಯರ್ ಆಫ್ ದಿ ಮ್ಯಾಚ್: ಆಕರ್ಷಕ ಶತಕ ಗಳಿಸುವ ಮೂಲಕ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ರೋಹಿತ್ ಶರ್ಮಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT