ಮೊಹಮ್ಮದ್ ಕೈಫ್ 
ಕ್ರಿಕೆಟ್

IPL 2025: ರಜತ್ ಪಾಟೀದಾರ್‌ಗೆ RCB ನಾಯಕತ್ವ; ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದೇನು?

ಕೊಹ್ಲಿಯೇ ನಾಯಕನಾಗಲಿದ್ದಾರೆ ಎಂದು ಊಹಿಸಿದ್ದರಿಂದ ಈ ನಿರ್ಧಾರವು ಸ್ವಲ್ಪ ಅಚ್ಚರಿಯನ್ನುಂಟುಮಾಡಿತು ಎಂದು ಭಾರತದ ಮಾಜಿ ಬ್ಯಾಟರ್ ಮೊಹಮ್ಮದ್ ಕೈಫ್ ತಿಳಿಸಿದ್ದಾರೆ.

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಮುಂಚಿತವಾಗಿ ಆರ್‌ಸಿಬಿ ರಜತ್ ಪಾಟಿದಾರ್ ಅವರನ್ನು ತಮ್ಮ ಹೊಸ ನಾಯಕನನ್ನಾಗಿ ನೇಮಿಸಿದೆ. ಕಳೆದ ಮೂರು ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಫಾಫ್ ಡುಪ್ಲೆಸಿಸ್ ಅವರನ್ನು ಮೆಗಾ ಹರಾಜಿಗೂ ಮುನ್ನ ತಂಡದಿಂದ ಕೈಬಿಡಲಾಗಿತ್ತು. ಇದಾದ ಬಳಿಕ ವಿರಾಟ್ ಕೊಹ್ಲಿ ಅವರೇ ಆರ್‌ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹಲವರು ಊಹಿಸಿದ್ದರು. ಆದರೆ, ಅಚ್ಚರಿಯ ರೀತಿಯಲ್ಲಿ ಆರ್‌ಸಿಬಿ ಪಾಟೀದಾರ್ ಅವರನ್ನು ನಾಯಕನನ್ನಾಗಿ ಘೋಷಿಸಿತು.

ಕೊಹ್ಲಿಯೇ ನಾಯಕನಾಗಲಿದ್ದಾರೆ ಎಂದು ಊಹಿಸಿದ್ದರಿಂದ ಈ ನಿರ್ಧಾರವು ಸ್ವಲ್ಪ ಅಚ್ಚರಿಯನ್ನುಂಟುಮಾಡಿತು ಎಂದು ಭಾರತದ ಮಾಜಿ ಬ್ಯಾಟರ್ ಮೊಹಮ್ಮದ್ ಕೈಫ್ ತಿಳಿಸಿದ್ದಾರೆ. ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಮಾತನಾಡಿದ ಕೈಫ್, ರಜತ್ ಪಾಟೀದಾರ್ ಅವರ ನೇಮಕದಲ್ಲಿ ವಿರಾಟ್ ಕೊಹ್ಲಿ ಅವರೇ ದೊಡ್ಡ ಪಾತ್ರವನ್ನು ವಹಿಸಿರಬಹುದು ಎಂದಿದ್ದಾರೆ.

'ಫಾಫ್ ಡುಪ್ಲೆಸಿಸ್ ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದಾಗಿನಿಂದ ವಿರಾಟ್ ಕೊಹ್ಲಿಯೇ ನಾಯಕನಾಗುತ್ತಾರೆ ಎಂದು ಭಾವಿಸಿದ್ದೆವು. ನಾಯಕನಲ್ಲದಿದ್ದರೂ ವಿರಾಟ್ ಕೊಹ್ಲಿ ಆರ್‌ಸಿಬಿಯ ನಿರ್ಧಾರಗಳ ಮೇಲೆ ಗಮನಾರ್ಹ ಪ್ರಭಾವ ಬೀರುತ್ತಾರೆ. ರಜತ್ ಪಾಟೀದಾರ್ ನಾಯಕನಾಗಿದ್ದರೂ ಕೂಡ ಆ ನಿರ್ಧಾರದಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಂಡಕ್ಕೆ ನಿರ್ದೇಶನ ಮತ್ತು ಆಟಗಾರರ ಆಯ್ಕೆಗಳು ಹೆಚ್ಚಾಗಿ ವಿರಾಟ್ ಅವರಿಂದ ಪ್ರಭಾವಿತವಾಗಿರುತ್ತದೆ' ಎಂದು ಕೈಫ್ ಎಕ್ಸ್‌ನಲ್ಲಿ ಬರೆದಿದ್ದಾರೆ.

'ಆ ಫ್ರಾಂಚೈಸಿ 18 ವರ್ಷಗಳಲ್ಲಿ ಒಮ್ಮೆಯೂ ಟ್ರೋಫಿಯನ್ನು ಗೆದ್ದಿಲ್ಲ. ಆದರೆ, ಇನ್ನೂ ಕೊಹ್ಲಿ ಅವರೊಂದಿಗೆ ಹಲವು ವರ್ಷಗಳಿಂದ ಇದ್ದಾರೆ. ಟ್ರೋಫಿ ಇಲ್ಲದೆಯೂ, ಅವರು ಸಾಕಷ್ಟು ಪ್ರಭಾವ ಮತ್ತು ಗೌರವ ಮತ್ತು ಬ್ರಾಂಡ್ ಮೌಲ್ಯವನ್ನು ನಿರ್ಮಿಸಿದ್ದಾರೆ' ಎಂದಿದ್ದಾರೆ.

ಪಾಟಿದಾರ್ ಅವರ ನೇಮಕವು ದೀರ್ಘಾವಧಿಯದ್ದಾಗಿರಬಹುದು. ವಿಶೇಷವಾಗಿ ಕೊಹ್ಲಿ ನಾಯಕ ಸ್ಥಾನದ ಮೇಲಿನ ಆಸೆಯನ್ನು ಬಿಟ್ಟಿದ್ದಾರೆ ಮತ್ತು ಅವರು ಬ್ಯಾಟ್‌ ಮೂಲಕ ಕೊಡುಗೆ ನೀಡುವುದರ ಮೇಲೆ ಗಮನ ಕೇಂದ್ರೀಕರಿಸಲು ಬಯಸುತ್ತಾರೆ ಎಂದು ತಿಳಿಸಿದ್ದಾರೆ.

'ಕೊಹ್ಲಿ ನಾಯಕತ್ವವನ್ನು ವಹಿಸಿಕೊಳ್ಳದಿದ್ದಾಗ ನನಗೆ ಸ್ವಲ್ಪ ಆಶ್ಚರ್ಯವಾಯಿತು. ಅವರಿಗೆ 37 ವರ್ಷ ವಯಸ್ಸಾಗಿದೆ ಮತ್ತು ಯುವ ನಾಯಕನನ್ನು ಕರೆತರುವ ಮೂಲಕ ಅವರು ದೀರ್ಘಾವಧಿಗೆ ನಾಯಕನಾಗಿ ಬಯಸುತ್ತಾರೆ. ಅವರು ತಮ್ಮ ವೈಯಕ್ತಿಕ ಕೊಡುಗೆಗಳ ಮೇಲೆ ಗಮನಹರಿಸುತ್ತಾರೆ' ಎಂದು ಕೈಫ್ ಹೇಳಿದರು.

ಬಹುನಿರೀಕ್ಷಿತ ಐಪಿಎಲ್ 2025ನೇ ಆವೃತ್ತಿಯ ವೇಳಾಪಟ್ಟಿಯನ್ನು ಭಾನುವಾರ ಸಂಜೆ ಬಿಸಿಸಿಐ ಬಿಡುಗಡೆ ಮಾಡಿದೆ. ಮಾರ್ಚ್ 22ರಂದು ಐಪಿಎಲ್ ಟೂರ್ನಿ ಆರಂಭವಾಗಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೆಣಸಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel