ಪಿಸಿಬಿ-ಭಾರತ ಧ್ವಜ ವಿವಾದ 
ಕ್ರಿಕೆಟ್

ICC Champions Trophy 2025: ''ಟೀಂ ಇಂಡಿಯಾ ಇಲ್ಲಿ..''; ಭಾರತ ಧ್ವಜ ವಿವಾದ ಕುರಿತು ಕೊನೆಗೂ ಮೌನ ಮುರಿದ PCB.. ಹೇಳಿದ್ದೇನು..?

ಪಾಕಿಸ್ತಾನ ಆತಿಥ್ಯ ವಹಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಭಾಗವಹಿಸುವ ರಾಷ್ಟ್ರಗಳ ಧ್ವಜಗಳನ್ನು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರದರ್ಶಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವಿವಾದಕ್ಕೆ ಕಾರಣವಾಗಿತ್ತು.

ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿ ಆತಿಥ್ಯವಹಿಸಿರುವ ಪಾಕಿಸ್ತಾನ ತನ್ನ ಮೈದಾನಗಳಲ್ಲಿ ಟೂರ್ನಿಯಲ್ಲಿ ಪಾಲ್ಗೊಂಡಿರುವ ಎಲ್ಲ ದೇಶಗಳ ರಾಷ್ಟ್ರಧ್ವಜಗಳನ್ನು ಹಾಕಿದ್ದು, ಇದರಲ್ಲಿ ಭಾರತ ತಂಡದ ಧ್ವಜ ನಾಪತ್ತೆಯಾಗಿ ವ್ಯಾಪಕ ವಿವಾದ ವ್ಯಕ್ತವಾಗಿತ್ತು. ಇದೀಗ ಈ ಬಗ್ಗೆ ಪಿಸಿಬಿ ಸ್ಪಷ್ಟನೆ ನೀಡಿದೆ.

ಪಾಕಿಸ್ತಾನ ಆತಿಥ್ಯ ವಹಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಭಾಗವಹಿಸುವ ರಾಷ್ಟ್ರಗಳ ಧ್ವಜಗಳನ್ನು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರದರ್ಶಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವಿವಾದಕ್ಕೆ ಕಾರಣವಾಗಿತ್ತು.

ಈ ವೀಡಿಯೊದಲ್ಲಿ ಭಾರತದ ಧ್ವಜವನ್ನು ಕ್ರೀಡಾಂಗಣದಲ್ಲಿ ಹಾರಿಸಲಾಗಿರಲ್ಲ ಎಂಬುದು ಸ್ಪಷ್ಟವಾಗಿತ್ತು. ಇದು ವ್ಯಾಪಕ ವಿವಾದ ಮತ್ತು ಬಿಸಿ ಚರ್ಚೆಗೆ ಕಾರಣವಾಗಿತ್ತು. ದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಆಡಲು ನಿರಾಕರಿಸಿದ್ದಕ್ಕಾಗಿ ಭಾರತದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತದ ವಿರುದ್ದ ತನ್ನ ಕೋಪವನ್ನು ಈ ಮೂಲಕ ಹೊರಹಾಕಿದೆ ಎಂದು ಟೀಕಿಸಲಾಗಿತ್ತು.

ಇದೀಗ ಈ ವಿವಾದ ಸಂಬಂಧ ಪಿಸಿಬಿ ಸ್ಪಷ್ಟನೆ ನೀಡಿದ್ದು, ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಗಾಗಿ ಪಾಕಿಸ್ತಾನದಲ್ಲಿ ಆಡುತ್ತಿರುವ ರಾಷ್ಟ್ರಗಳ ಧ್ವಜಗಳನ್ನು ಕ್ರೀಡಾಂಗಣಗಳಲ್ಲಿ ಮಾತ್ರ ಹಾರಿಸಲಾಗಿದೆ ಎಂದು ಹೇಳಿದೆ.

ಈ ಕುರಿತು ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ ಪಿಸಿಬಿ, 'ನಿಮಗೆ ತಿಳಿದಿರುವಂತೆ, ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಸಮಯದಲ್ಲಿ ಭಾರತ ತನ್ನ ಪಂದ್ಯಗಳನ್ನು ಆಡಲು ಪಾಕಿಸ್ತಾನಕ್ಕೆ ಬರುತ್ತಿಲ್ಲ.. ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣ, ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣ ಮತ್ತು ಲಾಹೋರ್‌ನ ಗಡಾಫಿ ಕ್ರೀಡಾಂಗಣವು ಈ ಸ್ಥಳಗಳಲ್ಲಿ ಆಡಲಿರುವ ದೇಶಗಳ ಧ್ವಜಗಳನ್ನು ಮಾತ್ರ ಹಾರಿಸಲಾಗಿದೆ" ಎಂದು ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಂಗ್ಲಾದೇಶ ಧ್ವಜ ಕೂಡ ಮಿಸ್ಸಿಂಗ್

ಅಂತೆಯೇ ಕರಾಚಿ ಮತ್ತು ಲಾಹೋರ್ ಕ್ರೀಡಾಂಗಣಗಳಲ್ಲಿ ಭಾರತ ಮಾತ್ರವಲ್ಲದೇ ಬಾಂಗ್ಲಾದೇಶ ದ್ವಜ ಕೂಡ ಇರಲಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರಿಸಿರುವ ಪಿಸಿಬಿ ಅಧಿಕಾರಿಗಳು, "ಭಾರತ ತಂಡವು ದುಬೈನಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಎರಡನೆಯದಾಗಿ, ಬಾಂಗ್ಲಾದೇಶ ತಂಡವು ಇನ್ನೂ ಪಾಕಿಸ್ತಾನಕ್ಕೆ ಬಂದಿಲ್ಲ. ಬಾಂಗ್ಲಾದೇಶ ದುಬೈನಲ್ಲಿ ಭಾರತದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದ್ದರಿಂದ, ಅವರ ಧ್ವಜಗಳನ್ನು ಹಾರಿಸಲಾಗಿಲ್ಲ. ಅವರು ಇನ್ನೂ ಪಾಕಿಸ್ತಾನಕ್ಕೆ ಆಗಮಿಸಿಲ್ಲ. ಹೀಗಾಗಿ ಇಲ್ಲಿಗೆ ಆಗಮಿಸಿರುವ ಮತ್ತು ಪಾಕಿಸ್ತಾನದಲ್ಲಿ ಆಡಲಿರುವ ಇತರ ರಾಷ್ಟ್ರಗಳ ಧ್ವಜಗಳು ಕ್ರೀಡಾಂಗಣದಲ್ಲಿವೆ ಎಂದು ಹೇಳಿದ್ದಾರೆ.

ಸ್ಪಷ್ಟನೆ ನೀಡುವ ಅವಶ್ಯಕತೆ ಪಿಸಿಬಿಗೆ ಇಲ್ಲ..

ಇದೇ ವೇಳೆ ಈ ವಿವಾದ ಸಂಬಂಧ ಯಾರಿಗೂ ಸ್ಪಷ್ಟನೆ ನೀಡುವ ಅವಶ್ಯಕತೆ ಪಿಸಿಬಿಗಿಲ್ಲ.. ಏಕೆಂದರೆ ಇದು ದುರುದ್ದೇಶಪೂರಿತ ಕಾರ್ಯಸೂಚಿಯೊಂದಿಗೆ ಸಾಮಾಜಿಕ ಮಾಧ್ಯಮ ಹರಿಬಿಡಲಾಗಿರುವ ವೀಡಿಯೊ ಎಂದು ಹೇಳಿದೆ. ಈ ವಿವಾದವು ಸತ್ಯಗಳಿಲ್ಲದೆ ಸೃಷ್ಟಿಸಲ್ಪಟ್ಟಿದೆ ಮತ್ತು ನಕಲಿ ಸುದ್ದಿಗಳ ಮೂಲಕ ಆತಿಥೇಯ ಪಾಕಿಸ್ತಾನದ ಇಮೇಜ್‌ಗೆ ಹಾನಿ ಮಾಡುವ ಗುರಿಯನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿದೆ" ಎಂದು ಅಧಿಕಾರಿ ಕಿಡಿಕಾರಿದ್ದಾರೆ.

ಅಂದಹಾಗೆ ಪಾಕಿಸ್ತಾನದ ವಿವಿಧ ಕ್ರೀಡಾಂಗಣಗಳು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಸಮಯದಲ್ಲಿ ವಿಭಿನ್ನ ತಂಡಗಳನ್ನು ಆಯೋಜಿಸಲಿವೆ. ಅವರನ್ನು ಸ್ವಾಗತಿಸಲು ಅವರು ತಮ್ಮ ಧ್ವಜಗಳನ್ನು ಹಾರಿಸುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ನಡೆಯಲಿರುವ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಸೇರಿದಂತೆ ಪಾಕಿಸ್ತಾನದ ನಗರಗಳು ಮುಖ್ಯ ಬೀದಿಗಳು ಮತ್ತು ಹೆದ್ದಾರಿಗಳಲ್ಲಿ ಬ್ಯಾನರ್‌ಗಳನ್ನು ಸ್ಥಾಪಿಸಿವೆ.

ದುಬೈನಲ್ಲಿ ಭಾರತದ ಪಂದ್ಯಗಳು

ಭದ್ರತಾ ಕಾಳಜಿ ಮತ್ತು ಎರಡೂ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಬಿಸಿಸಿಐ ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿದ್ದು, ಐಸಿಸಿ ಹೈಬ್ರಿಡ್ ಮಾದರಿಯನ್ನು ಜಾರಿಗೆ ತರಲು ಒತ್ತಾಯಿಸಿದೆ, ಇದರಲ್ಲಿ ಭಾರತ ತನ್ನ ಎಲ್ಲಾ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

ಎಂಟು ವರ್ಷಗಳ ವಿರಾಮದ ನಂತರ ಚಾಂಪಿಯನ್ಸ್ ಟ್ರೋಫಿ ಮರಳುತ್ತಿದೆ. ಪಾಕಿಸ್ತಾನ ಹಾಲಿ ಚಾಂಪಿಯನ್ ಆಗಿದ್ದು, 1996 ರ ವಿಶ್ವಕಪ್ ಅನ್ನು ಸಹ-ಆತಿಥ್ಯ ವಹಿಸಿದ ನಂತರ ಮೊದಲ ಬಾರಿಗೆ ಐಸಿಸಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT