ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ವೇಗಿ ಮಹಮದ್ ಶಮಿ ಇತಿಹಾಸ ನಿರ್ಮಿಸಿದ್ದು, ವೇಗವಾಗಿ 200 ವಿಕೆಟ್ ಪಡೆದ ಜಗತ್ತಿನ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶಮಿ ಈ ದಾಖಲೆ ನಿರ್ಮಾಣ ಮಾಡಿದ್ದು, ಆ ಮೂಲಕ ಆಸ್ಟ್ರೇಲಿಯಾ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿದ್ದ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಗುರುವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕರಾರುವಕ್ಕಾದ ಬೌಲಿಂದ್ ದಾಳಿ ನಡೆಸಿದ ಶಮಿ, 10 ಓವರ್ ಎಸೆದು 5.30 ಎಕಾನಮಿಯಲ್ಲಿ 53 ರನ್ ನೀಡಿ 5 ವಿಕೆಟ್ ಪಡೆದರು. ಆ ಮೂಲಕ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ವೇಗದ 200 ವಿಕೆಟ್
ಇನ್ನು ಈ ಪಂದ್ಯದ ಮೂಲಕ ಶಮಿ ಏಕದಿನ ಕ್ರಿಕೆಟ್ ನಲ್ಲಿ ವೇಗದ 200 ವಿಕೆಟ್ ಪಡೆದ ಜಗತ್ತಿನ ಬೌಲರ್ ಗಳ ಪಟ್ಟಿಯಲ್ಲಿ ಜಂಟಿ ಅಗ್ರ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ 102 ಪಂದ್ಯಗಳಲ್ಲಿ 200 ವಿಕೆಟ್ ಪಡೆದ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅಗ್ರ ಸ್ಥಾನಿಯಾಗಿದ್ದು, ತಲಾ 104 ಪಂದ್ಯಗಳಲ್ಲಿ 200 ವಿಕೆಟ್ ಪಡೆದ ಮಹಮದ್ ಶಮಿ ಹಾಗೂ ಪಾಕಿಸ್ತಾನದ ಸಕ್ಲೈನ್ ಮುಷ್ತಾಕ್ ಜಂಟಿ 2ನೇ ಸ್ಥಾನದಲ್ಲಿದ್ದಾರೆ. 107 ಪಂದ್ಯಗಳಲ್ಲಿ ಈ ಸಾಧನೆ ಮಾಡಿರುವ ಟ್ರೆಂಟ್ ಬೌಲ್ಟ್ 3, 112 ಪಂದ್ಯಗಳಲ್ಲಿ 200 ವಿಕೆಟ್ ಪಡೆದ ಮಾಜಿ ಆಸಿಸ್ ವೇಗಿ ಬ್ರೆಟ್ ಲೀ 4ನೇ ಸ್ಥಾನದಲ್ಲಿದ್ದಾರೆ.
Fewest ODIs to 200 wickets
102 Mitchell Starc
104 Mohammed Shami/ Saqlain Mushtaq
107 Trent Boult
112 Brett Lee
117 Allan Donald
ವೇಗದ 200 ವಿಕೆಟ್ (ಎಸೆತಗಳ ಲೆಕ್ಕಾಚಾರ)
ಇನ್ನು ಎಸೆತೆಗಳ ಲೆಕ್ಕಾಚಾರದಲ್ಲಿ ವೇಗವಾಗಿ 200 ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಶಮಿ ಅಗ್ರಸ್ಥಾನಿಯಾಗಿದ್ದು, ಶಮಿ ಕೇವಲ 5126 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 5240 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದು, ಅವರು 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಪಾಕಿಸ್ತಾನದ ಮಾಜಿ ಬೌಲರ್ ಸಕ್ಲೈನ್ ಮುಷ್ಚಾಕ್ 5451 ಎಸೆತಗಳಲ್ಲಿ 200 ವಿಕೆಟ್ ಕಬಳಿಸಿ 3ನೇ ಸ್ಥಾನಕ್ಕೆ ಜಾರಿದ್ದಾರೆ.
Fewest balls to 200 ODI wickets
5126 Mohammed Shami
5240 Mitchell Starc
5451 Saqlain Mushtaq
5640 Brett Lee
5783 Trent Boult
5883 Waqar Younis
ಭಾರತದ ಪರ ಅತೀ ಹೆಚ್ಚು ವಿಕೆಟ್
ಇನ್ನು ಐಸಿಸಿ ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಗಳ ಪಟ್ಟಿಯಲ್ಲಿ ಶಮಿ ಅಗ್ರಸ್ಥಾನಕ್ಕೇರಿದ್ದಾರೆ. ಇಂದಿನ ಪಂದ್ಯದ 5 ವಿಕೆಟ್ ಗಳ ಸಹಿತ ಶಮಿ ತಮ್ಮ ವಿಕೆಟ್ ಗಳಿಕೆಯನ್ನು 60ಕ್ಕೆ ಏರಿಕೆ ಮಾಡಿಕೊಂಡಿದ್ದು ಆ ಮೂಲಕ ಐಸಿಸಿ ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. 59 ವಿಕೆಟ್ ಪಡೆದಿರುವ ಮಾಜಿ ವೇಗಿ ಜಹೀರ್ ಖಾನ್ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
Most wkt for India in World Cup & Champions Trophy
60 Mohd Shami
59 Zaheer Khan
47 Javagal Srinath
43 Ravindra Jadeja