ಡ್ಯಾನಿಶ್ ಕನೇರಿಯಾ 
ಕ್ರಿಕೆಟ್

Champions Trophy 2025: ನಾಳೆ ಭಾರತ-ಪಾಕ್ ಪಂದ್ಯ; PCB ವಿರುದ್ದ ಡ್ಯಾನಿಶ್ ಕನೇರಿಯಾ ಕಿಡಿ! ಕಾರಣ ಇಷ್ಟೇ...

ಕರಾಚಿಯಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳಿಂದ ಸೋತಿದ್ದರಿಂದ 1996 ರಿಂದಾಚೆಗೆ ಇದೇ ಮೊದಲ ಬಾರಿಗೆ ತನ್ನದೇ ದೇಶದಲ್ಲಿ ನಡೆಯುತ್ತಿರುವ ಐಸಿಸಿ ಟೂರ್ನಮೆಂಟ್ ನಲ್ಲಿ ಪಾಕಿಸ್ತಾನ ತೀವ್ರ ಕಳಪೆ ಆಟ ಪ್ರದರ್ಶಿಸಿದೆ.

ಕರಾಚಿ: ಚಾಂಪಿಯನ್ಸ್ ಟ್ರೋಫಿಯ ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಣ ನಾಳೆ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಈ ಪಂದ್ಯದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಕಿಡಿಕಾರಿದ್ದಾರೆ. ಟೂರ್ನಮೆಂಟ್ ಗೆ ಬಲಿಷ್ಟ ತಂಡ ಕಟ್ಟುವುದರ ಬದಲು ಚಾಂಪಿಯನ್ಸ್ ಟ್ರೋಫಿ ಅತಿಥ್ಯಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ಅವರು ಆರೋಪಿಸಿದ್ದಾರೆ.

ಕರಾಚಿಯಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳಿಂದ ಸೋತಿದ್ದರಿಂದ 1996 ರಿಂದಾಚೆಗೆ ಇದೇ ಮೊದಲ ಬಾರಿಗೆ ತನ್ನದೇ ದೇಶದಲ್ಲಿ ನಡೆಯುತ್ತಿರುವ ಐಸಿಸಿ ಟೂರ್ನಮೆಂಟ್ ನಲ್ಲಿ ಪಾಕಿಸ್ತಾನ ತೀವ್ರ ಕಳಪೆ ಆಟ ಪ್ರದರ್ಶಿಸಿತ್ತು. ಅಲ್ಲದೇ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ಬಗ್ಗೆ ವಿವಾದ ಸೃಷ್ಟಿಸಿದ್ದಕ್ಕಾಗಿ PCB ವಿರುದ್ಧ ಮಾಜಿ ಬೌಲರ್ ಹರಿಹಾಯ್ದರು.

IANS ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಉತ್ತಮ ತಂಡ ನಿರ್ವಹಣೆ ಬಗ್ಗೆ ಯೋಚಿಸುವುದಕ್ಕಿಂತ ಚಾಂಪಿಯನ್ಸ್ ಟ್ರೋಫಿ ಆತಿಥ್ಯಕ್ಕೆ ಹೆಚ್ಚು ಗಮನ ನೀಡಿದೆ. ಅವರು ತಮ್ಮ ಕ್ರಿಕೆಟ್‌ನತ್ತ ಗಮನಹರಿಸಲ್ಲ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯ ನಡೆಯುವುದು ಎಂದು ತಿಳಿದಿದ್ದರೂ ಪಾಕಿಸ್ತಾನಕ್ಕೆ ಭಾರತ ಬರಲು ನಿರಾಕರಿಸಿದೆ ಎಂದು ವಿವಾದ ಸೃಷ್ಟಿಸಿದ್ದರು. ಇತ್ತೀಚೆಗೆ ನಡೆದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನವು ವೆಸ್ಟ್ ಇಂಡೀಸ್ ಸೋಲಿಸುವಲ್ಲಿ ವಿಫಲವಾಗಿತ್ತು ಎಂದು ತಿಳಿಸಿದರು.

ತಂಡದಲ್ಲಿ ಯಾವುದೇ ಸಮನ್ವಯ ಇಲ್ಲ. ಅವರು ಅಗತ್ಯವಿರುವ ಆಟಗಾರರನ್ನು ತಂಡದಿಂದ ಹೊರಗಿಟ್ಟಿದ್ದಾರೆ. ಫಖರ್ ಜಮಾನ್ ಅವರನ್ನು ಹಾಗೆ ಮಾಡಿದ್ದರು. ಈಗ ಅವರನ್ನು ಮತ್ತೆ ತಂಡಕ್ಕೆ ಕರೆತಂದಿದ್ದಾರೆ. ಅವರು ಈ ತಂಡದ ಪ್ರಮುಖ ಆಟಗಾರರಾಗಿದ್ದು, ಈ ಹಿಂದೆ ಅದನ್ನು ಸಾಬೀತುಪಡಿಸಿದ್ದಾರೆ. ಪಾಕಿಸ್ತಾನದ ತಂಡದಲ್ಲಿ ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ವೇಗಿಗಳಾಗಿದ್ದು, ಅಬ್ರಾರ್ ಅಹ್ಮದ್ ಏಕೈಕ ಸ್ಪಿನ್ನರ್ ಆಗಿದ್ದಾರೆ. ಖುಷ್ದಿಲ್ ಶಾ ಮತ್ತು ಸಲ್ಮಾನ್ ಅಘಾ ಆಗಾಗ್ಗೆ ಸ್ಪೀನ್ ಮಾಡುತ್ತಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ತಂಡ ದುರ್ಬಲವಾಗಿದ್ದು, ಅವರ ಬೌಲಿಂಗ್ ದಾಳಿಯಲ್ಲಿ ಗುಣಮಟ್ಟದ ಸ್ಪಿನ್ನರ್ ಇಲ್ಲ ಎಂದರು.

ಪಾಕಿಸ್ತಾನಕ್ಕೆ ಹಲವು ಸಮಸ್ಯೆಗಳಿವೆ, ಅವರು ಫಖರ್ ಬದಲಿಗೆ ಇಮಾಮ್-ಉಲ್-ಹಕ್ ಅವರನ್ನು ಕರೆತಂದಿದ್ದಾರೆ. ಇಬ್ಬರು ಅಥವಾ ಮೂವರು ಉತ್ತಮ ಆಟಗಾರರಿದ್ದಾರೆ ಆದರೆ ಅವರನ್ನು ಹೊರತುಪಡಿಸಿ, ಬೇರೆ ಯಾವುದೇ ಉತ್ತಮ ಆಟಗಾರರು ಇಲ್ಲ. ಉತ್ತಮ ಬೌಲರ್ ಗಳು ಕೂಡಾ ಇಲ್ಲ. ಶಾಹೀನ್ ಅವರ ವೇಗ ಕುಸಿದಿದೆ,. ಅಬ್ರಾರ್ ಅಹ್ಮದ್ ಸ್ವಿನ್ನರ್ ಆದರು ಪ್ರತಿಭಾವಂತರಲ್ಲ. ಪಾಕಿಸ್ತಾನಕ್ಕೆ ಗುಣಮಟ್ಟದ ಸ್ಪಿನ್ನರ್ ಇಲ್ಲದ ಕಾರಣ ನೋಮನ್ ಅಲಿ ಏಕದಿನ ಪಂದ್ಯಗಳಲ್ಲಿ ಆಡಬೇಕು ಎಂದು ಭಾವಿಸುತ್ತೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT