ವಿರಾಟ್ ಕೊಹ್ಲಿ 
ಕ್ರಿಕೆಟ್

ಪಾಕ್ ವಿರುದ್ಧ ದಾಖಲೆಯ ಶತಕ: ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ ಕೊಹ್ಲಿ, ಹೇಳಿದ್ದು ಹೀಗೆ...

ನನ್ನ ಕೌಶಲ್ಯದ ಮೇಲೆ ಗಮನ ಕೇಂದ್ರೀಕರಿಸುವುದು ನನ್ನ ಕೆಲಸ. ಸ್ಪಿನ್ನರ್‌ಗಳ ವಿರುದ್ಧ ಮಧ್ಯಮ ಓವರ್‌ಗಳನ್ನು ಹೆಚ್ಚು ಅಪಾಯಗಳನ್ನು ತೆಗೆದುಕೊಳ್ಳದೆ ನಿಯಂತ್ರಿಸುವುದು ಇಂದಿನ ನನ್ನ ಕೆಲಸವಾಗಿತ್ತು.

ನವದೆಹಲಿ: ಭಾನುವಾರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೊನೆಯ ಎಸೆತದಲ್ಲಿ ಶತಕ ಸಿಡಿಸುವ ಮೂಲಕ ಭಾರತ ತಂಡ ಪಾಕಿಸ್ತಾನ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಲು ನೆರವಾದರು. ಇದು ಕೊಹ್ಲಿಯ 51ನೇ ಏಕದಿನ ಶತಕ ಮತ್ತು ಪಾಕಿಸ್ತಾನದ ವಿರುದ್ಧ 4ನೇ ಶತಕವಾಗಿದೆ.

ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಕೊಹ್ಲಿ, ಅರ್ಹತೆ ಬಗ್ಗೆ ತಿಳಿಸಲು ಮಹತ್ವದ ಪಂದ್ಯವೊಂದರಲ್ಲಿ ಆ ರೀತಿ ಬ್ಯಾಟಿಂಗ್ ಮಾಡಲು ಸಾಧ್ಯವಾದದ್ದು ಒಳ್ಳೆಯದು. ರೋಹಿತ್‌ರನ್ನು ಬೇಗನೇ ಕಳೆದುಕೊಂಡ ತಂಡಕ್ಕೆ ಕೊಡುಗೆ ನೀಡಿದ್ದಕ್ಕೆ ಸಂತಸವಾಗುತ್ತಿದೆ. ಕೊನೆಯ ಪಂದ್ಯದಲ್ಲಿ ನಾವು ಕಲಿತಿದ್ದನ್ನು ಅರ್ಥ ಮಾಡಿಕೊಳ್ಳಬೇಕಿತ್ತು' ಎಂದು ಹೇಳಿದರು.

ನನ್ನ ಕೌಶಲ್ಯದ ಮೇಲೆ ಗಮನ ಕೇಂದ್ರೀಕರಿಸುವುದು ನನ್ನ ಕೆಲಸ. ಸ್ಪಿನ್ನರ್‌ಗಳ ವಿರುದ್ಧ ಮಧ್ಯಮ ಓವರ್‌ಗಳನ್ನು ಹೆಚ್ಚು ಅಪಾಯಗಳನ್ನು ತೆಗೆದುಕೊಳ್ಳದೆ ನಿಯಂತ್ರಿಸುವುದು ಇಂದಿನ ನನ್ನ ಕೆಲಸವಾಗಿತ್ತು. ಕೊನೆಯಲ್ಲಿ ಶ್ರೇಯಸ್ ವೇಗವನ್ನು ಹೆಚ್ಚಿಸಿದರು ಮತ್ತು ನಾನು ಸಹ ಕೆಲ ಬೌಂಡರಿ ಹೊಡೆದೆ. ಇದು ನನ್ನ ಸಾಮಾನ್ಯ ODI ಆಟವನ್ನು ಆಡಲು ನನಗೆ ಅವಕಾಶ ಮಾಡಿಕೊಟ್ಟಿತು ಎಂದು ಹೇಳಿದರು.

'ನನ್ನ ಆಟದ ಬಗ್ಗೆ ನನಗೆ ತಿಳುವಳಿಕೆ ಇದೆ. ಹೊರಗಿನ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದಿರುವುದು, ನನ್ನ ಸ್ಥಾನದಲ್ಲಿ ಉಳಿಯುವುದು ಮತ್ತು ನನ್ನ ಶಕ್ತಿ ಸಾಮರ್ಥ್ಯ ಮತ್ತು ಆಲೋಚನೆಗಳ ಬಗ್ಗೆ ಗಮನ ತೆಗೆದುಕೊಳ್ಳಬೇಕಾಗಿತ್ತು. ಈ ಪಂದ್ಯ ಆ ನಿರೀಕ್ಷೆಗಳನೆಲ್ಲಾ ಸುಲಭಗೊಳಿಸಿತು. ಮುಂಬರುವ ದಿನಗಳಲ್ಲಿ ತಂಡದಲ್ಲಿ ಉಳಿದು ತಂಡಕ್ಕಾಗಿ ಕೆಲಸ ಮಾಡುವುದು ನನ್ನ ಕೆಲಸ' ಎಂದರು.

ಭಾನುವಾರ ನಡೆದ ಪಂದ್ಯದಲ್ಲಿ ಶತಕ ಬಾರಿಸಿದ ಕೊಹ್ಲಿ ಏಕದಿನ ಪಂದ್ಯಗಳಲ್ಲಿ 14,000 ರನ್‌ ತಲುಪಿದ ವೇಗದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇವಲ 287 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ಹಿಂದಿನ 350 ಇನ್ನಿಂಗ್ಸ್ ದಾಖಲೆಯನ್ನು ಮುರಿದರು.

ಚೆಂಡಿನ ವೇಗವಿರುವಾಗ ರನ್‌ ಪಡೆಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಇಲ್ಲದಿದ್ದರೆ ಸ್ಪಿನ್ನರ್ ಗಳು ಪಂದ್ಯದ ಗತಿ ಬದಲಾಯಿಸಬಹುದು. ಶುಭ್ ಮನ್ ಗಿಲ್ ಉತ್ತಮ ಪ್ರದರ್ಶನ ನೀಡಿದರು. ಅದೇ ಕಾರಣಕ್ಕೆ ಅವರು ವಿಶ್ವದ ನಂಬರ್ ಬ್ಯಾಟರ್ ಆಗಿದ್ದಾರೆ. ಪವರ್ ಪ್ಲೇ ನಲ್ಲಿ 60-70 ರನ್ ಗಳಿಸುವುದು ಅಗತ್ಯವಾಗಿತ್ತು. ನಂಬರ್ 4 ರಲ್ಲಿ ಬ್ಯಾಟಿಂಗ್ ಮಾಡಲು ಬಂದ ಶ್ರೇಯಸ್ಸ್ ಅಯ್ಯರ್, ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಮುಂದಿನ ದಿನಗಳಲ್ಲಿ ಇದೇ ರೀತಿಯ ಪ್ರದರ್ಶನ ನೀಡಲು ಪ್ರಯತ್ನ ಮುಂದುವರೆಸುತ್ತೇನೆ ಎಂದು ಕೊಹ್ಲಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT