ಕ್ರಿಕೆಟಿಗ ಕರುಣ್ ನಾಯರ್ 
ಕ್ರಿಕೆಟ್

Vijay Hazare Trophy 2024: ನೂತನ ವಿಶ್ವ ದಾಖಲೆ, ಭಾರತ ತಂಡದ ಆಯ್ಕೆ ಸಮಿತಿಗೆ ಭರ್ಜರಿ ಸಂದೇಶ ರವಾನಿಸಿದ Karun Nair!

ಭಾರತ ಕ್ರಿಕೆಟ್ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಹುಮ್ಮಸ್ಸಿನಲ್ಲಿರುವ ಕ್ರಿಕೆಟಿಗ ಕರುಣ್ ನಾಯರ್ ವಿಶ್ವ ದಾಖಲೆ ಮೂಲಕ ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಮಹತ್ವದ ಸಂದೇಶ ರವಾನಿಸಿದ್ದಾರೆ.

ನವದೆಹಲಿ: ಲೀಸ್ಟ್‌ ಎ ಕ್ರಿಕೆಟ್‌ನಲ್ಲಿ ಕ್ರಿಕೆಟಿಗ ಕರುಣ್ ನಾಯರ್ ನೂತನ ವಿಶ್ವ ದಾಖಲೆ ನಿರ್ಮಿಸಿದ್ದು, ಭಾರತ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಮಹತ್ವದ ಸಂದೇಶ ರವಾನಿಸಿದ್ದಾರೆ.

ಹೌದು.. ಭಾರತ ಕ್ರಿಕೆಟ್ ತಂಡಕ್ಕೆ ಕಮ್ ಬ್ಯಾಕ್ ಮಾಡುವ ಹುಮ್ಮಸ್ಸಿನಲ್ಲಿರುವ ಕ್ರಿಕೆಟಿಗ ಕರುಣ್ ನಾಯರ್ ವಿಶ್ವ ದಾಖಲೆ ಮೂಲಕ ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಮಹತ್ವದ ಸಂದೇಶ ರವಾನಿಸಿದ್ದಾರೆ. ಈ ಹಿಂದೆ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಬಲ್ ಶತಕ ಬಾರಿಸಿ ಸದ್ದು ಮಾಡಿದ್ದ ಕರುಣ್‌ ನಾಯರ್ ಈಗ ಮತ್ತೆ ಭಾರೀ ಸುದ್ದಿಯಲ್ಲಿದ್ದು, ವಿಜಯ್ ಹಜಾರೆ ಟ್ರೋಫಿ ಸರಣಿಯಲ್ಲಿ ಸತತ 3ನೇ ಶತಕ ಸಿಡಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್ ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಶುಕ್ರವಾರ ನಡೆದ ವಿಜಯ್ ಹಜಾರೆ ಟ್ರೋಫಿ ಡಿ ಗುಂಪಿನ ಪಂದ್ಯದಲ್ಲಿ ಉತ್ತರ ಪ್ರದೇಶದ ವಿರುದ್ಧ ಕರುಣ್ ನಾಯರ್ ಭರ್ಜರಿ ಶತಕ ಸಿಡಿಸಿದ್ದಾರೆ. ಉತ್ತರ ಪ್ರದೇಶ ಮೊದಲು ಬ್ಯಾಟ್ ಮಾಡಿ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 307 ರನ್‌ ಸೇರಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ವಿದರ್ಭ 47.2 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 313 ರನ್‌ ಸೇರಿಸಿ ಜಯ ಸಾಧಿಸಿತು.

ವಿದರ್ಭ ಜಯದಲ್ಲಿ ಮಹತ್ತರ ಪಾತ್ರ ವಹಿಸಿದ ನಾಯಕ ಕರುಣ್ ನಾಯರ್, ಕೇವಲ 101 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್‌ ಸಹಿತ 112 ರನ್‌ ಸಿಡಿಸಿದರು. ಕರುಣ್ ನಾಯರ್ ಗೆ ಉತ್ತಮ ಸಾಥ್ ನೀಡಿದ ವಿದರ್ಭದ ಮತ್ತೋರ್ವ ಆರಂಭಿಕ ಆಟಗಾರ ಯಶ್ ರಾಥೋಡ್ ಕೂಡ ಶತಕ ಸಿಡಿಸಿದರು. ಈ ಜೋಡಿ ಪವರ್ ಫುಲ್ ಪ್ರದರ್ಶನದ ನೆರವಿನಿಂದ ವಿದರ್ಭ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

ಕರುಣ್ ನಾಯರ್ ವಿಶ್ವದಾಖಲೆ

ಇನ್ನು ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಕರುಣ್ ನಾಯರ್ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಹಿಂದೆ ಇದೇ ಸರಣಿಯಲ್ಲಿ ಕರುಣ್‌ ನಾಯರ್ ಮೊದಲ ಪಂದ್ಯದಲ್ಲಿ ಜಮ್ಮು ವಿರುದ್ಧ ಅಜೇಯ 112, ಚತ್ತೀಸಗಢ ವಿರುದ್ಧ ಅಜೇಯ 44, ಚಂಡೀಗಡ್ ವಿರುದ್ಧ ಅಜೇಯ 163, ತಮಿಳುನಾಡು ವಿರುದ್ಧ ಅಜೇಯ 111 ರನ್‌ ಸಿಡಿಸಿದ್ದರು.

ಇದೀಗ ಉತ್ತರ ಪ್ರದೇಶ ವಿರುದ್ಧವೂ ಶತಕ ಸಿಡಿಸುವ ಮೂಲಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಅಂತೆಯೇ ನಾಯರ್ ಶುಕ್ರವಾರ ಯುಪಿ ವಿರುದ್ಧ ನಾಯರ್ 70 ರನ್‌ ಬಾರಿಸುತ್ತಿದ್ದಂತೆ ಲೀಸ್ಟ್ ಎ ಕ್ರಿಕೆಟ್‌ನಲ್ಲಿ ಔಟ್ ಆಗದೆ 500ಕ್ಕೂ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡರು.

ನ್ಯೂಜಿಲೆಂಡ್ ದಾಂಡಿಗನ ದಾಖಲೆ ಪತನ

ಈ ಮೂಲಕ ಈ ಹಿಂದೆ ನ್ಯೂಜಿಲೆಂಡ್‌ನ ಜೇಮ್ಸ್ ಫ್ರಾಂಕ್ಲಿನ್ (527) ಅವರ ದಾಖಲೆಯನ್ನು ಕರುಣ್‌ ಅಳಿಸಿ ಹಾಕಿದರು. ಇದರೊಂದಿಗೆ ಕರುಣ್ ನಾಯರ್ ಲಿಸ್ಟ್ "ಎ" ನಲ್ಲಿ ಒಮ್ಮೆಯೂ ಔಟಾಗದೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

Most runs scored in List A cricket without getting dismissed:

  • 1 - Karun Nair: 542 runs

  • 2 - James Franklin: 527 runs

  • 3 - Joshua van Heedren: 512 runs

  • 4 - Fakhar Zaman: 455 runs

  • 5 - Taufeeq Umar: 422 runs

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT