ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ 
ಕ್ರಿಕೆಟ್

'ಕ್ಯಾನ್ಸರ್ ಗೆದ್ದು ತಂಡಕ್ಕೆ ಮರಳಿದ್ದ Yuvraj Singh ವೃತ್ತಿ ಜೀವನ ಅಂತ್ಯಕ್ಕೆ Virat Kolhi ಕಾರಣ': Robin Uthappa ಸ್ಫೋಟಕ ಹೇಳಿಕೆ

ತಂಡಕ್ಕೆ ಆಯ್ಕೆಯಾಗಲು ಫಿಟ್ನೆಸ್ ಟೆಸ್ಟ್ ಪಾಸ್​ ಆಗಲು ಯುವರಾಜ್ ಸಿಂಗ್, 2 ಪಾಯಿಂಟ್ ಕಡಿಮೆ ಮಾಡಿ ಅಂತ ಕೇಳಿಕೊಂಡ್ರು.

ಮುಂಬೈ: ಯುವರಾಜ್ ಸಿಂಗ್ ಅವರ ಕ್ರಿಕೆಟ್‌ ಜೀವನ ಮೊಟಕುಗೊಳ್ಳಲು ವಿರಾಟ್ ಕೊಹ್ಲಿಯೇ ಕಾರಣ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಕರ್ನಾಟಕ ಮೂಲದ ರಾಬಿನ್ ಉತ್ತಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಏಕದಿನ ವಿಶ್ವಕಪ್ ಟೂರ್ನಿ ಬಳಿಕ ಕ್ಯಾನ್ಸರ್‌ ಗೆದ್ದು ಕ್ರಿಕೆಟ್‌ಗೆ ಮರಳಿದ ಆಲ್‌ರೌಂಡರ್‌ ಅವರ ಕ್ರಿಕೆಟ್‌ ಜೀವನ ಮೊಟಕುಗೊಳ್ಳಲು ಪರೋಕ್ಷವಾಗಿ ವಿರಾಟ್‌ ಕೊಹ್ಲಿ ಹೊಣೆಗಾರರು. ತಂಡಕ್ಕೆ ಮರಳಿ ಬಂದಾಗ ತಮಗೆ ಫಿಟ್ನೆಸ್‌ನಲ್ಲಿ ಕೆಲವು ರಿಯಾಯಿತಿ ನೀಡುವಂತೆ ಯುವಿ ಮನವಿ ಮಾಡಿದ್ದರು. ಇದಕ್ಕೆ ತಂಡದ ಆಗಿನ ನಾಯಕ ಕೊಹ್ಲಿ ಒಪ್ಪಿರಲಿಲ್ಲ. ಇದು ಅವರ ಕ್ರಿಕೆಟ್ ಜೀವನ ಬೇಗ ಅಂತ್ಯವಾಗಲು ಕಾರಣವಾಯಿತು ಎಂದು ಹೇಳಿದ್ದಾರೆ.

ಲಲ್ಲನ್‌ಟಾಪ್‌ ಯು ಟ್ಯೂಬ್‌ ಚಾನೆಲ್‌ನಲ್ಲಿ ‘ಟೇಕ್‌ ಯುವಿ ಪಾ’ಸ್‌ ಇನ್‌ಸ್ಟೆನ್ಸ್‌’ ಶೀರ್ಷಿಕೆಯ ಸಂದರ್ಶನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಾಬಿನ್ ಉತ್ತಪ್ಪ, 'ಕ್ಯಾನ್ಸರ್ ಗೆದ್ದ ಯುವರಾಜ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಯತ್ನಿಸಿದರು. ಅದರೆ ಅದಕ್ಕೆ ವಿರಾಟ್ ಕೊಹ್ಲಿ ಪರೋಕ್ಷ ತಡೆಯಾದರು ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿಯನ್ನು ಉದ್ದೇಶಿಸಿ ಮಾತನಾಡಿದ ಉತ್ತಪ್ಪ, 'ಯುವರಾಜ್ ಸಿಂಗ್ ಇತರ ಆಟಗಾರರೊಂದಿಗೆ ನಮಗೆ ವಿಶ್ವಕಪ್ ಗೆಲ್ಲಿಸಿಕೊಟ್ಟವರು. ಹಾಗೆ ನೋಡಿದರೆ ಎರಡು ವಿಶ್ವಕಪ್‌ ಅವರಿದ್ದಾಗ ಭಾರತ ಗೆದ್ದಿತ್ತು . ನಿಮ್ಮ (ಯುವಿ) ಶ್ವಾಸಕೋಶದ ಸಾಮರ್ಥ್ಯ ಕ್ಷೀಣಿಸಿದೆ ಎಂದು ನೀವು ಹೇಳಿದ್ದೀರಿ. ಅವರು ಒದ್ದಾಡುತ್ತಿದ್ದಾಗ ನಾಯಕರಾಗಿ ಅದನ್ನು ನೋಡಿದವರು ನೀವು (ಕೊಹ್ಲಿ). ನೀವು ಅವರ ಪರದಾಟ ನೋಡಿದ್ದೀರಿ. ನಾಯಕರಾಗಿ ನೀವು ಒಂದು ಮಟ್ಟ ಕಾಪಾಡಿಕೊಂಡಿದ್ದು ಸರಿ. ಆದರೆ ನಿಯಮಗಳಿಗೂ ಕೆಲವೊಮ್ಮೆ ಅಪವಾದಗಳಿರುತ್ತವೆ. ಅವರಿಗೆ ಆ ರಿಯಾಯಿತಿ ಕೊಡಬಹುದಿತ್ತು. ಏಕೆಂದರೆ ಅವರು ಟೂರ್ನಿಗಳನ್ನು ಗೆಲ್ಲಿಸಿಕೊಟ್ಟವರು, ಕ್ಯಾನ್ಸರ್ ಗೆದ್ದವರು ಎಂದು ಹೇಳಿದ್ದಾರೆ.

ಇಷ್ಟಕ್ಕೂ ಕೊಹ್ಲಿ ಮಾಡಿದ್ದೇನು? ಉತ್ತಪ್ಪ ಆರೋಪವೇನು?

ಕ್ಯಾನ್ಸರ್ ಗೆದ್ದ ಯುವಿ ಮತ್ತೆ ಕ್ರಿಕೆಟ್ ಫೀಲ್ಡ್​​ನಲ್ಲಿ ಯುದ್ಧ ಆಡೋಕೆ ಸಿದ್ಧವಾಗಿದ್ರು. ಆದ್ರೆ ಯುವರಾಜ್ ಸಿಂಗ್ ಗೆ ಅವಕಾಶ ಕೊಡಲು ಯಾರೂ ಮನಸ್ಸು ಮಾಡಲಿಲ್ಲವಂತೆ. ಅಂತೆಯೇ ತಂಡಕ್ಕೆ ಆಯ್ಕೆಯಾಗಲು ಫಿಟ್ನೆಸ್ ಟೆಸ್ಟ್ ಪಾಸ್​ ಆಗಲು ಯುವರಾಜ್ ಸಿಂಗ್, 2 ಪಾಯಿಂಟ್ ಕಡಿಮೆ ಮಾಡಿ ಅಂತ ಕೇಳಿಕೊಂಡ್ರು. ಆದ್ರೆ ಯುವಿ ಮನವಿಯನ್ನು ಅಂದಿನ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ತಂಡದ ಆಡಳಿತ ಮಂಡಳಿ ತಿರಸ್ಕರಿಸಿತು. ಯುವಿ ತಂಡದಲ್ಲಿ ಇಲ್ಲದೇ ಇದ್ರೂ, ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ರು. ನಂತರ ತಂಡಕ್ಕೆ ಕಮ್​ಬ್ಯಾಕ್ ಮಾಡಿದ ಯುವಿ, ಉತ್ತಮ ಪ್ರದರ್ಶನ ನೀಡಲಿಲ್ಲ. ಆಗ ಯಾರೂ ಯುವಿ ಬೆನ್ನಿಗೆ ನಿಲ್ಲಲಿಲ್ಲ. ಲೀಡರ್​ಶಿಪ್ ಗ್ರೂಪ್​ನಲ್ಲಿದ್ದವರು ಯಾರೂ ಸಪೋರ್ಟ್ ಮಾಡಲಿಲ್ಲ. ಆಗ ನಾಯಕನಾಗಿದ್ದ ಕೊಹ್ಲಿ ಕೂಡ, ಯುವಿಯ ಕೈ ಬಿಟ್ರು ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.

ಅಲ್ಲದೆ ಇದನ್ನು ನನಗೆ ಬೇರೆ ಯಾರೂ ಹೇಳಲಿಲ್ಲ. ಇದನ್ನು ನಾನೇ ಗಮನಿಸಿದ್ದೆ’ ಎಂದು ರಾಬಿನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಕಠಿಣ ಫಿಟ್ನೆಸ್ ಪರೀಕ್ಷೆ

ಅಂತೆಯೇ 2011 ಏಕದಿನ ವಿಶ್ವಕಪ್ ಗೆದ್ದ ನಂತರ ಯುವರಾಜ್ ಸಿಂಗ್​ಪಟ್ಟ ಕಷ್ಟ ಅಷ್ಟಿಷ್ಟಲ್ಲ.! ಚೆನ್ನಾಗಿದ್ದಾಗ ಎಲ್ಲರೂ ಯುವರಾಜನ ಜೊತೆ, ಹಿಂದೆ ಮುಂದೆ ಇರ್ತಿದ್ರು. ಆದ್ರೆ ಯುವಿ ಕಷ್ಟದಲ್ಲಿದ್ದಾಗ ಆಟಗಾರರು, ಮಂಡಳಿ ಅಷ್ಟೇ ಅಲ್ಲ. ತನ್ನ ಆಪ್ತಮಿತ್ರ ಕೊಹ್ಲಿ ಕೂಡ ಯುವರಾಜ್ ಸಿಂಗ್ ರನ್ನ ದೂರ ಮಾಡಿದರು. ವಿರಾಟ್ ಕೊಹ್ಲಿ ನಾಯಕತ್ವವೇ ವಿಭಿನ್ನ. ತಂಡದ ಸಹ ಆಟಗಾರರೆಲ್ಲಾ ಕೊಹ್ಲಿ ಲೆವೆಲ್ ರೀಚ್ ಆಗಬೇಕು. ಅದು ಫಿಟ್ನೆಸ್ ವಿಚಾರ ಇರಲಿ, ತಿನ್ನೋ ಅಭ್ಯಾಸ ಇರಲಿ, ಹೇಳೋದು ಕೇಳೋದು ಎಲ್ಲಾ, ಕೊಹ್ಲಿ ಸ್ಟ್ಯಾಂಡರ್ಡ್​ ರೀಚ್ ಆಗಬೇಕು. ಯಾರು ರೀಚ್ ಆಗಲ್ವೋ ಅವರನ್ನ ಕೊಹ್ಲಿ ತಂಡದಲ್ಲಿ ಇಟ್ಟುಕೊಳ್ಳೋದಿಲ್ಲ. ಅಂದು ಯುವರಾಜ್, ಕೊಹ್ಲಿ ಲೆವೆಲ್ ರೀಚ್ ಆಗಲಿಲ್ಲ. ಅದಕ್ಕೆ ಯುವಿಗೆ ಗೇಟ್​ಪಾಸ್ ನೀಡಲಾಯ್ತು​​ಎಂದು ಉತ್ತಪ್ಪ ಹೇಳಿದ್ದಾರೆ.

ತಂಡದಿಂದ ಹೊರಹಾಕಲ್ಪಟ್ಟ ಯುವಿ

ಇನ್ನು ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ದೇಶ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದ ಯುವರಾಜ್ ಸಿಂಗ್‌, 2011ರಲ್ಲಿ ಎಂ.ಎಸ್. ಧೋನಿ ನಾಯಕತ್ವದಲ್ಲಿ ಭಾರತ ತಂಡ ಏಕದಿನ ಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ತಂಡದಲ್ಲಿ ಮರಳಿ ಸ್ಥಾನ ಸಂಪಾದಿಸಿದ್ದ ಯುವರಾಜ್ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶತಕವನ್ನೂ ಬಾರಿಸಿದ್ದರು. ಆದರೆ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನದ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. 2019ರಲ್ಲಿ ಅವರು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT