ಭಾರತ- ಇಂಗ್ಲೆಂಡ್ ವೇಗಿ ಸಕೀಬ್ ಮಹಮೂದ್ online desk
ಕ್ರಿಕೆಟ್

T20 series: Pakistan ಮೂಲದ England ಆಟಗಾರನಿಗೆ ವೀಸಾ ನೀಡದೇ ಭಾರತದ ಗುನ್ನ; Flight ರದ್ದು, ಎದುರಾಳಿ ತಂಡ ಕಂಗಾಲು!

ಆತ ಈಗಾಗಲೇ ಇಂಗ್ಲೆಂಡ್ ಪರ 9ಏಕದಿನ ಪಂದ್ಯ, 2 ಟೆಸ್ಟ್ ಗಳನ್ನು ಆಡಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಇಂಗ್ಲೆಂಡ್ ತಂಡದ ತನ್ನ ಸಹವರ್ತಿ ಕ್ರಿಕೆಟಿಗರೊಟ್ಟಿಗೆ ಪ್ರಯಾಣಿಸಲು ಯುಎಇಗೆ ತೆರಳಬೇಕಿತ್ತು.

ನವದೆಹಲಿ: ಭಾರತ-ಇಂಗ್ಲೆಂಡ್ ಟಿ20 ಸರಣಿಗೆ ಇನ್ನು ಕೆಲವೇ ವಾರಗಳು ಬಾಕಿ ಇದ್ದು, ಇಂಗ್ಲೆಂಡ್ ಗೆ ಭಾರಿ ನಿರಾಶೆಯಾಗಿದೆ.

ಕಾರಣ ಇಷ್ಟೇ. ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುತ್ತಿರುವ ಪಾಕಿಸ್ತಾನ ಮೂಲದ ಕ್ರಿಕೆಟಿಗ, ವೇಗಿ ಸಕೀಬ್ ಮಹಮೂದ್ (England pacer Saqib Mahmood) ಗೆ ಇದು ಆತನ ಪ್ರಥಮ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಈತನಿಗೆ ಭಾರತ ಈ ವರೆಗೂ ವೀಸಾ ನೀಡದೇ ಇರುವುದು ಇಂಗ್ಲೆಂಡ್ ತಂಡವನ್ನು ಕಂಗಾಲಾಗಿಸಿದೆ.

ಆತ ಈಗಾಗಲೇ ಇಂಗ್ಲೆಂಡ್ ಪರ 9ಏಕದಿನ ಪಂದ್ಯ, 2 ಟೆಸ್ಟ್ ಗಳನ್ನು ಆಡಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಇಂಗ್ಲೆಂಡ್ ತಂಡದ ತನ್ನ ಸಹವರ್ತಿ ಕ್ರಿಕೆಟಿಗರೊಟ್ಟಿಗೆ ಪ್ರಯಾಣಿಸಲು ಯುಎಇಗೆ ತೆರಳಬೇಕಿತ್ತು.

ಡೈಲಿ ಮೇಲ್ ನ ವರದಿಯ ಪ್ರಕಾರ, ಸಕೀಬ್ ಮಹಮೂದ್ ಗೆ ಭಾರತ ಸರ್ಕಾರ ಈ ವರೆಗೂ ವೀಸಾ ನೀಡದ ಕಾರಣ ಆತನ flight ನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಸಕೀಬ್ ಮಹಮೂದ್ ಭಾಗಿಯಾಗುವುದು ಬಹುಕೇತ ಅನುಮಾನವಾಗಿದೆ. ಈ ವಿಷಯದಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.

ಆತ ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಬ್ರೈಡನ್ ಕಾರ್ಸ್ ಮತ್ತು ಮಾರ್ಕ್ ವುಡ್ ಅವರೊಂದಿಗೆ ಪೇಸ್ ಬೌಲಿಂಗ್ ಶಿಬಿರವನ್ನು ಸೇರಿಕೊಳ್ಳಲು ಯುಎಇಗೆ ತೆರಳಬೇಕಿತ್ತು. ಆದರೆ ಸಕೀಬ್ ಮಹಮೂದ್ ಪಾಸ್ಪೋರ್ಟ್ ಇನ್ನೂ ಭಾರತದ ರಾಯಭಾರ ಕಚೇರಿಯ ಕೈಯಲ್ಲೇ ಇದೆ. ಆದ್ದರಿಂದ ECB ಆತನ ಫ್ಲೈಟ್ ಟಿಕೆಟ್ ಗಳನ್ನು ರದ್ದುಗೊಳಿಸಿದೆ ಎಂದು ಡೈಲಿ ಮೇಲ್ ವರದಿ ಪ್ರಕಟಿಸಿದೆ.

"ಯುಕೆಯಲ್ಲಿನ ಹಿಮದ ಪರಿಸ್ಥಿತಿಯಿಂದಾಗಿ 27 ವರ್ಷದ ಆಟಗಾರನಿಗೆ ಹೊರಾಂಗಣದಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ, ಆದರೆ ಅವರ ಇಂಗ್ಲೆಂಡ್ ತಂಡದ ಸದಸ್ಯರು ಅಬುಧಾಬಿಯಲ್ಲಿ ವೇಗದ ಬೌಲಿಂಗ್ ಮಾರ್ಗದರ್ಶಕ ಜಿಮ್ಮಿ ಆಂಡರ್ಸನ್ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ."

ಮೊದಲ ಟಿ20ಐ ಜನವರಿ 22 ಬುಧವಾರ ಕೋಲ್ಕತ್ತಾದಲ್ಲಿ ನಡೆಯಲಿದೆ. ಉಳಿದ ಟಿ20ಐಗಳು ಕ್ರಮವಾಗಿ ಚೆನ್ನೈ, ರಾಜ್‌ಕೋಟ್, ಪುಣೆ ಮತ್ತು ಮುಂಬೈನಲ್ಲಿ ನಡೆಯಲಿವೆ. ಟಿ20ಐಗಳ ನಂತರ ಮುಂದಿನ ತಿಂಗಳು ಮೂರು ಏಕದಿನ ಪಂದ್ಯಗಳು ನಡೆಯಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT