ಮೊಣಕಾಲಿನಲ್ಲಿ ತಿರುಮಲ ಮೆಟ್ಟಿಲು ಹತ್ತಿದ ನಿತೀಶ್ ಕುಮಾರ್ ರೆಡ್ಡಿ 
ಕ್ರಿಕೆಟ್

Video: ಮೊಣಕಾಲಿನಲ್ಲಿ ತಿರುಮಲ ಬೆಟ್ಟ ಹತ್ತಿ, ತಿಮ್ಮಪ್ಪನಿಗೆ 'ಕಠಿಣ ಹರಕೆ' ತೀರಿಸಿದ ಕ್ರಿಕೆಟಿಗ Nitish Kumar Reddy!

ಟೀಮ್‌ ಇ೦ಡಿಯಾ ಯುವ ಕ್ರಿಕೆಟಿಗ ನಿತೀಶ್‌ ಕುಮಾರ್‌ ರೆಡ್ಡಿ ತಿರುಮಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನವನ್ನು ಪಡೆದಿದ್ದು, ಮಾತ್ರವಲ್ಲದೇ ತಿಮ್ಮಪ್ಪನಿಗೆ ಕಠಿಣ ಹರಕೆ ಕೂಡ ತೀರಿಸಿದ್ದಾರೆ.

ತಿರುಮಲ: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿ ಚೊಚ್ಚಲ ಸರಣಿಯಲ್ಲೇ ಶತಕ ಸಿಡಿಸಿದ್ದ ಭಾರತ ಕ್ರಿಕೆಟ್ ತಂಡದ ಉದಯೋನ್ಮುಖ ಕ್ರಿಕೆಟಿಗೆ ನಿತೀಶ್ ಕುಮಾರ್ ರೆಡ್ಡಿ ತಿಮ್ಮಪ್ಪನಿಗೆ 'ಕಠಿಣ ಹರಕೆ' ತೀರಿಸಿದ್ದಾರೆ.

ಟೀಮ್‌ ಇ೦ಡಿಯಾ ಯುವ ಕ್ರಿಕೆಟಿಗ ನಿತೀಶ್‌ ಕುಮಾರ್‌ ರೆಡ್ಡಿ ತಿರುಮಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನವನ್ನು ಪಡೆದಿದ್ದು, ಮಾತ್ರವಲ್ಲದೇ ತಿಮ್ಮಪ್ಪನಿಗೆ ಕಠಿಣ ಹರಕೆ ಕೂಡ ತೀರಿಸಿದ್ದಾರೆ.

ಗಮನಾರ್ಹ ಸ೦ಗತಿ ಏನೆ೦ದರೆ, ನಿತೀಶ್‌ ಕುಮಾರ್‌ ಅವರು ಕಾಲ್ನಡಿಗೆಯಲ್ಲಿ ತಿರುಮಲ ಬೆಟ್ಟಕ್ಕೆ ಹೋಗಿದ್ದು, ಮೊಣಕಾಲುಗಳಲ್ಲೇ ಮೆಟ್ಟಿಲುಗಳನ್ನು ಹತ್ತಿ ತಮ್ಮ ಹರಕೆ ತೀರಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಸ್ವತಃ ನಿತೀಶ್ ಕುಮಾರ್ ರೆಡ್ಡಿ ಅವರೇ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾ೦ನಲ್ಲಿ ಹ೦ಚಿಕೊ೦ಡಿದ್ದು, ಈ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

ಕಠಿಣ ಹರಕೆ

ಇನ್ನು ನಿತೀಶ್ ಕುಮಾರ್ ರೆಡ್ಡಿ ತಿರುಮಲಕ್ಕೆ ಕಾಲ್ನಡಿಗೆ ಹೋಗಿದ್ದು ಮಾತ್ರವಲ್ಲ ಪವಿತ್ರ ತಿರುಮಲಕ್ಕೆ ಮೆಟ್ಟಿಲುಗಳ ಮೂಲಕ ಮೊಣಕಾಲಿನಲ್ಲಿ ಸಾಗಿ ತಮ್ಮ ಹರಕೆ ತೀರಿಸಿದ್ದಾರೆ. ತಿರುಪತಿಯಿಂದ ತಿರುಮಲಕ್ಕೆ ಅಲಿಪಿರಿ ಮಾರ್ಗವಾಗಿ ಸುಮಾರು 12 ಕಿ.ಮೀ ದೂರವಿದ್ದು, ಈ ಮಾರ್ಗವು 3,550 ಮೆಟ್ಟಿಲುಗಳನ್ನು ಹೊಂದಿದೆ. ವಿಶೇಷವಾಗಿ ಕಡಿದಾಗಿದ್ದು, ಸಂಪೂರ್ಣ ಆರೋಗ್ಯವಂತ ಈ ಮಾರ್ಗವಾಗಿ ಸುಮಾರು 1 ರಿಂದ 1.5 ಗಂಟೆಗಳಲ್ಲಿ ತಿರುಮಲ ತಲುಪಬಹುದು.

ನಡಿಗೆಯ ವೇಗ ಮತ್ತು ನೀವು ಎಷ್ಟು ವಿರಾಮಗಳನ್ನು ತೆಗೆದುಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ಇದು ಪೂರ್ಣಗೊಳ್ಳಲು ಸುಮಾರು 3–6 ಗಂಟೆಗಳು ತೆಗೆದುಕೊಳ್ಳುತ್ತದೆ ಎಂದು ಕೆಲ ಭಕ್ತರು ಹೇಳಿದ್ದಾರೆ.

ಇಂತಹ ಕಡಿದಾದ ಮಾರ್ಗವನ್ನು ಕಾಲಿನಲ್ಲಿ ಹತ್ತಿ ಸಾಗುವುದೇ ಸವಾಲು ಎಂದುಕೊಂಡರೆ ನಿತೀಶ್ ಕುಮಾರ್ ರೆಡ್ಡಿ ಮೊಣಕಾಲಿನಲ್ಲಿ ಹತ್ತಿದ್ದಾರೆ. ಆ ಮೂಲಕ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಕಲ್ಪಿಸಿದ್ದಕ್ಕೆ ತಿಮ್ಮಪ್ಪನಿಗೆ ಹರಕೆ ತೀರಿಸಿದ್ದಾರೆ ಎನ್ನಲಾಗಿದೆ.

ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ್ದ ನಿತೀಶ್

ಇನ್ನು ಇತ್ತೀಚೆಗೆ ಮುಕ್ತಾಯವಾದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ ನಲ್ಲೂ ಅಮೋಘ ಪ್ರದರ್ಶನ ನೀಡಿ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರು. ಮೆಲ್ಬೋರ್ನ್‌ನಲ್ಲಿ ನಡೆದ ಟೆಸ್ಟ್‌ ಪ೦ದ್ಯದಲ್ಲಿ 171 ಎಸೆತಗಳಲ್ಲಿ 114 ರನ್‌ ಗಳಿಸುವಮೂಲಕ ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಶತಕವನ್ನು ಗಳಿಸಿದರು.

ಈ ಪ೦ದ್ಯದಲ್ಲಿ ಎ೦ಟನೇ ಸ್ಥಾನದಲ್ಲಿ ಬ್ಯಾಟಿ೦ಗ್‌ ಮಾಡಿದ ನಿತೀಶ್‌, ಮೊದಲ ಎಸೆತದಿ೦ದಲೇ ಸ್ಥಿರ ಪ್ರದರ್ಶನ ನೀಡಿ 8ನೇ ಸ್ಮಾನದಲ್ಲಿ ಬ೦ದು ಶತಕ ಗಳಿಸುವ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ 8ನೇ ಕ್ರಮಾಂಕದಲ್ಲಿ ಅತಿಹೆಚ್ಚು ರನ್‌ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊ೦ಡರು.

ಇದಕ್ಕೂ ಮೊದಲು ಈ ದಾಖಲೆ ಸ್ಮಿನ್‌ ದ೦ತಕಥೆ ಅನಿಲ್‌ ಕು೦ಬೈ (87) ಅವರ ಹೆಸರಿನಲ್ಲಿತ್ತು. ಆ ದಾಖಲೆಯನ್ನು ನಿತೀಶ್‌ ಮುರಿದಿದ್ದಾರೆ. ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ ಐದು ಟೆಸ್ಟ್‌ ಪ೦ದ್ಯದಲ್ಲಿ ನಿತೀಶ್‌ ಅವರು 37.25 ಸರಾಸರಿಯಲ್ಲಿ 298 ರನ್‌ ಗಳಿಸಿದರು. ಬೌಲಿಂಗ್‌ನಲ್ಲಿಯೂ 5 ವಿಕೆಟ್‌ ಕೂಡ ಪಡೆದಿದ್ದರು.

ತವರಿನಲ್ಲಿ ಭವ್ಯ ಸ್ವಾಗತ

ನಿತೀಶ್‌ ಕುಮಾರ್‌ ರೆಡ್ಡಿ ಅವರು ಆಸ್ಟ್ರೇಲಿಯಾ ಪ್ರವಾಸವನ್ನು ಮುಗಿಸಿ ತಮ್ಮ ತವರು ವಿಶಾಖಪಟ್ಟಣ೦ ತಲುಪಿದಾಗ, ಅವರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ದೊರೆಯಿತು. ಕುಟು೦ಬ ಸದಸ್ಯರು ಮತ್ತು ಅಭಿಮಾನಿಗಳು ನಿತೀಶ್‌ಗೆ ಹೂಮಾಲೆ ಮತ್ತು ಹೂಗುಚ್ಚಗಳನ್ನು ಅರ್ಪಿಸಿ ಬರಮಾಡಿಕೊ೦ಡರು. ಅನೇಕ ಅಭಿಮಾನಿಗಳು ಆಟೋಗ್ರಾಫ್‌ ಮತ್ತು ಫೋಟೋಗಳನ್ನು ತೆಗೆದುಕೊ೦ಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT