ಕರುಣ್ ನಾಯರ್ 
ಕ್ರಿಕೆಟ್

7 ಇನ್ನಿಂಗ್ಸ್, 5 ಶತಕ, 752 ರನ್, 6 ಬಾರಿ ನಾಟೌಟ್; ಸಾರ್ವಕಾಲಿಕ ದಾಖಲೆಯ ಅಂಚಿನಲ್ಲಿ Karun Nair; 'ಕ್ರಿಕೆಟ್ ದೇವರಿಗೇ' ಅಚ್ಚರಿ!

ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿರುವ ವಿದರ್ಭ ಬ್ಯಾಟ್ಸ್‌ಮನ್ ಕರುಣ್ ನಾಯರ್ ಕೇವಲ 7 ಇನ್ನಿಂಗ್ಸ್ ಗಳಲ್ಲಿ 5 ಶತಕ, 1 ಅರ್ಧಶತಕದ ಸಹಿತ 752 ರನ್ ಕಲೆಹಾಕಿದ್ದಾರೆ.

ನವದೆಹಲಿ: ಕೇವಲ 7 ಇನ್ನಿಂಗ್ಸ್ ಗಳಲ್ಲಿ 5 ಶತಕ ಸಹಿತ ಬರೊಬ್ಬರಿ 752 ರನ್ ಸಿಡಿಸಿರುವ ಕ್ರಿಕೆಟಿಗ ಕರುಣ್ ನಾಯರ್ ರ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಪುಳಕಿತಗೊಂಡಿದ್ದಾರೆ.

ಹೌದು.. ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿರುವ ವಿದರ್ಭ ಬ್ಯಾಟ್ಸ್‌ಮನ್ ಕರುಣ್ ನಾಯರ್ ಕೇವಲ 7 ಇನ್ನಿಂಗ್ಸ್ ಗಳಲ್ಲಿ 5 ಶತಕ, 1 ಅರ್ಧಶತಕದ ಸಹಿತ 752 ರನ್ ಕಲೆಹಾಕಿದ್ದಾರೆ.

ಅವರು ಬರೊಬ್ಬರಿ 125.96 ಸ್ಟ್ರೈಕ್ ರೇಟ್ ನಲ್ಲಿ ಇಷ್ಟು ರನ್ ಕಲೆಹಾಕಿದ್ದು, ಅಜೇಯ 163 ರನ್ ಟೂರ್ನಿಯಲ್ಲಿ ಅವರ ಗರಿಷ್ಠ ವೈಯುಕ್ತಿಕ ಮೊತ್ತವಾಗಿದೆ. ಇನ್ನೂ ಅಚ್ಚರಿ ಎಂದರೆ ಆರು ಇನ್ನಿಂಗ್ಸ್‌ಗಳಲ್ಲಿ ಕರುಣ್ ನಾಯರ್ ಅಜೇಯರಾಗಿ ಉಳಿದಿದ್ದರು.

ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭವನ್ನು ಮುನ್ನಡೆಸುತ್ತಿರುವ ನಾಯರ್, ಶನಿವಾರ ವಡೋದರಾದಲ್ಲಿ ತಮ್ಮ ಮಾಜಿ ತಂಡ ಕರ್ನಾಟಕ ವಿರುದ್ಧದ ಪ್ರಶಸ್ತಿ ಪಂದ್ಯವನ್ನು (ಫೈನಲ್) ಆಡಲಿದ್ದಾರೆ. ನಾಯರ್ ಟೂರ್ನಿಯಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, ಏಳು ಪಂದ್ಯಗಳಲ್ಲಿ 752.00 ರ ಸರಾಸರಿಯಲ್ಲಿ 752 ರನ್ ಗಳಿಸಿದ್ದಾರೆ.

ಗುರುವಾರ ಮಹಾರಾಷ್ಟ್ರ ವಿರುದ್ಧದ ಸೆಮಿಫೈನಲ್‌ನಲ್ಲಿ, ನಾಯರ್ 44 ಎಸೆತಗಳಲ್ಲಿ 9 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳೊಂದಿಗೆ 88* ರನ್ ಗಳಿಸುವ ಮೂಲಕ ವಿದರ್ಭ ತಂಡವು ಪಂದ್ಯ ಗೆಲ್ಲುವ 380 ರನ್‌ಗಳನ್ನು ಗಳಿಸಲು ಸಹಾಯ ಮಾಡಿದರು. ಈ ಪಂದ್ಯದಲ್ಲಿ ಮಹಾರಾಷ್ಟ್ರ ಕೇವಲ 311/7 ಗಳಿಸಲು ಸಾಧ್ಯವಾಯಿತು.

ಸಾರ್ವಕಾಲಿಕ ದಾಖಲೆಯ ಅಂಚಿನಲ್ಲಿ ನಾಯರ್

ನಾಯರ್ ಪಂದ್ಯಾವಳಿಯಲ್ಲಿ ಸಾರ್ವಕಾಲಿಕ ದಾಖಲೆಯನ್ನು ಮುರಿಯುವ ಅಂಚಿನಲ್ಲಿದ್ದಾರೆ. ಅವರು ಪಂದ್ಯಾವಳಿಯಲ್ಲಿ ಇನ್ನೂ 79 ರನ್ ಗಳಿಸಿದರೆ, ಸಾರ್ವಕಾಲಿಕ ಗರಿಷ್ಠ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗುತ್ತಾರೆ. 2022/23 ರ ಆವೃತ್ತಿಯಲ್ಲಿ ತಮಿಳುನಾಡು ಬ್ಯಾಟ್ಸ್‌ಮನ್ ನಾರಾಯಣ್ ಜಗದೀಶನ್ ಅವರು ಒಟ್ಟು 8 ಪಂದ್ಯಗಳಿಂದ 830 ರನ್‌ ಗಳಿಸಿದ್ದರು. ಅವರ ಸರಾಸರಿ 138.33 ಆಗಿತ್ತು. ಅಂತೆಯೇ 125 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದರು. ಈ ಟೂರ್ನಿಯಲ್ಲಿ ಅವರು ಐದು ಶತಕಗಳನ್ನು ಸಿಡಿಸಿದ್ದರೆ, 277ರನ್ ಅವರ ಪಂದ್ಯವೊಂದರ ಅತ್ಯುತ್ತಮ ವೈಯುಕ್ತಿಕ ಸ್ಕೋರ್ ಆಗಿತ್ತು. ಇದೀಗ ಈ ದಾಖಲೆಯನ್ನು ನಾಯರ್ ಮುರಿಯುವ ಹೊಸ್ತಿಲಲ್ಲಿದ್ದಾರೆ.

ಕ್ರಿಕೆಟ್ ದೇವರಿಗೇ ಅಚ್ಚರಿ

ಇನ್ನು ಕರುಣ್ ನಾಯರ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, 'ಈ ರೀತಿಯ ಪ್ರದರ್ಶನಗಳು ಆಕಸ್ಮಿಕವಾಗಿ ಸಂಭವಿಸುವುದಿಲ್ಲ, ಅವು "ಅಗಾಧ ಗಮನ ಮತ್ತು ಕಠಿಣ ಪರಿಶ್ರಮದಿಂದ" ಬರುತ್ತವೆ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿನ್, '7 ಇನ್ನಿಂಗ್ಸ್‌ಗಳಲ್ಲಿ 5 ಶತಕಗಳೊಂದಿಗೆ 752 ರನ್ ಗಳಿಸುವುದು ಅಸಾಧಾರಣ, @karun126" ಎಂದು ಸಚಿನ್ ಬರೆದಿದ್ದಾರೆ. ಇಂತಹ ಪ್ರದರ್ಶನಗಳು ಕೇವಲ ಸಂಭವಿಸುವುದಿಲ್ಲ, ಅವು ಅಪಾರ ಗಮನ ಮತ್ತು ಕಠಿಣ ಪರಿಶ್ರಮದಿಂದ ಬರುತ್ತವೆ. ಬಲಿಷ್ಠವಾಗಿ ಮುಂದುವರಿಯಿರಿ ಮತ್ತು ಪ್ರತಿಯೊಂದು ಅವಕಾಶವನ್ನೂ ಗಣನೆಗೆ ತೆಗೆದುಕೊಳ್ಳಿ! ಎಂದು ಕರುಣ್ ನಾಯರ್ ಗೆ ಕಿವಿಮಾತು ಹೇಳಿದ್ದಾರೆ.

ಅಲ್ಲದೆ ಪರೋಕ್ಷವಾಗಿ ಆಯ್ಕೆ ಸಮಿತಿಗೂ ಇಂತಹ ಪ್ರತಿಭೆಗಳನ್ನು ಪರಿಗಣಿಸಿ ಎಂದು ಪರೋಕ್ಷವಾಗಿ ಕಿವಿಮಾತು ಹೇಳಿದ್ದಾರೆ.

ಮತ್ತೆ ತಂಡಕ್ಕೆ ಆಯ್ಕೆ ಮಾಡುವಂತೆ ಒತ್ತಾಯ

ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿನ ಈ ಅದ್ಭುತ ಪ್ರದರ್ಶನವು ನಾಯರ್ ಅವರನ್ನು ಕ್ರಿಕೆಟ್ ವಲಯ ಮತ್ತು ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರವಾಗಿಸಿದೆ, ಅನೇಕರು ಅವರನ್ನು ಭಾರತೀಯ ತಂಡಕ್ಕೆ ಮತ್ತೆ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

ಮಾರ್ಚ್ 2017 ರಲ್ಲಿ ಕೊನೆಯ ಬಾರಿಗೆ ಭಾರತ ಪರ ಆಡಿದ್ದ ನಾಯರ್, ದಂತಕಥೆಯ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ನಂತರ ಭಾರತ ಪರ ಟೆಸ್ಟ್ ತ್ರಿಶತಕ ಬಾರಿಸಿದ ಏಕೈಕ ಆಟಗಾರರಾಗಿದ್ದಾರೆ. 2016 ರಲ್ಲಿ ಭಾರತ ಪರ ಆಡಿದ ನಾಯರ್ ಈ ವರೆಗೂ ಆರು ಟೆಸ್ಟ್ ಪಂದ್ಯಗಳಲ್ಲಿ, ಅವರು ಏಳು ಇನ್ನಿಂಗ್ಸ್‌ಗಳಲ್ಲಿ 62.33 ಸರಾಸರಿಯಲ್ಲಿ 374 ರನ್ ಗಳಿಸಿದ್ದಾರೆ, ಅವರ ಅತ್ಯುತ್ತಮ ಸ್ಕೋರ್ 303*. ನಾಯರ್ ಭಾರತ ಪರ ಎರಡು ಏಕದಿನ ಪಂದ್ಯಗಳನ್ನು ಆಡಿದ್ದು 46 ರನ್ ಗಳಿಸಿದ್ದಾರೆ, ಅತ್ಯುತ್ತಮ ಸ್ಕೋರ್ 39 ರನ್ ಆಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT