ಶಾರ್ದೂಲ್ ಠಾಕೂರ್ online desk
ಕ್ರಿಕೆಟ್

IPL 2025 ರಲ್ಲಿ ತಿರಸ್ಕಾರ, ನಿರ್ಲಕ್ಷ್ಯ: Ranji Trophy ಯಲ್ಲಿ ಫೀನಿಕ್ಸ್ ನಂತೆ ಎದ್ದು ನಿಂತ ಟೀಂ ಇಂಡಿಯಾ ಕ್ರಿಕೆಟಿಗ!

ಮೇಘಾಲಯ ವಿರುದ್ಧ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಮುಂಬೈ ತಂಡದ ಪರ ಬೌಲಿಂಗ್ ಆರಂಭಿಸಿದ ಠಾಕೂರ್, ಇನ್ನಿಂಗ್ಸ್‌ನ ನಾಲ್ಕನೇ ಎಸೆತದಲ್ಲಿ ನಿಶಾಂತ್ ಚಕ್ರವರ್ತಿ ವಿಕೆಟ್ ಪಡೆದರು.

ಮುಂಬೈ : ಐಪಿಎಲ್ 2025 ರ ಹರಾಜು ಪ್ರಕ್ರಿಯೆಯಲ್ಲಿ ತೀವ್ರ ನಿರ್ಲಕ್ಷ್ಯ, ತಿರಸ್ಕಾರಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಈಗ ಫೀನಿಕ್ಸ್ ನಂತೆ ಎದ್ದು ನಿಂತಿದ್ದು, Ranji Trophy ಯಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.

ಮುಂಬೈ ನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ತೀವ್ರ ಹಣಾಹಣಿ ಏರ್ಪಟ್ಟಿದ್ದ ಮುಂಬೈ- ಮೇಘಾಲಯ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಂಬೈ ತಂಡದ ಆಟಗಾರನಾಗಿದ್ದ ಶಾರ್ದೂಲ್ ಠಾಕೂರ್, ತಂಡದ ಪರ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದಾರೆ.

ಮೇಘಾಲಯ ವಿರುದ್ಧ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಮುಂಬೈ ತಂಡದ ಪರ ಬೌಲಿಂಗ್ ಆರಂಭಿಸಿದ ಠಾಕೂರ್, ಇನ್ನಿಂಗ್ಸ್‌ನ ನಾಲ್ಕನೇ ಎಸೆತದಲ್ಲಿ ನಿಶಾಂತ್ ಚಕ್ರವರ್ತಿ ವಿಕೆಟ್ ಪಡೆದರು. ಇದಕ್ಕೂ ಮೊದಲು ಮೂರನೇ ಓವರ್‌ನಲ್ಲಿ ಅನಿರುದ್ಧ್ ಬಿ, ಸುಮಿತ್ ಕುಮಾರ್ ಮತ್ತು ಜಸ್ಕಿರತ್ ಅವರನ್ನು ಔಟ್ ಮಾಡಿದರು. ಹಿಮಾಚಲ ಪ್ರದೇಶದ ರಿಷಿ ಧವನ್ ಪಾಂಡಿಚೇರಿ ವಿರುದ್ಧದ ನಂತರ 2024/25 ರ ರಣಜಿ ಟ್ರೋಫಿ ಋತುವಿನಲ್ಲಿ ಹ್ಯಾಟ್ರಿಕ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಠಾಕೂರ್ ಪಾತ್ರರಾದರು. ಇದಲ್ಲದೆ, 33 ವರ್ಷದ ಅವರು ರಣಜಿ ಟ್ರೋಫಿ ಇತಿಹಾಸದಲ್ಲಿ ಹ್ಯಾಟ್ರಿಕ್ ಪಡೆದ ಮುಂಬೈನಿಂದ ಐದನೇ ಬೌಲರ್ ಆಗಿದ್ದಾರೆ.

1943/44 ರಲ್ಲಿ ಬರೋಡಾ ವಿರುದ್ಧ ಜೆಹಾಂಗೀರ್ ಬೆಹ್ರಾಮ್‌ಜಿ ಖೋಟ್ (ಬಾಂಬೆ), 1963/64 ರಲ್ಲಿ ಗುಜರಾತ್ ವಿರುದ್ಧ ಉಮೇಶ್ ನಾರಾಯಣ್ ಕುಲಕರ್ಣಿ (ಬಾಂಬೆ), 1973/74 ರಲ್ಲಿ ಸೌರಾಷ್ಟ್ರ ವಿರುದ್ಧ ಅಬ್ದುಲ್ ಮೂಸಾಭಾಯಿ ಇಸ್ಮಾಯಿಲ್ (ಬಾಂಬೆ) ಮತ್ತು 2023/24 ರಲ್ಲಿ ಬಿಹಾರ ವಿರುದ್ಧ ರಾಯ್‌ಸ್ಟನ್ ಹೆರಾಲ್ಡ್ ಡಯಾಸ್ (ಮುಂಬೈ) ಹ್ಯಾಟ್ರಿಕ್ ಸಾಧನೆ ಮಾಡಿರುವ ಇತರ ನಾಲ್ಕು ಬೌಲರ್‌ಗಳಾಗಿದ್ದಾರೆ.

ಈ ಋತುವಿನಲ್ಲಿ ಇದುವರೆಗೆ ಏಳು ಪಂದ್ಯಗಳಲ್ಲಿ ಠಾಕೂರ್ 20 ವಿಕೆಟ್‌ಗಳು ಮತ್ತು ಒಂದು ಶತಕ ಮತ್ತು ಎರಡು ಅರ್ಧಶತಕಗಳೊಂದಿಗೆ 297 ರನ್‌ಗಳನ್ನು ಗಳಿಸಿದ್ದಾರೆ. ಠಾಕೂರ್ ಜೊತೆಗೆ, ಮೋಹಿತ್ ಅವಸ್ಥಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಮುಂಬೈ ಮೇಘಾಲಯವನ್ನು 12 ಓವರ್‌ಗಳಲ್ಲಿ 29-6ಕ್ಕೆ ಇಳಿಸಿತು.

ಗ್ರೂಪ್ ಎ ನಲ್ಲಿ ಮೂರನೇ ಸ್ಥಾನದಲ್ಲಿರುವ ಮುಂಬೈ, ಬೋನಸ್ ಪಾಯಿಂಟ್ ಪಡೆಯಲು ನಡೆಯುತ್ತಿರುವ ಪಂದ್ಯವನ್ನು ಇನ್ನಿಂಗ್ಸ್ ಅಥವಾ 10 ವಿಕೆಟ್‌ಗಳಿಂದ ಗೆಲ್ಲಬೇಕಾಗುತ್ತದೆ. ಈ ಅಂತರದಲ್ಲಿ ಗೆದ್ದರೆ ತಂಡಾ ಜಮ್ಮು-ಕಾಶ್ಮೀರ (29 ಅಂಕಗಳು) ದೊಂದಿಗೆ ಸಮ ಬಲ ಸಾಧಿಸುತ್ತದೆ ಮತ್ತು 27 ಅಂಕಗಳೊಂದಿಗೆ ಬರೋಡಾ ಎರಡನೇ ಸ್ಥಾನದಲ್ಲಿದೆ.

ಜಮ್ಮು-ಕಾಶ್ಮೀರ ಅಥವಾ ಬರೋಡಾ ವಡೋದರಾದಲ್ಲಿ ನಡೆಯುವ ತಮ್ಮ ಅಂತಿಮ ಸುತ್ತಿನ ಪಂದ್ಯದಿಂದ ಒಂದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸದೇ ಇದ್ದಲ್ಲಿ ಅದು ಮುಂಬೈಗೆ ಸಕಾರಾತ್ಮವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT