ಕೆಎಲ್ ರಾಹುಲ್-ರಿಷಬ್ ಪಂತ್ 
ಕ್ರಿಕೆಟ್

3ನೇ ಟೆಸ್ಟ್: ರಾಹುಲ್ 'ತಾಳ್ಮೆ' ಅರ್ಧಶತಕ: ಬುಮ್ರಾ ಪರಾಕ್ರಮ; 2ನೇ ದಿನದಾಟದಂತ್ಯಕ್ಕೆ ಭಾರತ 145/3!

ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ದಾಳಿ ಇಂಗ್ಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಸ್ಕೋರ್ ಗಳಿಸುವುದನ್ನು ತಡೆಯಿತು. ಇನ್ನು ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅರ್ಧಶತಕ ಗಳಿಸುವ ಮೂಲಕ ಭಾರತೀಯ ಇನ್ನಿಂಗ್ಸ್ ಅನ್ನು ನಿಭಾಯಿಸಿದರು.

ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ದಾಳಿ ಇಂಗ್ಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಸ್ಕೋರ್ ಗಳಿಸುವುದನ್ನು ತಡೆಯಿತು. ಇನ್ನು ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅರ್ಧಶತಕ ಗಳಿಸುವ ಮೂಲಕ ಭಾರತೀಯ ಇನ್ನಿಂಗ್ಸ್ ಅನ್ನು ನಿಭಾಯಿಸಿದರು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್ ಗಳಿಸಿತ್ತು.

ಎರಡನೇ ದಿನದ ಆಟದ ಅಂತ್ಯದ ವೇಳೆಗೆ, ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳಿಗೆ 145 ರನ್ ಗಳಿಸಿದ್ದು ಇಂಗ್ಲೆಂಡ್‌ 242 ರನ್‌ ಮುನ್ನಡೆಯಲ್ಲಿದೆ. ಸದ್ಯ ಕೆ.ಎಲ್. ರಾಹುಲ್ ಅಜೇಯ 53 ರನ್‌ ಮತ್ತು ರಿಷಭ್ ಪಂತ್ 19 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ. ಇಂಗ್ಲೆಂಡ್‌ನಿಂದ ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ತಲಾ ಒಂದು ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಪರ ಯಶಸ್ವಿ ಜೈಸ್ವಾಲ್ ಶೀಘ್ರವೇ ಔಟಾದರು. ಜೈಸ್ವಾಲ್ ಎಂಟು ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಾಯದಿಂದ 13 ರನ್ ಗಳಿಸಿದ ನಂತರ ಔಟಾದರು. ಯಶಸ್ವಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಜೋಫ್ರಾ ಆರ್ಚರ್ ಎಸೆತದಲ್ಲಿ ಹ್ಯಾರಿ ಬ್ರೂಕ್‌ಗೆ ಕ್ಯಾಚ್ ನೀಡಿದರು. ಇದಾದ ನಂತರ, ಕೆ.ಎಲ್. ರಾಹುಲ್ ಮತ್ತು ಕರುಣ್ ನಾಯರ್ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡರು. ಇಬ್ಬರು ಬ್ಯಾಟ್ಸ್‌ಮನ್‌ಗಳು ಎರಡನೇ ವಿಕೆಟ್‌ಗೆ 61 ರನ್‌ಗಳ ಜೊತೆಯಾಟವಾಡಿದರು. ಬೆನ್ ಸ್ಟೋಕ್ಸ್ ಕರುಣ್ ಅವರನ್ನು ಔಟ್ ಮಾಡುವ ಮೂಲಕ ಇದನ್ನು ಮುರಿದರು. ಕರುಣ್ ಉತ್ತಮ ಲಯದಲ್ಲಿ ಕಾಣುತ್ತಿದ್ದರು, ಆದರೆ 62 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 40 ರನ್ ಗಳಿಸಿದ್ದಾಗ ಔಟ್ ಆಗಿದ್ದರು.

ಇಂಗ್ಲೆಂಡ್ ಶುಭಮನ್ ಗಿಲ್ ರೂಪದಲ್ಲಿ ಮೂರನೇ ವಿಕೆಟ್ ಪಡೆಯಿತು. ಕ್ರಿಸ್ ವೋಕ್ಸ್ ಶುಭಮನ್ ಗಿಲ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಮೂರನೇ ಹೊಡೆತ ನೀಡಿದರು. ಕಳೆದ ಟೆಸ್ಟ್‌ನಲ್ಲಿ ದ್ವಿಶತಕ ಮತ್ತು ಶತಕ ಗಳಿಸಿದ್ದ ನಾಯಕ ಗಿಲ್, ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 16 ರನ್ ಗಳಿಸಿ ಔಟಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬೆದರಿಕೆ ನಡುವೆ 'ಆರ್ ಎಸ್ ಎಸ್' ಕುರಿತು ಸಿಎಂಗೆ ಮತ್ತೊಂದು ಪತ್ರ ಬರೆದ ಪ್ರಿಯಾಂಕ್ ಖರ್ಗೆ! ಇದರಲ್ಲಿ ಏನಿದೆ?

ಮುಳುಗುತ್ತಿದೆ ದೊಡ್ಡಣ್ಣನ ಸಾಮ್ರಾಜ್ಯ! (ಹಣಕ್ಲಾಸು)

ಮಕ್ಕಳ ಜೀವ ತೆಗೆದ ಕೆಮ್ಮಿನ ಸಿರಪ್ ಬಳಿಕ ಭೀತಿ ಹುಟ್ಟಿಸುತ್ತಿವೆ 'ಆ್ಯಂಟಿಬಯಾಟಿಕ್'ಗಳು

India vs Australia ODI Series: ವಿರಾಟ್, ರೋಹಿತ್ ಶರ್ಮಾ ನಿವೃತ್ತಿ? ಸುಳಿವು ನೀಡಿದ ರವಿಶಾಸ್ತ್ರಿ!

ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ: Donald Trump

SCROLL FOR NEXT