ಮೊಹಮ್ಮದ್ ಸಿರಾಜ್ 
ಕ್ರಿಕೆಟ್

ಇಂಗ್ಲೆಂಡ್ ವಿರುದ್ಧದ 3 ನೇ ಟೆಸ್ಟ್: ಜೇಮ್ ಸ್ಮಿತ್ ವಿಕೆಟ್ ಪಡೆದು ಆಕಾಶದತ್ತ ಮುಖ ಮಾಡಿ ಕೈ ಬೆರಳು ತೋರಿಸಿದ ಸಿರಾಜ್! ಕಾರಣವೇನು?

ಜೀವನ ಎಂಬುದನ್ನು ಯಾರೂ ಊಹಿಸಿಕೊಳ್ಳಲಾಗದು. ಮುಂದೆ ಏನು ಆಗುತ್ತದೆ ಎಂಬುದನ್ನು ಯಾರಿಗೂ ಗೊತ್ತಿರುವುದಿಲ್ಲ.

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ನ 2ನೇ ದಿನದಂದು ಜೇಮ್ ಸ್ಮಿತ್ ಅವರ ವಿಕೆಟ್ ಪಡೆದ ನಂತರ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರು ತಮ್ಮ ಕೈ ಬೆರಳುಗಳ ಮೂಲಕ ತೋರಿಸಿದ ಸಂದೇಶ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.

ಈ ಕುರಿತು ಮಾತನಾಡಿರುವ ಸಿರಾಜ್, ಲಿವರ್‌ಪೂಲ್ ಫುಟ್ ಬಾಲ್ ಆಟಗಾರ ಡಿಯೊಗೊ ಜೋಟಾ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ಕೇಳಿ ನಿಜಕ್ಕೂ ಭಾವೋದ್ವೇಗಕ್ಕೆ ಒಳಗಾಗಿದ್ದೆ. ಹಾಗಾಗೀ ಅವರಿಗೆ ಮೈದಾನದಲ್ಲಿ ನಮನ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಸ್ಮಿತ್ ವಿಕೆಟ್ ಪಡೆದ ನಂತರ ಸಿರಾಜ್, ಜೋಟಾ ಅವರ ಜರ್ಸಿ ಸಂಖ್ಯೆ 20ರ ಸಂಕೇತವಾಗಿ ತನ್ನ ಬೆರಳುಗಳನ್ನು ತೋರಿಸುವ ಮೂಲಕ ಎರಡೂ ಕೈಗಳನ್ನು ಆಕಾಶಕ್ಕೆ ಎತ್ತಿ ಗೌರವ ನಮನ ಸಲ್ಲಿಸಿದ್ದರು. ಜೋಟಾ ಅವರು ತಮ್ಮ ಸಹೋದರ ಆಂಡ್ರೆ ಸಿಲ್ವಾ ಅವರೊಂದಿಗೆ ಜುಲೈ 3 ರಂದು ಸ್ಪೇನ್‌ನ ಝಮೊರಾ ಪ್ರದೇಶದಲ್ಲಿ ತರಬೇತಿಗಾಗಿ ಲಿವರ್‌ಪೂಲ್‌ಗೆ ಹಿಂದಿರುಗುತ್ತಿದ್ದಾಗ ಅಪಘಾತದಲ್ಲಿ ನಿಧನರಾದರು.

ಕಳೆದ ಟೆಸ್ಟ್ ಪಂದ್ಯದಲ್ಲಿಯೇ ಅವರಿಗೆ ಗೌರವ ಸಲ್ಲಿಸಲು ಬಯಸಿದ್ದೆ ಎಂದು ಸಿರಾಜ್ ತಿಳಿಸಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಳೆದ ಪಂದ್ಯದಲ್ಲಿ ಡಿಯಾಗೊ ಜೋಟಾ ಕಾರು ಅಪಘಾತದಲ್ಲಿ ನಿಧನರಾದ ಸುದ್ದಿ ತಿಳಿದಿತ್ತು. ನಾನು ಪೋರ್ಚಗಲ್ ಅಭಿಮಾನಿಯಾಗಿರುವುದರಿಂದ ಸಹಜವಾಗಿಯೇ ಭಾವೋದ್ವೇಗಕ್ಕೆ ಒಳಗಾಗಿದ್ದೆ. ಅವರಿಗೆ ಕಳೆದ ಪಂದ್ಯದಲ್ಲಿಯೇ ಗೌರವ ಸಲ್ಲಿಸಲು ಬಯಸಿದ್ದೆ. ಈ ವಿಚಾರವನ್ನು ಕುಲದೀಪ್ ಯಾದವ್ ಜೊತೆಗೂ ಹಂಚಿಕೊಂಡಿದ್ದೆ. ಶುಕ್ರವಾರ ವಿಕೆಟ್ ಪಡೆದ ನಂತರ ಆ ರೀತಿಯ ಸಂದೇಶದ ಮೂಲಕ ಗೌರವ ಸಲ್ಲಿಸಿದ್ದೇನೆ ಎಂದು ಹೇಳಿದರು.

ಜೀವನ ಎಂಬುದನ್ನು ಯಾರೂ ಊಹಿಸಿಕೊಳ್ಳಲಾಗದು. ಮುಂದೆ ಏನು ಆಗುತ್ತದೆ ಎಂಬುದನ್ನು ಯಾರಿಗೂ ಗೊತ್ತಿರುವುದಿಲ್ಲ. ಕಾರು ಅಪಘಾತದಿಂದ ಜೋಟಾ ನಿಧನದ ಸುದ್ದಿ ಕೇಳಿ ಶಾಕ್ ಆಗಿತ್ತು. ನಾನು ವಿಕೆಟ್ ಪಡೆದ ತಕ್ಷಣ ಅವರ ಜೆರ್ಸಿ ನಂಬರ್ 20 ತಲೆಗೆ ಬಂತು. ಇದೇ ಕಾರಣದಿಂದ ಮೈದಾನದಲ್ಲಿ ಆ ರೀತಿ ವರ್ತಿಸಿದ್ದಾಗಿ ಸಿರಾಜ್ ಹೇಳಿರುವ ವಿಡಿಯೋವನ್ನು ಬಿಸಿಸಿಐ ಫೋಸ್ಟ್ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕಾ ಮೇಲೆ ಭಾರತ ನಂಬಲಸಾಧ್ಯ ತೆರಿಗೆಯನ್ನು ವಿಧಿಸಿದ್ದು, ಇದು ವಿಶ್ವದಲ್ಲೇ ಅತ್ಯಧಿಕ: ಸುಂಕಾಸ್ತ್ರ ಕ್ರಮಕ್ಕೆ ಟ್ರಂಪ್ ಸಮರ್ಥನೆ

ನಿಮ್ಮ-ಭಾರತ ಸಂಬಂಧಕ್ಕೆ ನಮ್ಮ ತಕರಾರಿಲ್ಲ ಆದರೆ, ನಮ್ಮ ಬಾಂಧವ್ಯ ಗಟ್ಟಿಗೊಳಿಸೋಣ: ರಷ್ಯಾಗೆ ಪಾಕ್ ಮನವಿ

ಎರಡು ಗಂಟೆ ಮಳೆ - 20 ಕಿ.ಮೀ. ಟ್ರಾಫಿಕ್ ಜಾಮ್: ಮಿಲೇನಿಯಮ್ ಸಿಟಿ ನಗರಾಭಿವೃದ್ಧಿ ಟ್ರಿಪಲ್ ಎಂಜಿನ್ ಮಾದರಿ: BJP ಕಾಲೆಳೆದ ಕಾಂಗ್ರೆಸ್!

'ಸ್ವಾತಂತ್ರ್ಯ ಹೋರಾಟದಲ್ಲಿ ಯಾರ ಮನೆ ನಾಯಿ ಭಾಗವಹಿಸಿತ್ತೆಂದು ಬಹಿರಂಗ ಪಡಿಸಲಿ: ರಾಜ್ಯ ಸರ್ಕಾರದಲ್ಲಿ ಬಚ್ಚಲುಬಾಯಿ ಮಂತ್ರಿಗಳು!'

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ "ಐತಿಹಾಸಿಕ ನಿರ್ಧಾರ"; ಐದು ಪಾಲಿಕೆಗೆ ಆಯುಕ್ತರ ನೇಮಕ

SCROLL FOR NEXT