ಶುಭಮನ್ ಗಿಲ್ 
ಕ್ರಿಕೆಟ್

ಲಾರ್ಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು: 'ನಮಗೆ ಅದು ಬೇಕಿತ್ತು' ಎಂದ ನಾಯಕ ಶುಭಮನ್ ಗಿಲ್

ರವೀಂದ್ರ ಜಡೇಜಾ 181 ಎಸೆತಗಳಲ್ಲಿ 61 ರನ್‌ಗಳೊಂದಿಗೆ ಅಜೇಯರಾಗಿ ಹೋರಾಡಿದರು. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಜಡೇಜಾ ಅವರಿಗೆ ಉತ್ತಮ ಬೆಂಬಲ ನೀಡಿದರೂ, ತಂಡವು 170 ರನ್‌ಗಳಿಗೆ ಆಲೌಟ್ ಆಯಿತು.

ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 22 ರನ್‌ಗಳಿಂದ ಸೋಲು ಕಂಡಿದ್ದು. ತಮ್ಮ ತಂಡ ನೀಡಿದ ಹೋರಾಟದ ಬಗ್ಗೆ ಭಾರತದ ನಾಯಕ ಶುಭಮನ್ ಗಿಲ್ ತುಂಬಾ ಹೆಮ್ಮೆ ವ್ಯಕ್ತಪಡಿಸಿದರು. ಆದರೆ, ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 22 ರನ್‌ಗಳ ಸೋಲಿನಲ್ಲಿ ಒಂದು ಅರ್ಧಶತಕದ ಜೊತೆಯಾಟ ಮತ್ತು ಮೊದಲ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ ಅವರು ರನೌಟ್ ಆಗಿದ್ದೇ ಕಾರಣ ಎಂದರು.

ರವೀಂದ್ರ ಜಡೇಜಾ 181 ಎಸೆತಗಳಲ್ಲಿ 61 ರನ್‌ಗಳೊಂದಿಗೆ ಅಜೇಯರಾಗಿ ಹೋರಾಡಿದರು. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರು ಉತ್ತಮ ಬೆಂಬಲ ನೀಡಿದರು. ಆದರೂ ತಂಡವು 170 ರನ್‌ಗಳಿಗೆ ಆಲೌಟ್ ಆಯಿತು.

'ಇದು ಅತ್ಯಂತ ಹೆಮ್ಮೆಯ ಸಂಗತಿ. ಕೊನೆಯ ಅವಧಿವರೆಗೂ ತಂಡ ಉತ್ತಮ ಹೋರಾಟ ನೀಡಿತು. ಸಾಕಷ್ಟು ಬ್ಯಾಟರ್‌ಗಳು ಉಳಿದಿದ್ದರಿಂದ ನಮ್ಮ ಅವಕಾಶಗಳ ಬಗ್ಗೆ ನನಗೆ ಸಾಕಷ್ಟು ವಿಶ್ವಾಸವಿತ್ತು. ನಮಗೆ ಒಂದೆರಡು 50 ರನ್‌ಗಳ ಜೊತೆಯಾಟ ಅಗತ್ಯವಿತ್ತು. ಆದರೆ, ನಾವು ಅದನ್ನು ಪಡೆಯಲು ಸಾಧ್ಯವಾಗಲಿಲ್ಲ' ಎಂದು ಗಿಲ್ ಪಂದ್ಯದ ನಂತರದ ಬಹುಮಾನ ವಿತರಣಾ ಸಮಾರಂಭದಲ್ಲಿ ಹೇಳಿದರು.

'ಮೊದಲ ಇನಿಂಗ್ಸ್‌ನಲ್ಲಿ ಪಂತ್ ಅವರು ರನೌಟ್ ಆಗದೇ ಇದ್ದಿದ್ದರೆ, ಭಾರತ 70 ರಿಂದ 80 ರನ್‌ಗಳ ಮುನ್ನಡೆ ಸಾಧಿಸಬಹುದಿತ್ತು ಮತ್ತು ಐದನೇ ದಿನದ ಕಠಿಣ ಟ್ರ್ಯಾಕ್‌ನಲ್ಲಿ ಸುಮಾರು 200 ರನ್‌ಗಳನ್ನು ಬೆನ್ನಟ್ಟಬೇಕಾಗಿರಲಿಲ್ಲ' ಎಂದರು.

ಊಟಕ್ಕೆ ಮುಂಚಿತವಾಗಿ ಪಂತ್ ಜೊತೆ ಶತಕ ಗಳಿಸುವ ಬಗ್ಗೆ ಚರ್ಚಿಸಿದ್ದಾಗಿ ಕೆಎಲ್ ರಾಹುಲ್ ಹೇಳಿರುವ ಕುರಿತು ಆಟಗಾರರು ವೈಯಕ್ತಿಕ ಸಾಧನೆಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದಾರೆಯೇ ಎಂದು ಕೇಳಿದಾಗ, ಅವರು ಚರ್ಚೆ ನಡೆಸಿದ್ದಾರೆ ಎಂದು ಗಿಲ್ ಹೇಳಿದರು.

'ವಾಸ್ತವವಾಗಿ, ರನ್ ಗಳಿಸುವ ವಿಷಯದಲ್ಲಿ ಅವರು ತಪ್ಪು ನಿರ್ಧಾರ ತೆಗೆದುಕೊಂಡರು. ಕ್ರಿಕೆಟ್‌ನಲ್ಲಿ ಇಂತಹ ತಪ್ಪುಗಳು ಸಂಭವಿಸಬಹುದು. ನೀವು ಹತ್ತಿರದಿಂದ ನೋಡಿದರೆ, ಆಟಗಾರನು ಔಟ್ ಆಗುವ ಸಾಧ್ಯತೆ ಹೆಚ್ಚಿರುವ ಅಪಾಯಕಾರಿ ತುದಿಯ ಕಡೆಗೆ ಓಡುತ್ತಿದ್ದದ್ದು ಕೆಎಲ್ ರಾಹುಲ್' ಎಂದು ತಿಳಿಸಿದರು.

ಎರಡು ವಿಕೆಟ್‌ಗಳು ಬಾಕಿ ಇರುವಾಗಲೂ ರಕ್ಷಣಾತ್ಮಕ ಆಟವಾಡುವ ಬದಲು ದೊಡ್ಡ ಹೊಡೆತಗಳಿಗೆ ಹೋಗದಿರುವ ರವೀಂದ್ರ ಜಡೇಜಾ ಅವರ ತಂತ್ರವನ್ನು ಗಿಲ್ ಸಮರ್ಥಿಸಿಕೊಂಡರು.

'ಅವರಿಗೆ ಏನಾದರೂ ಸಂದೇಶ ನೀಡಲಾಗಿತ್ತೇ ಎಂದು ಕೇಳಿದಾಗ, 'ಅವರು ತುಂಬಾ ಅನುಭವಿ ಮತ್ತು ಯಾವುದೇ ಸಂದೇಶವನ್ನು ಕಳುಹಿಸಿರಲಿಲ್ಲ. ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಅದು ಕೊನೆಯ (ನಾಲ್ಕನೇ ದಿನ) ಗಂಟೆಯಾಗಿತ್ತು, ನಾವು ನಮ್ಮನ್ನು ಉತ್ತಮವಾಗಿ ಬಳಸಿಕೊಳ್ಳಬಹುದಿತ್ತು. ಟೆಸ್ಟ್ ಕ್ರಿಕೆಟ್‌ನ 15 ದಿನಗಳಲ್ಲಿ, ನಾವು ಗರಿಷ್ಠ ದಿನಗಳಲ್ಲಿ ಪ್ರಾಬಲ್ಯ ಸಾಧಿಸಿದ್ದೇವೆ. ಆದರೆ, ಸೆಷನ್ಸ್‌ಗಳು ಕೆಟ್ಟದಾಗಿದ್ದ ಕಾರಣ ನಾವು ಎರಡು ಪಂದ್ಯಗಳನ್ನು ಸೋತಿದ್ದೇವೆ. ಸರಣಿಯ ಸ್ಕೋರ್‌ಕಾರ್ಡ್ ನಾವು ಹೇಗೆ ಆಡಿದ್ದೇವೆ ಎಂಬುದನ್ನು ಪ್ರತಿಬಿಂಬಿಸುವುದಿಲ್ಲ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ತೀವ್ರ ವಿರೋಧದ ನಡುವೆಯೂ ಬಾನು ಮುಷ್ತಾಕ್ ಗೆ ದಸರಾ ಉದ್ಘಾಟನೆಗೆ ಜಿಲ್ಲಾಡಳಿತ ಅಧಿಕೃತ ಆಹ್ವಾನ! Video

ಪಾಕ್ ಹುಟ್ಟಡಗಿಸಿದ್ದ 'Game-Changer': ಭಾರತದ ಬತ್ತಳಿಕೆ ಸೇರಲಿವೆ ಮತ್ತಷ್ಟು S-400 ಏರ್ ಡಿಫೆನ್ಸ್ ಸಿಸ್ಟಮ್ಸ್!

VIKRAM-32: ಭಾರತದ ಹೊಸ ಬಾಹ್ಯಾಕಾಶ ದರ್ಜೆಯ ಮೈಕ್ರೋಪ್ರೊಸೆಸರ್, microchip ಮಹತ್ವ, ವಿಶೇಷತೆ ಏನು? ಇಲ್ಲಿದೆ ಮಾಹಿತಿ!

Indian Stock Market: GST ಕೌನ್ಸಿಲ್ ಸಭೆ ಎಫೆಕ್ಟ್; Sensex 410 ಅಂಕ ಏರಿಕೆ, ರೂಪಾಯಿ ಮೌಲ್ಯವೂ ಹೆಚ್ಚಳ!

Dharmasthala: ಸೌಜನ್ಯಾ ಪ್ರಕರಣದಲ್ಲಿ SIT ಮುಂದೆ ಹಾಜರಾದ Uday Jain ಹೇಳಿದ್ದೇನು?

SCROLL FOR NEXT