ಪಾಕಿಸ್ತಾನ ಕ್ರಿಕೆಟ್ ಮಂಡಳಿ 
ಕ್ರಿಕೆಟ್

104 ಕೋಟಿ ರೂ ಹೊಂದಿಸಲು ಟಿವಿ ಚಾನಲ್‌ಗಳ ಪರದಾಟ; ಪಾಕಿಸ್ತಾನದಲ್ಲಿ Asia Cup 2025 ಪ್ರಸಾರ ಅನುಮಾನ!

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮಾಧ್ಯಮ ಹಕ್ಕುಗಳಲ್ಲಿ PCB ಪಾಲು ಸುಮಾರು ಶೇ 25 ರಷ್ಟಿದ್ದು, ಅಂದರೆ 346 ರೂಪಾಯಿಯಷ್ಟಿದೆ. ಆದರೆ, ಭಾರತದ ಪಾಲು ಶೇ 65 ರಷ್ಟಿದೆ.

2025ರ ಏಷ್ಯಾ ಕಪ್ ಅಂತಿಮವಾಗಿ ಆರಂಭವಾಗಿದ್ದು, ಇತ್ತೀಚೆಗಷ್ಟೇ ಪಂದ್ಯಾವಳಿಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಅಡಚಣೆ ಉಂಟಾಗಿದ್ದು, ಪಂದ್ಯಾವಳಿಯ ಮಾಧ್ಯಮ ಹಕ್ಕುಗಳು ಪಾಕಿಸ್ತಾನದಲ್ಲಿ ಇನ್ನೂ ಮಾರಾಟವಾಗಿಲ್ಲ. ಕ್ರಿಕೆಟ್ ಪಾಕಿಸ್ತಾನದ ವರದಿ ಪ್ರಕಾರ, ಭಾರತೀಯ ಪ್ರಸಾರಕರು 104 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದು, ಪಾಕಿಸ್ತಾನದ ಚಾನಲ್‌ಗಳು ಆ ಮೊತ್ತವನ್ನು ಕಡಿಮೆ ಮಾಡಲು ಮಾತುಕತೆ ನಡೆಸುತ್ತಿವೆ ಎನ್ನಲಾಗಿದೆ.

2025ರ ಏಷ್ಯಾ ಕಪ್ ಸೆಪ್ಟೆಂಬರ್ 9 ರಂದು ಆರಂಭವಾಗಲಿದ್ದು, ಎರಡೂ ತಂಡಗಳು ಫೈನಲ್ ಪ್ರವೇಶಿಸಿದರೆ, ಅವರು ಮೂರು ಬಾರಿ ಮುಖಾಮುಖಿಯಾಗಬೇಕಾಗುತ್ತದೆ. ಈಮಧ್ಯೆ, ACCಯು 2031 ರವರೆಗಿನ ಎಂಟು ವರ್ಷಗಳ ಮಾಧ್ಯಮ ಹಕ್ಕುಗಳನ್ನು ಸೋನಿ ಇಂಡಿಯಾಕ್ಕೆ 1400 ಕೋಟಿ ರೂಪಾಯಿಗೆ ಮಾರಾಟ ಮಾಡಿತ್ತು. ಇದರಲ್ಲಿ ಮಹಿಳಾ ಪಂದ್ಯಾವಳಿಗಳು ಮತ್ತು ಎಮರ್ಜಿಂಗ್ ಕಪ್ ಸೇರಿದಂತೆ ಒಟ್ಟು 119 ಪಂದ್ಯಗಳು ಸೇರಿವೆ.

ಆದರೆ, ಪಾಕಿಸ್ತಾನದ ಯಾವುದೇ ಚಾನೆಲ್‌ಗಳು ಇಷ್ಟೊಂದು ದೊಡ್ಡ ಮೊತ್ತವನ್ನು ಪಾವತಿಸಿ ಹಕ್ಕನ್ನು ಪಡೆಯಲು ಆಸಕ್ತಿ ಹೊಂದಿಲ್ಲ. ಆದರೆ, ಕೆಲವು ಚಾನೆಲ್‌ಗಳು ಒಕ್ಕೂಟವನ್ನು ರಚಿಸುವ ಬಗ್ಗೆ ಮಾತುಕತೆ ನಡೆಸುತ್ತಿದ್ದು, ಅವು ಒಟ್ಟಾಗಿ ಮಾಧ್ಯಮ ಹಕ್ಕುಗಳನ್ನು ಪಡೆಯಬಹುದು. ಆದಾಗ್ಯೂ, ಅದರ ಡಿಜಿಟಲ್ ಹಕ್ಕುಗಳನ್ನು ಅಂತಿಮಗೊಳಿಸಲಾಗಿದೆ ಮತ್ತು ಸೋಮವಾರ ಅದರ ಬಗ್ಗೆ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮಾಧ್ಯಮ ಹಕ್ಕುಗಳಲ್ಲಿ PCB ಪಾಲು ಸುಮಾರು ಶೇ 25 ರಷ್ಟಿದ್ದು, ಅಂದರೆ 346 ರೂಪಾಯಿಯಷ್ಟಿದೆ ಎಂದು ವರದಿ ಬಹಿರಂಗಪಡಿಸಿದೆ. ಆದರೆ, ಭಾರತದ ಪಾಲು ಶೇ 65 ರಷ್ಟಿದೆ. ಅಂದರೆ ಪ್ರಸಾರಕರು ಏಷ್ಯಾ ಕಪ್‌ನಿಂದ ಭಾರಿ ಲಾಭ ಗಳಿಸುತ್ತಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 14 ರಂದು ನಡೆಯಲಿದ್ದು, ಅದರ ನಂತರ ಎರಡೂ ತಂಡಗಳು ಸೂಪರ್ 4 ನಲ್ಲಿ ಮತ್ತು ನಂತರ ಫೈನಲ್‌ನಲ್ಲಿ ಎದುರಾಗುವ ಸಾಧ್ಯತೆ ಇದೆ. ಭಾರತ ಮತ್ತು ಪಾಕಿಸ್ತಾನ ಯುಎಇ ಮತ್ತು ಒಮಾನ್ ಜೊತೆಗೆ ಒಂದೇ ಗುಂಪಿನಲ್ಲಿ ಸ್ಥಾನ ಪಡೆದರೆ, ಇನ್ನೊಂದು ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳಿರುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT