ಲಾರ್ಡ್ಸ್: ಲಾರ್ಡ್ಸ್ ಮೈದಾನದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ಚೆಂಡಿನ ವಿವಾದ ಮುಂದುವರೆದಿದ್ದು, ಹೊಸ ಬೆಳವಣಿಗೆಯಲ್ಲಿ ಅಂದು ಭಾರತಕ್ಕೆ ನೀಡಿದ್ದು ಬರೊಬ್ಬರಿ 35 ವರ್ಷಗಳಷ್ಟು ಹಳೆಯ ಚೆಂಡು ಎಂದು ಹೇಳಲಾಗಿದೆ.
ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದ್ದು, 'ಈ ತಿಂಗಳ ಆರಂಭದಲ್ಲಿ ಲಾರ್ಡ್ಸ್ ಟೆಸ್ಟ್‌ನ 3ನೇ ದಿನದಂದು ಬೆಳಗಿನ ಅವಧಿಯಲ್ಲಿ ಚೆಂಡನ್ನು ಎರಡು ಬಾರಿ ಬದಲಾಯಿಸಲಾಗಿತ್ತು. ಆ ಮೂಲಕ ಈ ಚೆಂಡಿನ ವಿವಾದ ಭುಗಿಲೆದ್ದಿತ್ತು. ಸರಣಿಯಲ್ಲಿ ಚೆಂಡು ಬದಲಾವಣೆ ಶಿಷ್ಟಾಚಾರದಿಂದ ಅತೃಪ್ತರಾದ ಪ್ರವಾಸಿ ಭಾರತ ತಂಡ ಈ ವಿಷಯವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಕೊಂಡೊಯ್ದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವರದಿಯ ಪ್ರಕಾರ, ಕೇವಲ 10 ಓವರ್‌ಗಳ ನಂತರ ಆಕಾರ ಕಳೆದುಕೊಂಡಿದ್ದ ಎರಡನೇ ಬದಲಿ ಚೆಂಡು 30-35 ವರ್ಷಗಳಷ್ಟು ಹಳೆಯದಾಗಿದೆ. ಶಿಷ್ಟಾಚಾರದ ಪ್ರಕಾರ ಬದಲಿ ಚೆಂಡು ಮೂಲಕ್ಕಿಂತ ಹಳೆಯದಾಗಿರಬೇಕು. ಆದರೆ 10 ಓವರ್‌ಗಳ ಹಳೆಯ ಚೆಂಡು ಸ್ಟಾಕ್‌ನಲ್ಲಿ ಇರಲಿಲ್ಲ ಎಂದು ಅಂಪೈರ್‌ಗಳು ತಂಡಕ್ಕೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
"ಲಾರ್ಡ್ಸ್‌ನಲ್ಲಿ, ಸುಮಾರು 10 ಓವರ್‌ಗಳ ನಂತರ, ಡ್ಯೂಕ್ಸ್ ಚೆಂಡು ತನ್ನ ಆಕಾರವನ್ನು ಕಳೆದುಕೊಂಡಿತು. ಇದು ಸರಣಿಯಲ್ಲಿ ಆಗಾಗ್ಗೆ ಸಂಭವಿಸುತ್ತಿದೆ. ಚೆಂಡು ಏಕರೂಪವಾಗಿ ಗೋಳಾಕಾರದಲ್ಲಿದೆಯೇ ಎಂದು ಪರಿಶೀಲಿಸಲು ಅಂಪೈರ್‌ಗಳು ಮೈದಾನದಲ್ಲಿ ಚೆಂಡು ಪರೀಕ್ಷೆ ಮಾಡುವ ರಿಂಗ್ ಮೂಲಕ ಪರೀಕ್ಷೆ ಮಾಡಿದ್ದರು. ಈ ರಿಂಗ್ ಗಳ ಮೂಲಕ ಮೂಲಕ ಹಾದುಹೋಗಲು ಚೆಂಡು ವಿಫಲವಾಗಿತ್ತು. ಆದಾಗ್ಯೂ, ಅಂಪೈರ್‌ಗಳ ಬಳಿ 10 ಓವರ್‌ಗಳು ಹಳೆಯದಾದ ಚೆಂಡು ಇರಲಿಲ್ಲ, ಆದ್ದರಿಂದ ಪಂದ್ಯದ ನಿರ್ಣಾಯಕ ಕ್ಷಣದಲ್ಲಿ ಭಾರತ ತಂಡವು 30-35 ಓವರ್‌ಗಳು ಹಳೆಯದಾದ ಚೆಂಡನ್ನೇ ಪಡೆಯಿತು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆದರೆ ಈ ವರದಿಯಲ್ಲಿ ಈ ಬದಲಿ ಚೆಂಡು ಸುಮಾರು 30-35 ವರ್ಷ ಹಳೆಯದಾಗಿದೆ ಎಂದು ವರದಿ ಹೇಳಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧಿಕಾರಿ, 'ನೀವು ಚೆಂಡನ್ನು ಬದಲಾಯಿಸಲು ಕೇಳಿದಾಗ, ನೀವು ಪಡೆಯುವ ಬದಲಿ ಚೆಂಡಿನ ವಯಸ್ಸಿನ ಬಗ್ಗೆ ನಿಮಗೆ ತಿಳಿಸಲಾಗುವುದಿಲ್ಲ. ಲಾರ್ಡ್ಸ್‌ನಲ್ಲಿ, ಬದಲಿ ಚೆಂಡುಗಳು 30 ರಿಂದ 35 ಓವರ್‌ಗಳು ಹಳೆಯದಾಗಿರುತ್ತದೆ ಎಂದು ನಮಗೆ ತಿಳಿಸಲಾಗಿಲ್ಲ. ನಮಗೆ ಹೇಳಿದ್ದರೆ, 10 ಓವರ್‌ಗಳಿಗೆ ಬಳಸಲಾದ ವಿರೂಪಗೊಂಡ ಚೆಂಡನ್ನು ನಾವು ಮುಂದುವರಿಸುತ್ತಿದ್ದೆವು. ಈ ಕುರಿತು ಐಸಿಸಿ ಮಧ್ಯಪ್ರವೇಶಿಸಬೇಕಾಗಿದೆ. ಈ ನಿಯಮವನ್ನು ಬದಲಾಯಿಸಬೇಕಾಗಿದೆ" ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.