ಅಹ್ಮದಾಬಾದ್: ಹಾಲಿ ಐಪಿಎಲ್ ಟೂರ್ನಿಯ ಇಂದು ನಡೆದ Qualifier 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಪಂಜಾಬ್ ಕಿಂಗ್ಸ್ ತಂಡ ದಾಖಲೆಗಳ ಸುರಿಮಳೆಯನ್ನೇ ಗೈದಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ Qualifier 2 ಪಂದ್ಯದಲ್ಲಿ ಮುಂಬೈ ನೀಡಿದ್ದ 204 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 19 ಓವರ್ ನಲ್ಲೇ 5 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿ 5 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಹಾಲಿ ಐಪಿಎಲ್ ಟೂರ್ನಿಯ ಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.
ಶ್ರೇಯಸ್ ಅಯ್ಯರ್ ಹೋರಾಟ
ಇನ್ನು ಈ ಪಂದ್ಯದಲ್ಲಿ ಪಂಜಾಬ್ ಪರ ನಾಯಕ ಶ್ರೇಯಸ್ ಅಯ್ಯರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 41 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ ಬರೊಬ್ಬರಿ 8 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ ಬರೊಬ್ಬರಿ ಅಜೇಯ 87 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ದಾಖಲೆಗಳ ಸುರಿಮಳೆ
ಇನ್ನು ಈ ಪಂದ್ಯದಲ್ಲಿ ಐಪಿಎಲ್ ಇತಿಹಾಸದ ಹಲವು ದಾಖಲೆಗಳು ಪತನವಾಗಿದ್ದು, ಐಪಿಎಲ್ ಇತಿಹಾಸದ ಪ್ಲೇಆಫ್ ನಲ್ಲಿ ಗರಿಷ್ಟ ರನ್ ಚೇಸ್, ಗರಿಷ್ಠ ಸಿಕ್ಸರ್ ಗಳು ಸೇರಿದಂತೆ ಹಲವು ದಾಖಲೆಗಳು ಪತನವಾಗಿದೆ.
ಮುಂಬೈ ಗರ್ವಭಂಗ
ಇನ್ನು 6 ಬಾರಿ ಐಪಿಎಲ್ ಟ್ರೋಫಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಇತಿಹಾಸದಲ್ಲೇ 200+ ರನ್ ಗಳಿಸಿದ್ದಾಗ ಸೋತೇ ಇರಲಿಲ್ಲ. ಆದರೆ ಇದೀಗ ಈ ದಾಖಲೆಯನ್ನೂ ಪಂಜಾಬ್ ಪತನ ಮಾಡಿದ್ದು ಮುಂಬೈ 200+ ಗಳಿಸಿದ್ದ ಪಂದ್ಯದಲ್ಲಿ ಗೆಲುವು ಸಾಧಿಸಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.
ಪ್ಲೇಆಫ್ ನಲ್ಲಿ ಗರಿಷ್ಛ ರನ್ ಚೇಸ್
ಅಂತೆಯೇ ಇದು ಐಪಿಎಲ್ ಇತಿಹಾಸದಲ್ಲೇ ಪ್ಲೇಆಫ್ ನಲ್ಲಿ ತಂಡವೊಂದರ ಗರಿಷ್ಟ ಯಶಸ್ವಿ ಚೇಸ್ ಆಗಿದೆ. ಪಂಜಾಬ್ ತಂಡ ಪ್ಲೇಆಫ್ ನಲ್ಲಿ ಗರಿಷ್ಛ ರನ್ ಚೇಸ್ ಮಾಡಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಐಪಿಎಲ್ ಇತಿಹಾಸದ ಪ್ಲೇ ಆಫ್ ಅಥವಾ ನಾಕೌಟ್ ಹಂತದ ಗರಿಷ್ಠ ರನ್ ಚೇಸ್ ಇದಾಗಿದೆ.
ಅತೀ ಹೆಚ್ಚು ಬಾರಿ 200+ ರನ್ ಚೇಸ್ ಮಾಡಿದ ಮೊದಲ ತಂಡ
ಇದೇ ವೇಳೆ ಪಂಜಾಬ್ ಕಿಂಗ್ಸ್ ಐಪಿಎಲ್ ನಲ್ಲಿ ಅತೀ ಹೆಚ್ಚು ಬಾರಿ 200+ ರನ್ ಚೇಸ್ ಮಾಡಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದ್ದು, ಇಂದಿನ ಪಂದ್ಯವೂ ಸೇರಿದಂತೆ ಪಂಜಾಬ್ ಐಪಿಎಲ್ ನಲ್ಲಿ ಈ ವರೆಗೂ 8 ಬಾರಿ 200+ ರನ್ ಚೇಸ್ ಮಾಡಿದೆ. ಅಂತೆಯೇ ಹಾಲಿ ಐಪಿಎಲ್ 2025 ಟೂರ್ನಿಯಲ್ಲಿ 9ನೇ ಬಾರಿಗೆ 200+ ರನ್ ಚೇಸ್ ಮಾಡಿದಂತಾಗಿದೆ. ಐಪಿಎಲ್ ಇತಿಹಾಸದಲ್ಲೇ ಒಂದೇ ಸೀಸನ್ ನಲ್ಲಿ ಅತೀ ಹೆಚ್ಚು ಬಾರಿ 200+ ರನ್ ಚೇಸ್ ಆದಂತಾಗಿದೆ.
The chase of 204 by Punjab Kings
Highest ever in IPL Playoffs/Knockout
First time ever 200+ successfully chased vs MI
Eighth time PBKS have chased 200+, the most by a team in IPL
Ninth successful 200+ chase in IPL 2025, the most in a single edition
ಶ್ರೇಯಸ್ ಅಯ್ಯರ್ ಸಿಕ್ಸರ್ ಗಳ ದಾಖಲೆ
ಇನ್ನು ಇಂದಿನ ಪಂದ್ಯದಲ್ಲಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಬರೊಬ್ಬರಿ 8 ಸಿಕ್ಸರ್ ಸಿಡಿಸಿದ್ದು, ಆ ಮೂಲಕ ಹಾಲಿ ಟೂರ್ನಿಯಲ್ಲಿ ತಮ್ಮ ಸಿಕ್ಸರ್ ಗಳ ಸಂಖ್ಯೆಯನ್ನು 38ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಐಪಿಎಲ್ ಇತಿಹಾಸದಲ್ಲೇ ಒಂದು ಸೀಸನ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಮಾಡಿದರು. ಅಂತೆಯೇ ಇಷ್ಟು ದಿನ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಗ್ಲೇನ್ ಮ್ಯಾಕ್ಲ್ ವೆಲ್ ದಾಖಲೆಯನ್ನು ಹಿಂದಿಕ್ಕಿದರು. ಮ್ಯಾಕ್ಸ್ ವೆಲ್ 2014ರ ಟೂರ್ನಿಯಲ್ಲಿ 36 ಸಿಕ್ಸರ್ ಸಿಡಿಸಿದ್ದರು. ಉಳಿದಂತೆ ಮೂರನೇ ಸ್ಥಾನದಲ್ಲಿರುವ ಕ್ರಿಸ್ ಗೇಯ್ಲ್ 2019ರಲ್ಲಿ 34, 2022ರಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್ 34 ಸಿಕ್ಸರ್ ಮತ್ತು 2018ರಲ್ಲಿ ಕೆಎಲ್ ರಾಹುಲ್ 32 ಸಿಕ್ಸರ್ ಸಿಡಿಸಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
Most sixes by a PBKS batter in a season
38 Shreyas Iyer (2025) *
36 Glenn Maxwell (2014)
34 Chris Gayle (2019)
34 Liam Livingstone (2022)
32 KL Rahul (2018)