ನಿಕೋಲಸ್ ಪೂರನ್ 
ಕ್ರಿಕೆಟ್

ಅಂತಾರಾಷ್ಟ್ರೀಯ ಕ್ರಿಕೆಟಿಗೆ ವೆಸ್ಟ್ ಇಂಡೀಸ್ ಆಟಗಾರ ನಿಕೋಲಸ್ ಪೂರನ್ ವಿದಾಯ!

ದಕ್ಷಿಣ ಆಫ್ರಿಕಾದ ವಿಕೆಟ್-ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಪೂರನ್ ಈ ನಿರ್ಧಾರ ಘೋಷಿಸಿದ್ದಾರೆ.

ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ , ಟಿ-20 ಅತ್ಯುತ್ತಮ ಬ್ಯಾಟರ್ ಆಗಿದ್ದ ನಿಕೋಲಸ್ ಪೂರನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಸೋಮವಾರ ರಾತ್ರಿ ವಿದಾಯ ಹೇಳಿದ್ದಾರೆ. ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ.

ದಕ್ಷಿಣ ಆಫ್ರಿಕಾದ ವಿಕೆಟ್-ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಪೂರನ್ ಈ ನಿರ್ಧಾರ ಘೋಷಿಸಿದ್ದಾರೆ.

ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಮುಂದುವರೆಯಲು ಅವರು ಬಯಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಫೋಸ್ಟ್ ಮಾಡಿರುವ ಪೂರನ್, ಹೆಚ್ಚು ಚಿಂತನೆ ಮತ್ತು ಚರ್ಚೆಯ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

29 ವರ್ಷದ ಪೂರನ್ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ 106 ಪಂದ್ಯಗಳಲ್ಲಿ ಆಡಿದ್ದಾರೆ. ಟಿ-20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಪರ ಅತಿ ಹೆಚ್ಚು 2,275 ರನ್ ಗಳಿಸಿದ ಆಟಗಾರ ಆಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬಾನು ಮುಷ್ತಾಕ್​ರಿಂದ ದಸರಾ ಉದ್ಘಾಟನೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ; ನಾಳೆ ವಿಚಾರಣೆ

CEC 'ಮತ ಕಳ್ಳರ ರಕ್ಷಕ'; ಕರ್ನಾಟಕದ ಆಳಂದ ಕ್ಷೇತ್ರದಲ್ಲಿ 6,000 ಮತದಾರರ ಹೆಸರು ಡಿಲೀಟ್: ರಾಹುಲ್ ಗಾಂಧಿ ಆರೋಪ; Video

ವೋಟ್ ಚೋರಿ ಬಗ್ಗೆ CID ಚುನಾವಣಾ ಆಯೋಗಕ್ಕೆ 18 ಪತ್ರ ಬರೆದಿದೆ, ಯಾವುದಕ್ಕೂ ಉತ್ತರ ಇಲ್ಲ: ಖರ್ಗೆ

Onlineನಲ್ಲಿ ಮತ ಅಳಿಸಲು ಸಾಧ್ಯವಿಲ್ಲ, ರಾಹುಲ್ ಗಾಂಧಿ ಮತಗಳ್ಳತನ ಆರೋಪ ಆಧಾರರಹಿತ: ಚುನಾವಣಾ ಆಯೋಗ

ಮತದಾರರನ್ನು 'ಸಾಮೂಹಿಕವಾಗಿ' ಡಿಲೀಟ್ ಮಾಡಲು ಬಿಜೆಪಿಯಿಂದ ಫಾರ್ಮ್ 7 'ದುರುಪಯೋಗ': ಪ್ರಿಯಾಂಕ್ ಖರ್ಗೆ

SCROLL FOR NEXT