ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಪಂದ್ಯ 
ಕ್ರಿಕೆಟ್

ICC Champions Trophy 2025: ಇಂಗ್ಲೆಂಡ್ ಹೀನಾಯ ದಾಖಲೆ, ದ.ಆಫ್ರಿಕಾಗೆ ಅತೀ ದೊಡ್ಡ ಜಯ!

ಕರಾಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ತನ್ನ ಅಂತಿಮ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ 7 ವಿಕೆಟ್ ಅಂತರದಲ್ಲಿ ಹೀನಾಯವಾಗಿ ಸೋತು ತವರಿನತ್ತ ಮುಖ ಮಾಡಿದೆ.

ಕರಾಚಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸತತ ಮೂರನೇ ಸೋಲು ಕಂಡ ಇಂಗ್ಲೆಂಡ್ ತಂಡ ಹೀನಾಯ ದಾಖಲೆಗೆ ಪಾತ್ರವಾಗಿದ್ದು, ಅತ್ತ ಭರ್ಜರಿ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ತನ್ನ ಅತೀ ದೊಡ್ಡ ಜಯ ದಾಖಲಿಸಿದೆ.

ಹೌದು.. ಕರಾಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ತನ್ನ ಅಂತಿಮ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ 7 ವಿಕೆಟ್ ಅಂತರದಲ್ಲಿ ಹೀನಾಯವಾಗಿ ಸೋತು ತವರಿನತ್ತ ಮುಖ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 38.2 ಓವರ್ ನಲ್ಲಿ ಕೇವಲ 179 ರನ್ ಗಳಿಗೇ ಆಲೌಟ್ ಆಯಿತು. 180ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ಕೇವಲ 29.1 ಓವರ್ ನಲ್ಲೇ 3 ವಿಕೆಟ್ ನಷ್ಟಕ್ಕೆ 181 ರನ್ ಪೇರಿಸಿ 7 ವಿಕೆಟ್ ಅಂತರದಲ್ಲಿ ಜಯಭೇರಿ ಭಾರಿಸಿತು.

ಇಂಗ್ಲೆಂಡ್ ಹೀನಾಯ ದಾಖಲೆ

ಇನ್ನು ಈ ಪಂದ್ಯದ ಸೋಲಿನ ಮೂಲಕ ಹಾಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ಸತತ ಮೂರನೇ ಸೋಲು ದಾಖಲಿಸಿದ್ದು ಆ ಮೂಲಕ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಸತತ ಗರಿಷ್ಠ ಸೋಲು ಕಂಡ ತಂಡಗಳ ಪಟ್ಟಿಯಲ್ಲಿ ಇಂಗ್ಲೆಂಡ್ ಸ್ಥಾನಗಳಿಸಿದೆ. ಇದಕ್ಕೂ ಮೊದಲು 2006ರಲ್ಲಿ ಜಿಂಬಾಬ್ವೆ, 2009ರಲ್ಲಿ ವೆಸ್ಟ್ ಇಂಡೀಸ್, 2013ರಲ್ಲಿ ಪಾಕಿಸ್ತಾನ ತಂಡಗಳು ಒಂದೂ ಗೆಲುವಿಲ್ಲದೇ ಟೂರ್ನಿ ಮುಕ್ತಾಯಗೊಳಿಸಿದ್ದವು. ಇದೀಗ ಈ ಪಟ್ಟಿಗೆ ಇಂಗ್ಲೆಂಡ್ ಕೂಡ ಸೇರ್ಪಡೆಯಾಗಿದೆ.

Most defeats in a CT edition without a single win

  • 3 - Zimbabwe in 2006

  • 3 - West Indies in 2009

  • 3 - Pakistan in 2013

  • 3 - England in 2025

ಸತತ ಸೋಲು

ಇದೇ ವೇಳೆ ಏಕದಿನ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ತಂಡದ ಸೋಲಿನ ಸರಪಳಿ ಕೂಡ ಮುಂದುವರೆದಿದ್ದು, ಏಕದಿನ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ಸತತ 7ನೇ ಸೋಲು ಕಂಡಿದೆ. ನವೆಂಬರ್ 2024ರಲ್ಲಿ ಆರಂಭವಾದ ಇಂಗ್ಲೆಂಡ್ ತಂಡದ ಸೋಲಿನ ಸರಪಳಿ ಈಗಲೂ ಮುಂದುವರೆದಿದೆ. ಇದಕ್ಕೂ ಮೊದಲು ಇದೇ ಇಂಗ್ಲೆಂಡ್ ತಂಡ 2000 ಅಕ್ಟೋಬರ್ ನಿಂದ 2001ರ ಜೂನ್ ವರೆಗೂ ಸತತ 11 ಏಕದಿನ ಪಂದ್ಯಗಳಲ್ಲಿ ಸೋತಿತ್ತು.

Most consecutive ODI defeats for England

  • 11 - October 2000 - June 2001

  • 7 - February 1985 - June 1985

  • 7 - March 1993 - May 1993

  • 7 - February 1999 - April 1999

  • 7 - June 2006 - September 2006

  • 7* - November 2024 - March 2025

ದಕ್ಷಿಣ ಆಫ್ರಿಕಾಗೆ 3ನೇ ಅತೀ ದೊಡ್ಡ ಜಯ

ಇಂದು ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ವಿರುದ್ಧ ಬರೊಬ್ಬರಿ 7 ವಿಕೆಟ್ ಅಂತರದಲ್ಲಿ ಜಯ ದಾಖಲಿಸಿದ್ದು ಆ ಮೂಲಕ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ತನ್ನ 3ನೇ ಅತೀ ದೊಡ್ಡ ಜಯ ದಾಖಲಿಸಿದೆ. ವಿಕೆಟ್ ಗಳ ಲೆಕ್ಕಾಚಾರದಲ್ಲಿ ದಕ್ಷಿಣ ಆಫ್ರಿಕಾಗೆ ಇದು 3ನೇ ಅತೀ ದೊಡ್ಡ ಜಯವಾಗಿದೆ. ಇದಕ್ಕೂ ಮೊದಲು 2004ರಲ್ಲಿ ಬಾಂಗ್ಲಾದೇಶ ವಿರುದ್ಧ 9 ವಿಕೆಟ್ ಅಂತರದ ಜಯ ದಾಖಲಿಸಿತ್ತು. ಇದಕ್ಕೂ ಮೊದಲು 2000ದಲ್ಲಿ ಇದೇ ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಅಂತರದಲ್ಲಿ ಗೆದ್ದು ಬೀಗಿತ್ತು.

Highest win-margins for SA in CT (by wickets)

  • By 9 wickets vs BAN, Edgbaston, 2004

  • By 8 wickets vs ENG, Nairobi, 2000

  • By 7 wickets vs ENG, Karachi, 2025

  • By 6 wickets vs ENG, Dhaka, 1998

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT