ಭಾರತ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದು, ನಾಯಕ ರೋಹಿತ್ ಶರ್ಮಾ ನಿವೃತ್ತಿಯ ಸುಳಿವು ನೀಡಿದ್ದಾರಾ? ಎಂಬ ಬಗ್ಗೆ ಕುತೂಹಲ ಮೂಡಿದೆ.
ಚಾಂಪಿಯನ್ಸ್ ಟ್ರೋಫಿಯ ನಂತರ ತಮ್ಮ ಏಕದಿನ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಿಸಿಸಿಐ ಮೂಲಗಳ ಪ್ರಕಾರ, ಟೂರ್ನಿಯ ಮುಕ್ತಾಯದ ಬೆನ್ನಲ್ಲೇ ಆಯ್ಕೆದಾರರ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಜೊತೆಗೆ ರೋಹಿತ್ ತಮ್ಮ ಭವಿಷ್ಯದ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.
ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಗೆದ್ದಿರುವುದರಿಂದ ಮಹೇಂದ್ರ ಸಿಂಗ್ ಧೋನಿ ನಂತರ ಒಂದಕ್ಕಿಂತ ಹೆಚ್ಚು ಐಸಿಸಿ ಈವೆಂಟ್‌ಗಳನ್ನು ಗೆದ್ದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.
ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ನಂತರ, ರೋಹಿತ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಟಿ20 ಆವೃತ್ತಿಯಿಂದ ನಿವೃತ್ತಿ ಘೋಷಿಸಿದ್ದರು ಮತ್ತು ಈಗ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವುದು ಇದು ರೋಹಿತ್‌ಗೆ ಏಕದಿನ ಆವೃತ್ತಿಯಲ್ಲಿ ಕೊನೆಯ ಪಂದ್ಯ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತೀಯ ಕ್ರಿಕೆಟ್‌ನಲ್ಲಿ, ಯಾವಾಗಲೂ ದೊಡ್ಡ ಆಟಗಾರರ ಭವಿಷ್ಯವನ್ನು ಸಾಮಾನ್ಯವಾಗಿ ಆಯ್ಕೆದಾರರು ನಿರ್ಧರಿಸುವುದಿಲ್ಲ. ಬದಲಿಗೆ ಮಂಡಳಿಯಲ್ಲಿ ನಿರ್ಧಾರ ತೆಗೆದುಕೊಳ್ಳುವವರೊಂದಿಗೆ ಚರ್ಚಿಸಿ ಆಟಗಾರರು ಸ್ವತಃ ನಿರ್ಧರಿಸಬಹುದು.
ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆದ್ದಿದ್ದು, ರೋಹಿತ್ ನಿವೃತ್ತಿಯನ್ನು ಘೋಷಿಸುವ ಸಾಧ್ಯತೆ ಇದೆ. ಆದರೆ ಫೈನಲ್ ಪಂದ್ಯದ ಮುನ್ನಾದಿನ ನಿವೃತ್ತಿ ಕುರಿತ ಪ್ರಶ್ನೆಗಳನ್ನು ತಪ್ಪಿಸಲು ರೋಹಿತ್ ಯತ್ನಿಸಿದ್ದರು. ವಾಸ್ತವವಾಗಿ, ಭಾರತದ ಉಪನಾಯಕ ಶುಭಮನ್ ಗಿಲ್ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು ಮತ್ತು ರೋಹಿತ್ ನಿವೃತ್ತಿಯ ಬಗ್ಗೆ ಯಾವುದೇ ಚರ್ಚೆಗಳಿಲ್ಲ' ಎಂದು ಹೇಳಿದ್ದು ವಿಷಯ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ಸೂಚಿಸುತ್ತದೆ.