ನ್ಯೂಜಿಲೆಂಡ್ ವಿರುದ್ಧ ಪಂದ್ಯ ಗೆದ್ದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಟ್ರೋಫಿ ಮರೆತು ಎದ್ದ ರೋಹಿತ್ ಶರ್ಮಾ 
ಕ್ರಿಕೆಟ್

Champions Trophy 2025: ಫೋನ್, ಪಾಸ್‌ಪೋರ್ಟ್ ಅಷ್ಟೇ ಅಲ್ಲ.. ಈ ಬಾರಿ ಟ್ರೋಫಿಯನ್ನೇ ಮರೆತು ಹೊರಟ ರೋಹಿತ್ ಶರ್ಮಾ!

ಮರೆವಿನ ಸ್ವಭಾವದವರಾಗಿರುವ ರೋಹಿತ್ ಕೆಲವೊಮ್ಮೆ ತನ್ನ ಪಾಸ್‌ಪೋರ್ಟ್ ಮತ್ತು ಫೋನ್‌ ಅನ್ನು ತಂಡದ ಬಸ್ ಮತ್ತು ಹೋಟೆಲ್‌ಗಳಲ್ಲಿಯೇ ಬಿಟ್ಟು ಹೊರಡುತ್ತಾರೆ.

ರೋಹಿತ್ ಶರ್ಮಾ ತಮ್ಮ ಪಾಸ್‌ಪೋರ್ಟ್, ಫೋನ್‌ ಮತ್ತು ಇತರ ವಸ್ತುಗಳನ್ನು ಆಗ್ಗಾಗ್ಗೆ ಮರೆತು ಬರುತ್ತಿರುತ್ತಾರೆ. ಆದರೆ, ಭಾನುವಾರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮ ಕೋಣೆಯಲ್ಲಿಯೇ ಟ್ರೋಫಿಯನ್ನು ಮರೆತಿದ್ದು ವರದಿಯಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿದ ನಂತರ ರೋಹಿತ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಅವರ ನಿವೃತ್ತಿ ಸೇರಿದಂತೆ ಕೆಲವು ಕುತೂಹಲಕಾರಿ ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು. ಆದರೆ, ಪತ್ರಿಕಾಗೋಷ್ಠಿ ಮುಗಿದ ನಂತರ, ರೋಹಿತ್ ತಮ್ಮೊಂದಿಗೆ ಟ್ರೋಫಿಯನ್ನು ತರಲು ಮರೆತರು. ಸಹಾಯಕ ಸಿಬ್ಬಂದಿಯ ಸದಸ್ಯರೊಬ್ಬರು ಟ್ರೋಫಿಯನ್ನು ಎತ್ತಿಕೊಂಡರು ಮತ್ತು ತಾವು ಬಿಟ್ಟುಹೋಗುತ್ತಿರುವ ಕುರಿತು ರೋಹಿತ್‌ಗೆ ನೆನಪಿಸಿದ್ದಾರೆ.

ಮರೆವಿನ ಸ್ವಭಾವದವರಾಗಿರುವ ರೋಹಿತ್ ಕೆಲವೊಮ್ಮೆ ತನ್ನ ಪಾಸ್‌ಪೋರ್ಟ್ ಮತ್ತು ಫೋನ್‌ ಅನ್ನು ತಂಡದ ಬಸ್ ಮತ್ತು ಹೋಟೆಲ್‌ಗಳಲ್ಲಿಯೇ ಬಿಟ್ಟು ಹೊರಡುತ್ತಾರೆ. ಆದರೆ, ತಂಡ ಗೆದ್ದ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಯನ್ನು ಸಹ ಮರೆಯುತ್ತಾರೆಂದು ಅಭಿಮಾನಿಗಳು ನಿರೀಕ್ಷಿಸಿರಲಿಲ್ಲ.

ಭಾರತದ ಮುಂದಿನ ಪ್ರಮುಖ ಏಕದಿನ ಪಂದ್ಯಾವಳಿ 2027ರ ಏಕದಿನ ವಿಶ್ವಕಪ್ ಆಗಿರುವುದರಿಂದ, ರೋಹಿತ್ ನಿವೃತ್ತಿ ಘೋಷಿಸಬಹುದು ಎಂಬ ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾನು ಈ ಸ್ವರೂಪದಿಂದ ನಿವೃತ್ತಿ ಹೊಂದುವುದಿಲ್ಲ. ಮುಂದೆ ದಯವಿಟ್ಟು ಈ ಬಗ್ಗೆ ಯಾವುದೇ ವದಂತಿಗಳನ್ನು ಹರಡಬೇಡಿ. ಭವಿಷ್ಯದ ಬಗ್ಗೆ ಯಾವುದೇ ಯೋಜನೆ ಇಲ್ಲ, ಏನು ನಡೆಯುತ್ತಿದೆಯೋ ಅದು ಹಾಗೆಯೇ ಮುಂದುವರಿಯುತ್ತದೆ' ಎಂದು ರೋಹಿತ್ ಹೇಳಿದ್ದಾರೆ

ಪವರ್ ಪ್ಲೇನಲ್ಲಿ ಆಕ್ರಮಣಕಾರಿಯಾಗಿ ಆಡುವ ನಿರ್ಧಾರವನ್ನು ನಿರ್ದಿಷ್ಟ ಗುರಿಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಯಿತು ಎಂದು ರೋಹಿತ್ ಹೇಳಿದರು.

ಮೊದಲ 10 ಓವರ್‌ಗಳಲ್ಲಿ 49 ರನ್ ಗಳಿಸಿ ಅಂತಿಮವಾಗಿ 83 ಎಸೆತಗಳಲ್ಲಿ 76 ರನ್ ಗಳಿಸಿ ರೋಹಿತ್ ಔಟಾದರು. ಈ ಮೂಲಕ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು.

ನಾನು ವಿಭಿನ್ನವಾಗಿ ಏನನ್ನೂ ಮಾಡಿಲ್ಲ. ಕಳೆದ 3-4 ಪಂದ್ಯಗಳಲ್ಲಿ ಮಾಡಿದಂತೆಯೇ ಮಾಡಿದ್ದೇನೆ. ಪವರ್ ಪ್ಲೇನಲ್ಲಿ ರನ್ ಗಳಿಸುವುದು ಎಷ್ಟು ಮುಖ್ಯ ಎಂದು ನನಗೆ ತಿಳಿದಿದೆ. ಏಕೆಂದರೆ, 10 ಓವರ್‌ಗಳ ನಂತರ, ಸ್ಪಿನ್ನರ್‌ಗಳು ಬಂದಾಗ ತುಂಬಾ ಕಷ್ಟವಾಗುತ್ತದೆ. ದುಬೈ ಪಿಚ್‌ನ ಸ್ವರೂಪವೂ ತಾನು ಬ್ಯಾಟಿಂಗ್‌ಗೆ ಅಗತ್ಯವಾದ ವಿಧಾನವನ್ನು ಅಳವಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT