ಜೋಫ್ರಾ ಆರ್ಚರ್ 
ಕ್ರಿಕೆಟ್

IPL 2025: 76 Runs in 4 Overs; ಕೋಟಿ ಕೋಟಿ ಸುರಿದಿದ್ದು ಇದಕ್ಕೇನಾ? 'ದುಬಾರಿ ಬೆಲೆಯ ದುಬಾರಿ ಬೌಲರ್'!

ರಾಜಸ್ತಾನ ತಂಡದ ಜೋಫ್ರಾ ಆರ್ಚರ್ ಕೇವಲ 4 ಓವರ್ ನಲ್ಲಿ 76 ರನ್ ನೀಡಿ ದುಬಾರಿ ಎನಿಸಿಕೊಂಡರು.

ಹೈದರಾಬಾದ್: ಐಪಿಎಲ್ ಟೂರ್ನಿಯ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ತಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ರನ್ ಸುರಿಮಳೆಯೇ ಸುರಿದಿದ್ದು, ಬೌಲರ್ ಗಳು ವಿಕೆಟ್ ಪಡೆಯಲು ಅಲ್ಲ ರನ್ ವೇಗಕ್ಕೆ ಕಡಿವಾಣ ಹಾಕಲು ಪರದಾಡಿದ್ದಾರೆ.

ಹೌದು.. ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ತಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ರನ್ ಗಳ ಸುರಿಮಳೆಯೇ ಹರಿದುಬಂದಿದ್ದು, ಆ ಮೂಲಕ ಈ ಪಂದ್ಯ ಗರಿಷ್ಟ ರನ್ ಗಳು ಬಂದ 2ನೇ ಪಂದ್ಯ ಎಂಬ ದಾಖಲೆಗೆ ಪಾತ್ರವಾಗಿದೆ. ಅಂತೆಯೇ ಈ ಪಂದ್ಯದಲ್ಲಿ ಉಭಯ ತಂಡಗಳ ಬೌಲರ್ ಗಳು ಅಕ್ಷರಶಃ ಬ್ಯಾಟ್ಸಮನ್ ಗಳಿಂದ ದಂಡನೆಗೆ ಒಳಗಾದರು.

ದುಬಾರಿ ಬೆಲೆಯ ದುಬಾರಿ ಬೌಲರ್

ಇನ್ನು ಈ ಪಂದ್ಯದಲ್ಲಿ ಉಭಯ ತಂಡದ ಇಬ್ಬರು ವೇಗಿಗಳು ದುಬಾರಿ ಎನಿಸಿಕೊಂಡಿದ್ದು, ರಾಜಸ್ತಾನ ತಂಡದ ಜೋಫ್ರಾ ಆರ್ಚರ್ ಕೇವಲ 4 ಓವರ್ ನಲ್ಲಿ 76 ರನ್ ನೀಡಿ ದುಬಾರಿ ಎನಿಸಿಕೊಂಡರು. ಅಂತೆಯೇ ರಾಜಸ್ತಾನ ಬ್ಯಾಟಿಂಗ್ ವೇಳೆ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಕೂಡ 4 ಓವರ್ ನಲ್ಲಿ 60 ರನ್ ನೀಡಿ ದುಬಾರಿಯಾದರು. ಅಲ್ಲದೆ ಈ ಪಂದ್ಯದಲ್ಲಿ ಆರ್ಚರ್ ಒಂದೇ ಒಂದು ವಿಕೆಟ್ ಪಡೆಯುವಲ್ಲಿಯೂ ವಿಫಲರಾದರು.

ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಓವರ್

ಈ ಪಂದ್ಯದಲ್ಲಿ ಬರೊಬ್ಬರಿ 76 ರನ್ ಕೊಟ್ಟ ರಾಜಸ್ತಾನ ಜೋಫ್ರಾ ಆರ್ಚರ್ ಐಪಿಎಲ್ ಇತಿಹಾಸದಲ್ಲೇ ಒಂದು ಇನ್ನಿಂಗ್ಸ್ ನಲ್ಲಿ ಗರಿಷ್ಟ ರನ್ ನೀಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ 4 ಓವರ್ ಎಸೆದ ಜೋಫ್ರಾ ಆರ್ಚರ್ ಬರೊಬ್ಬರಿ 19.00 ಸರಾಸರಿಯಲ್ಲಿ 76 ರನ್ ನೀಡಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು 2024ರಲ್ಲಿ ಡೆಲ್ಲಿ ವಿರುದ್ಧ ಗುಜರಾತ್ ಟೈಟನ್ಸ್ ತಂಡದ ಮೋಹಿತ್ ಶರ್ಮಾ 4 ಓವರ್ ನಲ್ಲಿ 73 ರನ್ ನೀಡಿದ್ದರು.

the most expensive spells in the IPL:

  • Jofra Archer 0 for 76 vs SRH, 2025.

  • Mohit Sharma 0 for 73 vs DC, 2024.

  • Basil Thampi 0 for 70 vs RCB, 2018.

  • Yash Dayal 0 for 69 vs KKR, 2023.

  • Luke Wood 1 for 68 vs Delhi Capitals, 2024.

  • Reece Topley 1 for 68 vs SRH, 2024.

ರಾಜಸ್ತಾನದ ದುಬಾರಿ ಆಟಗಾರ

ಇನ್ನು ಕಳೆದ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಲ್ಲಿ ರಾಜಸ್ತಾನ ತಂಡ ಇಂಗ್ಲೆಂಡ್ ತಂಡದ ಈ ಸ್ಟಾರ್ ವೇಗಿಯನ್ನು ಬರೊಬ್ಬರಿ 12.5 ಕೋಟಿ ರೂ ನೀಡಿ ಖರೀದಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT