ಕೆಎಲ್ ರಾಹುಲ್ 
ಕ್ರಿಕೆಟ್

IPL 2025: SRH ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್ ಸೇರ್ಪಡೆ

ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ದಂಪತಿ ಮಾರ್ಚ್ 24ರಂದು ಹೆಣ್ಣು ಮಗುವನ್ನು ಸ್ವಾಗತಿಸಿದ್ದು, ಈ ಕಾರಣದಿಂದಾಗಿ ಕಳೆದ ವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಆರಂಭಿಕ ಪಂದ್ಯದಿಂದ ರಾಹುಲ್ ಹೊರಗುಳಿದಿದ್ದರು.

ನವದೆಹಲಿ: ಐಪಿಎಲ್ 2025ನೇ ಆವೃತ್ತಿಯ 10ನೇ ಪಂದ್ಯದಲ್ಲಿ ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೆಣಸಲಿದ್ದು, ಈ ಪಂದ್ಯಕ್ಕೂ ಮುನ್ನ ಶನಿವಾರ ವಿಶಾಖಪಟ್ಟಣದಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ದಂಪತಿ ಮಾರ್ಚ್ 24ರಂದು ಹೆಣ್ಣು ಮಗುವನ್ನು ಸ್ವಾಗತಿಸಿದ್ದು, ಈ ಕಾರಣದಿಂದಾಗಿ ಕಳೆದ ವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಆರಂಭಿಕ ಪಂದ್ಯದಿಂದ ರಾಹುಲ್ ಹೊರಗುಳಿದಿದ್ದರು.

'X'ನಲ್ಲಿ ರಾಹುಲ್ ಆಗಮನದ ವಿಡಿಯೋವನ್ನು ಡೆಲ್ಲಿ ಕ್ಯಾಪಿಟಲ್ಸ್ ಹಂಚಿಕೊಂಡಿದ್ದು, 'ನೀವು ಪ್ರೀತಿಸಲ್ಪಟ್ಟಿದ್ದೀರಿ. ನೀವು ನಮ್ಮವರು. ನೀವು ಮನೆಗೆ ಬಂದಿದ್ದೀರಿ. ಕೆಎಲ್ಆರ್, ದಿಲ್ಲಿಗೆ ಸ್ವಾಗತ' ಎಂದು ಬರೆದಿದೆ.

ಮತ್ತೊಂದು ಪೋಸ್ಟ್‌ನಲ್ಲಿ, ಫ್ರಾಂಚೈಸಿಯು ಕೆಎಲ್ ರಾಹುಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತಿ ಜೆರ್ಸಿಯಲ್ಲಿರುವ ಚಿತ್ರವನ್ನು ಹಂಚಿಕೊಂಡಿದ್ದು, 'ಆಟಗಳು ಪ್ರಾರಂಭವಾಗಲಿ' ಎಂಬ ಶೀರ್ಷಿಕೆಯನ್ನು ನೀಡಿದೆ.

ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ 14 ಕೋಟಿ ರೂ.ಗೆ ಫ್ರಾಂಚೈಸಿ ಖರೀದಿಸಿದ ನಂತರ ರಾಹುಲ್ ಭಾನುವಾರ ವಿಶಾಖಪಟ್ಟಣದಲ್ಲಿ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರವಾಗಿ ಕಣಕ್ಕಿಳಿಯಲಿದ್ದಾರೆ.

ಕಳೆದ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದರು. ಕಳೆದ ವಾರ ರಾಹುಲ್ ಅನುಪಸ್ಥಿತಿಯಲ್ಲಿ ನಡೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ನೇತೃತ್ವದ ತಂಡವು ಲಕ್ನೋ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಈ ಮೂಲಕ ಪಂದ್ಯಾವಳಿಯನ್ನು ಶುಭಾರಂಭ ಮಾಡಿತ್ತು.

ದೆಹಲಿ ಪ್ರಾಂಚೈಸಿ ಬಗ್ಗೆ ಮಾತನಾಡಿದ ರಾಹುಲ್, 'ಇದು ನನಗೆ ಹೊಸ ಅನುಭವ. ಇದು ನನ್ನ ನಾಲ್ಕನೇ ಅಥವಾ ಐದನೇ ಐಪಿಎಲ್ ಫ್ರಾಂಚೈಸಿಯಾಗಿದೆ. ಇದು ರೋಮಾಂಚಕಾರಿಯಾಗಿದೆ. ಪ್ರತಿ ಹೊಸ ತಂಡವು ಆಟಗಾರರು ಹೇಗೆ ಹೊಂದಿಕೊಳ್ಳುತ್ತಾರೆ, ನಿರ್ವಹಣೆ ಹೇಗಿರುತ್ತದೆ ಮತ್ತು ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಅನಿಶ್ಚಿತತೆಗಳನ್ನು ತರುತ್ತದೆ. ಆದರೆ, ನಮ್ಮ ತಂಡ ಮತ್ತು ನಿರ್ವಹಣೆಯನ್ನು ನೋಡಿದರೆ, ನಾವು ಹೆಚ್ಚಿನ ಕ್ಷೇತ್ರಗಳನ್ನು ಒಳಗೊಂಡಂತೆ ತೋರುತ್ತದೆ' ಎಂದು ಹೇಳಿದರು.

'ಅನುಭವಿ ಆಟಗಾರರು ಮತ್ತು ಯುವ ಪ್ರತಿಭೆಗಳ ಉತ್ತಮ ಮಿಶ್ರಣವಿದೆ. ನಾನು ಕೆಲವು ಅದ್ಭುತ ಕೌಶಲ್ಯಪೂರ್ಣ ಯುವಕರೊಂದಿಗೆ ಆಡಲು ಮತ್ತು ಅವರಿಂದ ಕಲಿಯಲು ಉತ್ಸುಕನಾಗಿದ್ದೇನೆ. ಮಿಚೆಲ್ ಸ್ಟಾರ್ಕ್, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರಂತಹ ಆಟಗಾರರೊಂದಿಗೆ ನಾನು ಈ ಮೊದಲು ಆಡಿದ್ದೇನೆ. ನಾವು ಬಲಿಷ್ಠ ತಂಡವನ್ನು ಹೊಂದಿದ್ದೇವೆ' ಎಂದಿದ್ದರು.

ತಾವು ಆಡಿರುವ 132 ಐಪಿಎಲ್ ಪಂದ್ಯಗಳಲ್ಲಿ ರಾಹುಲ್ 45.47 ರ ಸರಾಸರಿಯಲ್ಲಿ 4,683 ರನ್ ಗಳಿಸಿದ್ದಾರೆ. 2013ರಲ್ಲಿ ಪದಾರ್ಪಣೆ ಮಾಡಿದ ನಂತರ ಅವರು ಟೂರ್ನಿಯಲ್ಲಿ ನಾಲ್ಕು ಶತಕಗಳು ಮತ್ತು 37 ಅರ್ಧಶತಕಗಳನ್ನು ಗಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ತಮಿಳುನಾಡು-ಆಂಧ್ರ ತೀರಕ್ಕೆ ದಿತ್ವಾ ಚಂಡಮಾರುತ: ಬೆಂಗಳೂರು ಸೇರಿ ಕರ್ನಾಟಕದಲ್ಲಿ 4 ದಿನ ಭಾರೀ ಮಳೆ ಸಾಧ್ಯತೆ; IMD ಎಚ್ಚರಿಕೆ

ಗಲ್ಲು ಶಿಕ್ಷೆ ಬೆನ್ನಲ್ಲೇ ಬಾಂಗ್ಲಾದೇಶ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ 21 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ರಾಜಕೀಯ ಅಂದ್ರೆ ಅದು.... ಸಿಎಂ ಕುರ್ಚಿ ಗುದ್ದಾಟದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಸಂಸದೆ ರಮ್ಯಾ

ಡಿಕೆಶಿ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್, ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ 'ಕಾಗಿನೆಲೆ' ಸ್ವಾಮೀಜಿ!

SCROLL FOR NEXT