ಪಂಜಾಬ್ ಕಿಂಗ್ಸ್ 
ಕ್ರಿಕೆಟ್

IPL 2025: ಪಂಜಾಬ್ ಕಿಂಗ್ಸ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯದಿಂದಾಗಿ ಟೂರ್ನಿಯಿಂದಲೇ ಔಟ್!

ಪಂಜಾಬ್ ಕಿಂಗ್ಸ್ ತಂಡವು ಬದಲಿ ಆಟಗಾರನನ್ನು ಹುಡುಕುವ ಕೆಲಸದಲ್ಲಿದೆ. ಪಂಜಾಬ್ ತಂಡವು ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದೀಗ ಅಂಕಪಟ್ಟಿಯಲ್ಲಿ 13 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡುತ್ತಿದ್ದ ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿ ಪಂಜಾಬ್ ಕಿಂಗ್ಸ್ ತಂಡಕ್ಕಾಗಿ ಆಡುತ್ತಿದ್ದರು. ಆದರೆ, ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ಅವರ ಐಪಿಎಲ್ 2025ರ ಪ್ರಯಾಣ ಕೊನೆಗೊಂಡಿದೆ. ಗಾಯದಿಂದಾಗಿ ಉಳಿದ ಪಂದ್ಯಗಳಿಂದ ಮ್ಯಾಕ್ಸ್‌ವೆಲ್ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ.

ಅನುಭವಿ ಆಟಗಾರ, ಫಾರ್ಮ್‌ಗಾಗಿ ಹೆಣಗಾಡುತ್ತಿದ್ದರು. ಬುಧವಾರ ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸಿಎಸ್‌ಕೆ vs ಪಿಬಿಕೆಎಸ್ ಮುಖಾಮುಖಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿತ್ತು. ಆದರೆ, ನಾಯಕ ಶ್ರೇಯಸ್ ಅಯ್ಯರ್ ಮ್ಯಾಕ್ಸ್‌ವೆಲ್ ಅವರು ಗಾಯಗೊಂಡಿರುವ ಕುರಿತು ದೃಢಪಡಿಸಿದರು. ಪಿಬಿಕೆಎಸ್ ಇನ್ನೂ ಆಲ್‌ರೌಂಡರ್‌ಗೆ ಬದಲಿ ಆಟಗಾರನನ್ನು ಘೋಷಿಸಿಲ್ಲ.

ಟಾಸ್ ವೇಳೆ ಮಾತನಾಡಿದ ಶ್ರೇಯಸ್ ಅಯ್ಯರ್, 'ಮ್ಯಾಕ್ಸ್‌ವೆಲ್ ಅವರ ಬೆರಳಿಗೆ ಗಾಯವಾಗಿರುವುದು ದುರದೃಷ್ಟಕರ. ಇಲ್ಲಿಯವರೆಗೆ ಬದಲಿ ಆಟಗಾರನನ್ನು ನಿರ್ಧರಿಸಿಲ್ಲ' ಎಂದು ದೃಢಪಡಿಸಿದರು.

ಚೆಪಾಕ್‌ನಲ್ಲಿ ನಡೆದ ಪಂಜಾಬ್ ಕಿಂಗ್ಸ್ ತಂಡದ ಅಭ್ಯಾಸದ ವೇಳೆಯೂ ಆಸ್ಟ್ರೇಲಿಯಾದ ಆಟಗಾರ ಗೈರಾಗಿದ್ದರು. ಈ ಆವೃತ್ತಿಯಲ್ಲಿ ಆರಂಭದಿಂದಲೂ ಮ್ಯಾಕ್ಸ್‌ವೆಲ್ ಉತ್ತಮ ಫಾರ್ಮ್‌ಗಾಗಿ ಹೆಣಗಾಡುತ್ತಿದ್ದರು. ಆದರೆ, ಪಂಜಾಬ್ ಕಿಂಗ್ಸ್ XI ನಲ್ಲಿ ಸ್ಥಾನ ಪಡೆದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮೊದಲು ಪಂಜಾಬ್ ಕಿಂಗ್ಸ್ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಅವರು ಆಡಿದ್ದಾರೆ. ಮ್ಯಾಕ್ಸ್‌ವೆಲ್ 6 ಇನಿಂಗ್ಸ್‌ಗಳಲ್ಲಿ ಕೇವಲ 48 ರನ್‌ಗಳನ್ನು ಗಳಿಸಿದ್ದಾರೆ.

ಆದಾಗ್ಯೂ, ಅವರು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಿಬಿಕೆಎಸ್ 112 ರನ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಮ್ಯಾಕ್ಸ್‌ವೆಲ್ ಪ್ರಮುಖ ಪಾತ್ರ ವಹಿಸಿದ್ದರು. ಒಟ್ಟಾರೆಯಾಗಿ, ಅವರು ಈ ಆವೃತ್ತಿಯಲ್ಲಿ 6 ಇನಿಂಗ್ಸ್‌ಗಳಲ್ಲಿ 4 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಮ್ಯಾಕ್ಸ್‌ವೆಲ್ ಹೊರಗುಳಿದಿರುವುದರಿಂದ, ಪಂಜಾಬ್ ಕಿಂಗ್ಸ್ ತಂಡವು ಬದಲಿ ಆಟಗಾರನನ್ನು ಹುಡುಕುವ ಕೆಲಸದಲ್ಲಿದೆ. ಪಂಜಾಬ್ ತಂಡವು ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದೀಗ ಅಂಕಪಟ್ಟಿಯಲ್ಲಿ 13 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಂಜಾಬ್ ತಂಡ ಈಗಾಗಲೇ ಗಾಯದಿಂದಾಗಿ ಲಾಕಿ ಫರ್ಗುಸನ್ ಅವರನ್ನು ಕಳೆದುಕೊಂಡಿದೆ. ಇದೀಗ ಮ್ಯಾಕ್ಸ್‌ವೆಲ್ ಕೂಡ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT