ವಿರಾಟ್ ಕೊಹ್ಲಿ 
ಕ್ರಿಕೆಟ್

IPL 2025: CSK ವಿರುದ್ಧ RCB ಪಂದ್ಯ; 5 ದಾಖಲೆಗಳ ಹೊಸ್ತಿಲಲ್ಲಿ Virat Kohli

ಪ್ರಸ್ತುತ 10 ಪಂದ್ಯಗಳ ಪೈಕಿ 7 ಪಂದ್ಯಗಳನ್ನು ಗೆದ್ದಿರುವ ಆರ್ ಸಿಬಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಅಂತೆಯೇ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ವಿರಾಟ್ ಕೊಹ್ಲಿ ಒಟ್ಟು 10 ಪಂದ್ಯಗಳ 447 ರನ್ ಸಿಡಿಸಿದ್ದಾರೆ.

ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿ ಇಂದು CSK vs RCB ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ರನ್ ಮೆಷಿನ್ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದ 5 ಅಪರೂಪದ ದಾಖಲೆಗಳ ಹೊಸ್ತಿಲಲ್ಲಿದ್ದಾರೆ.

ಇಂದು ಸಂಜೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹೈವೋಲ್ಟೇಜ್ ಹಣಾಹಣಿ ನಡೆಯುತ್ತಿದ್ದು, ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಧೋನಿ ಪಡೆಗೆ ಇದು ಕೇವಲ ಸಾಮಾನ್ಯ ಪಂದ್ಯವಾಗಿದ್ದು, ಆರ್ ಸಿಬಿ ಪಾಲಿಗೆ ಇಂದಿನ ಪಂದ್ಯ ಮುಖ್ಯವಾಗಿದೆ. ಏಕೆಂದರೆ ಪ್ಲೇಆಫ್ ಗೇರುವ ನಾಲ್ಕು ತಂಡಗಳ ಪೈಕಿ ಸ್ಥಾನ ಪಡೆಯಲು ಆರ್ ಸಿಬಿಗೆ ಇನ್ನೂ 2 ಪಂದ್ಯಗಳಲ್ಲಿ ಗೆಲುವು ಅನಿವಾರ್ಯ.

ಹೀಗಾಗಿ ಇಂದಿನ ಪಂದ್ಯವನ್ನು ಭಾರಿ ಅಂತಕದಲ್ಲಿ ಗೆದ್ದರೆ ಆರ್ ಸಿಬಿ ಗೆ ಬೇಕಾದ ಗೆಲುವಿನೊಂದಿಗೆ ನೆಟ್ ರೇಟ್ ಕೂಡ ಉತ್ತಮವಾಗುತ್ತದೆ. ಪ್ರಸ್ತುತ 10 ಪಂದ್ಯಗಳ ಪೈಕಿ 7 ಪಂದ್ಯಗಳನ್ನು ಗೆದ್ದಿರುವ ಆರ್ ಸಿಬಿ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಅಂತೆಯೇ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ವಿರಾಟ್ ಕೊಹ್ಲಿ ಒಟ್ಟು 10 ಪಂದ್ಯಗಳ 447 ರನ್ ಸಿಡಿಸಿದ್ದಾರೆ.

5 ದಾಖಲೆಗಳ ಹೊಸ್ತಿಲಲ್ಲಿ Virat Kohli

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಹಲವು ದಾಖಲೆಗಳು ಪತನವಾಗುವ ಸಾಧ್ಯತೆ ಇದೆ. ಈ ಪೈಕಿ ಕೊಹ್ಲಿ ಇಂದು 53ರನ್ ಗಳಿಸಿದರೆ ಅವರು ಐಪಿಎಲ್ ನಲ್ಲಿ 8500 ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗುತ್ತಾರೆ.

ಅಂತೆಯೇ ಇನ್ನು 10 ರನ್ ಗಳಿಸಿದರೆ ಕೊಹ್ಲಿ ಭಾರತದಲ್ಲಿ ಟಿ20 ಮಾದರಿ ಕ್ರಿಕೆಟ್ ನಲ್ಲಿ 9500 ರನ್ ಗಳಿಸಿದ ಆಟಗಾರನಾಗುತ್ತಾರೆ. ಇದಲ್ಲದೆ ಕೊಹ್ಲಿ ಇಂದು 6 ಬೌಂಡರಿಗಳನ್ನು ಗಳಿಸಿದರೆ, ಐಪಿಎಲ್ ನಲ್ಲಿ 750 ಬೌಂಡರಿಗಳನ್ನು ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಲಿದ್ದಾರೆ.

ಈ ಪಂದ್ಯದಲ್ಲಿ ಕೊಹ್ಲಿ ಇನ್ನೊಂದು ಸಿಕ್ಸರ್ ಸಿಡಿಸಿದರೂ ಕೊಹ್ಲಿ ಐಪಿಎಲ್ ನಲ್ಲಿ ಆರ್ ಸಿಬಿ ಪರ (IPL ಮತ್ತು ಚಾಂಪಿಯನ್ಸ್ ಲೀಗ್ ಟಿ20) 300 ಸಿಕ್ಸರ್ ಹೊಡೆದ ಸಾಧನೆ ಮಾಡಲಿದ್ದಾರೆ. ಅಂತೆಯೇ 7 ಸಿಕ್ಸರ್ ಸಿಡಿಸಿದರೆ, ಸಿಎಸ್ ಕೆ ವಿರುದ್ಧ 50 ಸಿಕ್ಸರ್ ಸಿಡಿಸಿದ ಸಾಧನೆ ಮಾಡಲಿದ್ದಾರೆ.

Here's a list of records Virat Kohli could break in the match against CSK

  • 8500: Virat Kohli is 53 runs away from 8500 runs in IPL.

  • 9500: Virat Kohli is 10 runs away from 9500 runs in India in T20s

  • 750: Virat Kohli is 6 fours away from 750 fours in IPL

  • 300: Virat Kohli is 1 six away from 300 sixes for RCB. (IPL + CLT20)

  • 50: Virat Kohli is 7 sixes away from 50 sixes against CSK in IPL

ಸಿಎಸ್ ಕೆ ವಿರುದ್ಧ ಸತತ 2 ಜಯ

ಈಗಾಗಲೇ ಆರ್ ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸತತ 2 ಜಯ ದಾಖಲಿಸಿದ್ದು, 2024 ರ ಐಪಿಎಲ್‌ನಲ್ಲಿ ಬೆಂಗಳೂರಿನಲ್ಲಿ ಆರ್‌ಸಿಬಿ ಕೊನೆಯ ಬಾರಿಗೆ ಸಿಎಸ್‌ಕೆ ತಂಡವನ್ನು ಎದುರಿಸಿತ್ತು. ಅಂದಿನ ರೋಮಾಂಚಕ ಪಂದದಲ್ಲಿ ಆರ್ ಸಿಬಿ 27 ರನ್‌ಗಳಿಂದ ಗೆದ್ದು ಪ್ಲೇಆಫ್‌ಗೆ ಪ್ರವೇಶಿಸಿತ್ತು. ಅಂತೆಯೇ ಹಾಲಿ ಟೂರ್ನಿಯ ಪಂದ್ಯದಲ್ಲೂ ಚೆಪಾಕ್ ನಲ್ಲಿ ನಡೆದ ಪಂದ್ಯದಲ್ಲೂ ಆರ್ ಸಿಬಿ ಸಿಎಸ್ ಕೆಯನ್ನು ಮಣಿಸಿತ್ತು.

ಇಂದಿನ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

ಇನ್ನು ಇಂದಿನ ಆರ್ ಸಿಬಿ ಮತ್ತು ಸಿಎಸ್ ಕೆ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಬೆಂಳೂರಿನಲ್ಲಿ ಸತತ 2 ದಿನಗಳಿಂದ ಸಂಜೆ ವೇಳೆ ಮಳೆ ಸುರಿಯುತ್ತಿದ್ದು, ಮುಂದಿನ 3 ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿತ್ತು. ಅದರಂತೆ ಇಂದೂ ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT