ಕ್ರಿಕೆಟ್

IPL 2025: ಮಳೆಯಿಂದ 2 ಸಲ ಪಂದ್ಯ ನಿಂತರೂ, ಕೊನೆಯ ಎಸೆತದಲ್ಲಿ Mumbai Indians ವಿರುದ್ಧ ಗೆದ್ದ GT!

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನ 56ನೇ ಪಂದ್ಯ ಇಂದು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಪ್ಲೇಆಫ್‌ಗೆ ಪ್ರವೇಶಿಸುವ ಪ್ರಬಲ ಸ್ಪರ್ಧಿಗಳಲ್ಲಿ ಒಂದಾಗಿರುವ ಈ ಎರಡೂ ತಂಡಗಳ ನಡುವಿನ ಪಂದ್ಯವು ತುಂಬಾ ರೋಚಕವಾಗಿತ್ತು.

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನ 56ನೇ ಪಂದ್ಯ ಇಂದು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಪ್ಲೇಆಫ್‌ಗೆ ಪ್ರವೇಶಿಸುವ ಪ್ರಬಲ ಸ್ಪರ್ಧಿಗಳಲ್ಲಿ ಒಂದಾಗಿರುವ ಈ ಎರಡೂ ತಂಡಗಳ ನಡುವಿನ ಪಂದ್ಯವು ತುಂಬಾ ರೋಚಕವಾಗಿತ್ತು. 14ನೇ ಓವರ್ ನಲ್ಲಿ ಮಳೆ ಬಂದು ಸ್ಥಗಿತಗೊಂಡಿತು. ನಂತರ 18ನೇ ಓವರ್‌ನಲ್ಲಿ ಮತ್ತೆ ಮಳೆ ಬಂತು. ಈ ಸಮಯದಲ್ಲಿ ಗುಜರಾತ್ ಗೆಲುವಿಗೆ 12 ಎಸೆತಗಳಲ್ಲಿ 24 ರನ್ ಗಳ ಅಗತ್ಯವಿತ್ತು. ಆ ಸಮಯದಲ್ಲಿ ಮುಂಬೈ ತಂಡವು DLS ವಿಧಾನದ ಪ್ರಕಾರ 5 ರನ್‌ಗಳ ಮುಂದಿತ್ತು. ಈ ವೇಳೆ DLS ಪ್ರಕಾರ ಪಂದ್ಯವನ್ನು 1 ಓವರ್ ಸ್ಥಗಿತಗೊಳಿಸಿ ಕೊನೆಯ ಓವರ್ ನಲ್ಲಿ ಗೆಲ್ಲಲು GT ಗೆ ಗೆಲ್ಲಲು 15 ರನ್ ಗುರಿ ನೀಡಲಾಯಿತು. ಅಂತಿಮವಾಗಿ ಗುಜರಾತ್ ಕೊನೆಯ ಎಸೆತದಲ್ಲಿ 1 ರನ್ ಬಾರಿಸಿ ಪಂದ್ಯ ಗೆದ್ದುಕೊಂಡಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಗುಜರಾತ್ ಸ್ಕೋರ್ 14 ಓವರ್‌ಗಳಿಗೆ 2 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದ್ದಾಗ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತ್ತು.

ಮುಂಬೈ ಪರ ವಿಲ್ ಜಾಕ್ಸ್ 53, ಸೂರ್ಯಕುಮಾರ್ ಯಾದವ್ 35 ಮತ್ತು ಕಾರ್ಬಿನ್ ಬಾಷ್ 27 ರನ್ ಗಳಿಸಿದ್ದು ಮತ್ಯಾರೂ ಎರಡಂಕಿ ಸಹ ದಾಟಲಿಲ್ಲ. ಇನ್ನು 156 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ತಂಡವು ಉತ್ತಮ ಆರಂಭವನ್ನು ಪಡೆಯಲಿಲ್ಲ. ಎರಡನೇ ಓವರ್‌ನಲ್ಲಿ ಟ್ರೆಂಟ್ ಬೌಲ್ಟ್ ಅವರು ಸಾಯಿ ಸುದರ್ಶನ್ ಅವರನ್ನು ಔಟ್ ಮಾಡಿದರು. ಸುದರ್ಶನ್ ಅವರ ಬ್ಯಾಟ್ ನಿಂದ ಕೇವಲ 5 ರನ್ ಗಳು ಬಂದವು. ಇದಾದ ನಂತರ ಶುಭಮನ್ ಗಿಲ್ ಮತ್ತು ಜೋಸ್ ಬಟ್ಲರ್ ನಡುವೆ ಉತ್ತಮ ಜೊತೆಯಾಟವಿತ್ತು. 10 ಓವರ್‌ಗಳ ನಂತರ ಗುಜರಾತ್ ಸ್ಕೋರ್ 65-1. ಆದರೆ 12ನೇ ಓವರ್‌ನಲ್ಲಿ ಬಟ್ಲರ್ 30 ರನ್‌ಗಳಿಗೆ ಔಟಾದಾಗ 72 ರನ್‌ಗಳ ಜೊತೆಯಾಟ ಮುರಿದುಬಿತ್ತು. ಬಟ್ಲರ್ ಔಟಾದಾಗ ಗುಜರಾತ್ ಗೆಲುವಿಗೆ 51 ಎಸೆತಗಳಲ್ಲಿ 78 ರನ್ ಗಳ ಅಗತ್ಯವಿತ್ತು. ಇದಾದ ನಂತರ ರುದರ್ಫೋರ್ಡ್ ಉತ್ತಮವಾಗಿ ಬ್ಯಾಟಿಂಗ್ ಮಾಡಿ 28 ರನ್ ಗಳಿಸಿ ಔಟಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

Israel-Iran war: Dohaದಲ್ಲಿ ಸಿಲುಕಿದ Indian basketball team, ತಂಡದಲ್ಲಿದ್ದಾರೆ ಮೂವರು ಕನ್ನಡಿಗರು..!

'ನಾನೇನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗೊತ್ತು, ಖಂಡಿತಾ ನಮ್ಮಿಬ್ಬರದ್ದು ಹಾಲು-ಜೇನಿನ ಸಂಬಂಧ': D K ಶಿವಕುಮಾರ್

ವಾಯುಮಾರ್ಗ ಬಂದ್ ಎಫೆಕ್ಟ್: ದುಬೈಗೆ ಹೊರಟ Emirates ವಿಮಾನ KIAಗೆ ವಾಪಸ್

SCROLL FOR NEXT