ವಿರಾಟ್ ಕೊಹ್ಲಿ 
ಕ್ರಿಕೆಟ್

ಟೆಸ್ಟ್ ಕ್ರಿಕೆಟಿಗೆ ವಿದಾಯ: ವಿರಾಟ್ ಕೊಹ್ಲಿಗೆ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಲು RCB ಅಭಿಮಾನಿಗಳ ಪ್ಲಾನ್!

ವಿದಾಯದ ಪಂದ್ಯವಿಲ್ಲದೆ ಮೇ 12 ರಂದು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ 14 ವರ್ಷಗಳ ಸುದೀರ್ಘ ಟೆಸ್ಟ್ ಕ್ರಿಕೆಟ್​ ಬದುಕಿಗೆ ವಿದಾಯ ಹೇಳಿದ್ದಾರೆ.

ಬೆಂಗಳೂರು: ವಿರಾಟ್ ಕೊಹ್ಲಿ, ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳಲ್ಲಿ ಚಿರಪರಿಚಿತ ಹಾಗೂ ಜನಪ್ರಿಯ ಹೆಸರು. ಏಕದಿನ, ಟೆಸ್ಟ್, ಟಿ-20 ಸೇರಿದಂತೆ ಎಲ್ಲಾ ಕ್ರಿಕೆಟ್ ಮಾದರಿಯಲ್ಲೂ ಅವರೊಬ್ಬ ಸಾಧಕ. ಅಲ್ಲದೇ ಅವರ ಓವರ್ ಅಗ್ರೇಷನ್, ಸೆಲೆಬ್ರೇಶನ್ ನೋಡಲೆಂದೇ ಲಕ್ಷಾಂತರ ಅಭಿಮಾನಿಗಳು ಕ್ರೀಡಾಂಗಣಕ್ಕೆ ದಾಂಗುಡಿ ಇಡುತ್ತಿದ್ದರು.

ವಿಕೆಟ್ ಗಳ ನಡುವೆ ರನ್ ಕದಿಯಲು ಚಿಗರೆಯಂತೆ ಓಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಕೆಲವು ಇನ್ನಿಂಗ್ಸ್ ಗಳಲ್ಲಿ ಅವರು ವೈಫಲ್ಯಕ್ಕೊಳಗಾದಾಗ, ಇನ್ನು ಕೊಹ್ಲಿಯ ಕಾಲ ಮುಗಿಯಿತು ಎಂಬ ಟೀಕಾಕಾರರಿಗೆ ಅಮೋಘ ಇನ್ನಿಂಗ್ಸ್ ಒಂದನ್ನು ಕಟ್ಟಿ ಬ್ಯಾಟಿನಿಂದಲೇ ಉತ್ತರ ನೀಡಿದ್ದಾರೆ. ಆದರೆ ಅವರ ಇತ್ತೀಚಿನ ನಿರ್ಧಾರವೊಂದು ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ವಿದಾಯದ ಪಂದ್ಯವಿಲ್ಲದೆ ಮೇ 12 ರಂದು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ 14 ವರ್ಷಗಳ ಸುದೀರ್ಘ ಟೆಸ್ಟ್ ಕ್ರಿಕೆಟ್​ ಬದುಕಿಗೆ ವಿದಾಯ ಹೇಳಿದ್ದಾರೆ. ಇನ್ನೂ ಕೆಲವು ವರ್ಷಗಳ ಕಾಲ ಆಡುವ ಸಾಮರ್ಥ್ಯ ಇದ್ದರೂ ಅವರ ದಿಢೀರ್ ನಿರ್ಧಾರ, ಅಭಿಮಾನಿಗಳಲ್ಲಿ ದು:ಖಕ್ಕೆ ಕಾರಣವಾಗಿದೆ. ಹೀಗಾಗಿಯೇ ಇದೀಗ RCB ಅಭಿಮಾನಿಗಳು ವಿರಾಟ್ ಕೊಹ್ಲಿಗೆ ಗೌರವಯುತ ಬೀಳ್ಕೊಡುಗೆ ನೀಡಲು ಮುಂದಾಗಿದ್ದಾರೆ.

ಹೌದು. ಮೇ 17 ರಂದು ಬೆಂಗಳೂರಿನಲ್ಲಿ ಆರಂಭವಾಗಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ವೀಕ್ಷಿಸಲು ಆಗಮಿಸುವ ಎಲ್ಲಾ ಅಭಿಮಾನಿಗಳು ವೈಟ್ ಟಿ ಶರ್ಟ್ ಧರಿಸಿ ಆಗಮಿಸಬೇಕೆಂದು ಆರ್​ಸಿಬಿ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡುತ್ತಿದ್ದಾರೆ.

ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿರುವ ಕೊಹ್ಲಿಗೆ ಗೌರವ ಸಲ್ಲಿಸುವುದು ಇದರ ಉದ್ದೇಶವಾಗಿದೆ. ಹೀಗಾಗಿ ಶನಿವಾರ ನಡೆಯಲಿರುವ ಪಂದ್ಯದ ವೇಳೆ ಆರ್​ಸಿಬಿ ತಂಡದ ಕೆಂಪು ಕೋಟೆ ಶ್ವೇತವಸ್ತ್ರದಿಂದ ಕಂಗೊಳಿಸಲಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

CEC 'ಮತ ಕಳ್ಳರ ರಕ್ಷಕ', ಕರ್ನಾಟಕದ ಆಳಂದ ಕ್ಷೇತ್ರದಲ್ಲಿ 6,000 ಮತದಾರರ ಹೆಸರು ಡಿಲೀಟ್: ರಾಹುಲ್ ಗಾಂಧಿ ಆರೋಪ

ಉತ್ತರಾಖಂಡ ಮೇಘಸ್ಫೋಟ: ಚಮೋಲಿ ಜಿಲ್ಲೆಯಲ್ಲಿ ಹತ್ತು ಮಂದಿ ನಾಪತ್ತೆ, ಸಂಪರ್ಕ ಕಳೆದುಕೊಂಡ ಗ್ರಾಮಗಳು

ಉಕ್ರೇನ್ ಯುದ್ಧ ಪರಿಹರಿಸಲು ಸಹಾಯಕ್ಕೆ ಭಾರತ ಸಿದ್ಧವಿದೆ: ಪುಟಿನ್ ಗೆ ಪ್ರಧಾನಿ ಮೋದಿ ಭರವಸೆ

MUDA Scam: ಮುಡಾ ಮಾಜಿ ಅಧಿಕಾರಿ ದಿನೇಶ್ ಕುಮಾರ್ 9 ದಿನ ED ವಶಕ್ಕೆ

ಹಣಕಾಸು ಸ್ವಾತಂತ್ರ್ಯಕ್ಕೆ 7 ಸರಳ ನಿಯಮಗಳು! (ಹಣಕ್ಲಾಸು)

SCROLL FOR NEXT