ಇಶಾಂತ್ ಶರ್ಮಾ, ವಿರಾಟ್ ಕೊಹ್ಲಿ 
ಕ್ರಿಕೆಟ್

ಕೊಹ್ಲಿಗೆ 'ಸ್ಟಾರ್ ಡಮ್' ಹೊರತಾದ ಸಹೋದರತ್ವ ಬಾಂಧವ್ಯದ ಗುಣವೇ ಜಾಸ್ತಿ! ಇಶಾಂತ್ ಶರ್ಮಾ

ವಿರಾಟ್ ಕೊಹ್ಲಿ ಹೊರಗಿನವರಿಗೆ ಸ್ಟಾರ್. ನಾವು ಅಂಡರ್ -17 ನಲ್ಲಿ ಆಡಿದ್ದರಿಂದ ನಾನು ಅವರನ್ನು ಹಾಗೆ ನೋಡಲು ಸಾಧ್ಯವಿಲ್ಲ. ಆತ ನನಗೆ ಬಾಲ್ಯದ ಗೆಳೆಯ ಎಂದರು.

ನವದೆಹಲಿ: ದೆಹಲಿ ಕ್ರಿಕೆಟ್‌ನಲ್ಲಿ ತಮ್ಮ ಆರಂಭಿಕ ದಿನಗಳ ಹಿಂದಿನ ಸ್ನೇಹವನ್ನು ನೆನಪಿಸಿಕೊಂಡ ಭಾರತದ ವೇಗಿ ಇಶಾಂತ್ ಶರ್ಮಾ, ವಿರಾಟ್ ಕೊಹ್ಲಿ ಅವರೊಂದಿಗೆ ಒಟ್ಟಿಗೆ ಬೆಳೆದವರಿಗೆ ಯಾವಾಗಲೂ ಚೀಕು ಎಂದು ಹೇಳಿದ್ದಾರೆ.

17 ವರ್ಷದೊಳಗಿನವರ ಮಟ್ಟದಿಂದ ಹಿರಿಯ ಭಾರತ ತಂಡದವರೆಗೆ ಕೊಹ್ಲಿಯೊಂದಿಗೆ ಆಡಿದ ಇಶಾಂತ್, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸಾರ್ವಜನಿಕ ಇಮೇಜ್ ಸಾಕಷ್ಟು ವಿಭನ್ನವಾಗಿದೆ. ವಿರಾಟ್ ಕೊಹ್ಲಿ ಹೊರಗಿನವರಿಗೆ ಸ್ಟಾರ್. ನಾವು ಅಂಡರ್ -17 ನಲ್ಲಿ ಆಡಿದ್ದರಿಂದ ನಾನು ಅವರನ್ನು ಹಾಗೆ ನೋಡಲು ಸಾಧ್ಯವಿಲ್ಲ. ಆತ ನನಗೆ ಬಾಲ್ಯದ ಗೆಳೆಯ ಎಂದರು.

36 ವರ್ಷದ ಇಶಾಂತ್ ಶರ್ಮಾ ಭಾರತದ 105 ಟೆಸ್ಟ್ , 80 ಏಕದಿನ , 14 ಟಿ-20 ಪಂದ್ಯಗಳನ್ನಾಡಿದ್ದು, 434 ವಿಕೆಟ್ ಪಡೆದಿದ್ದಾರೆ. ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ಪರ ಐಪಿಎಲ್ ನಲ್ಲಿ ಆಡುತ್ತಿರುವ ಇಶಾಂತ್ ಶರ್ಮಾ, ಶನಿವಾರ ಸ್ಟಾರ್ ಸ್ಪೋರ್ಟ್ಸ್ ಪ್ರೆಸ್ ರೂಮ್‌ನಲ್ಲಿ ಮಾತನಾಡುತ್ತಿದ್ದಾಗ ಅಂಡರ್-19 ದಿನಗಳನ್ನು ನೆನಪಿಸಿಕೊಂಡರು. ಅಲ್ಲಿ ಅವರು ಕೊಠಡಿಗಳನ್ನು ಹಂಚಿಕೊಂಡದ್ದು, ಬಜೆಟ್ ಇತಿ ಮಿತಿಯಲ್ಲಿ ಊಟ, ಪ್ರಯಾಣ ಭತ್ಯೆ ಉಳಿಸುತಿದದ್ದು ಎಲ್ಲಾ ವಿಷಯವನ್ನು ಹಂಚಿಕೊಂಡರು.

19 ವರ್ಷದೊಳಗಿನವರ ಕ್ರಿಕೆಟ್ ತಂಡದಲ್ಲಿದ್ದಾಗ ನಮ್ಮ ಬಳಿ ಎಷ್ಟು ಹಣವಿದೆ ಎಂದು ಲೆಕ್ಕ ಹಾಕುತ್ತಿದ್ದೆವು. ಅದಕ್ಕೆ ತಕ್ಕಂತೆ ಊಟಕ್ಕೆ ಖರ್ಚು ಮಾಡುತ್ತಿದ್ದೇವು. ನಮ್ಮ TA (ಪ್ರಯಾಣ ಭತ್ಯೆ) ಉಳಿಸುತ್ತಿದ್ದೇವು. ಹಾಗಾಗಿ ವಿರಾಟ್ ಕೊಹ್ಲಿ ಎಲ್ಲರಿಗೂ ವಿಭಿನ್ನ. ಆತ ನನಗೆ ವಿಭಿನ್ನ ಎಂದು ಹೇಳಿದರು.

ಸ್ಟಾರ್ ಡಮ್ ಹೊರತಾಗಿ ಸಹೋದರತ್ವದ ಬಾಂಧವ್ಯ: ಕೊಹ್ಲಿಯ ಸ್ಟಾರ್‌ಡಮ್ ಹೊರತಾಗಿಯೂ ಅವರ ಬಾಂಧವ್ಯ ಸಹೋದರತ್ವದಿಂದ ಕೊಡಿದೆ. ನಿಮ್ಮ ಸಹೋದರ ಅಂತಹ ಎತ್ತರ ತಲುಪಿದ್ದಾನೆ ಎಂದು ಊಹಿಸಿಕೊಳ್ಳಿ, ಎಲ್ಲರೂ ಅವನೇ ಶ್ರೇಷ್ಠ ಎಂದು ಭಾವಿಸುತ್ತಿರುತ್ತಾರೆ. ಆದರೆ ದಿನದ ಕೊನೆಯಲ್ಲಿ, ಆತ ಮನುಷ್ಯ ಎಂದು ನೀವು ನೋಡುತ್ತೀರಿ. ದಿನದ ಕೊನೆಯಲ್ಲಿ, ನೀವು ಆತನದೊಂದಿಗೆ ಸಾಕಷ್ಟು ಸಮಯವನ್ನು ಕಳೆದರೆ, ಆತ ಎಲ್ಲಿಂದ ಬಂದಿದ್ದಾನೆ, ಹೇಗಿದ್ದಾನೆ ಮತ್ತು ಹೇಗೆಲ್ಲ ಎಂದು ನಿಮಗೆ ತಿಳಿಯುತ್ತದೆ ಎಂದು ತಿಳಿಸಿದರು.

ಇತ್ತೀಚೆಗಿನ ಐಪಿಎಲ್ ಪಂದ್ಯದ ವೇಳೆ ಇಬ್ಬರೂ ಮೈದಾನದಲ್ಲಿ ಅಪ್ಪಿಕೊಂಡಿದ್ದು, ಆ ಕ್ಷಣದ ಫೋಟೋಗಳನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಅವರ ಸಂವಾದಗಳು ಅಪರೂಪವಾಗಿ ಕ್ರಿಕೆಟ್ ಬಗ್ಗೆ ಮಾತುಕತೆಗಳನ್ನು ಒಳಗೊಂಡಿರುತ್ತವೆ ಆದರೆ ಇದು ಹಾಸ್ಯ ಮತ್ತು ತಮಾಷೆಯಾಗಿರುತ್ತದೆ ಎಂದು ಇಶಾಂತ್ ಹೇಳಿದರು.

ತಮಾಷೆ ಜೋಕ್ ಗಳೇ ಜಾಸ್ತಿ: ನಾವು ಭೇಟಿಯಾದಾಗ, ಎಷ್ಟು ಟೆಸ್ಟ್ ಪಂದ್ಯಗಳನ್ನು ಆಡಿದ್ದೇವೆ ಎಂಬುದರ ಕುರಿತು ಎಂದಿಗೂ ಮಾತನಾಡುವುದಿಲ್ಲ. ತಮಾಷೆಯ ಜೋಕ್‌ಗಳೇ ಜಾಸ್ತಿಯಾಗಿರುತ್ತದೆ. ಇದು ನಡೆಯುತ್ತಿದೆ. ಅದು ನಡೆಯುತ್ತಿದೆ, ಇದನ್ನು ನೋಡಿ, ಅದನ್ನು ನೋಡಿ. ಹೀಗೆ ತಮಾಷೆಯೇ ತುಂಬಿರುತ್ತದೆ. ಆತ ಎಂದಿಗೂ ನನಗೆ ವಿರಾಟ್ ಕೊಹ್ಲಿ ಅನ್ಸೆ ಇಲ್ಲ. ನಮಗೆ ಆತ ಚೀಕು. ಯಾವಾಗಲೂ ಅದೇ ರೀತಿಯಲ್ಲಿ ನೋಡಿದ್ದೇವೆ. ಆತ ಕೂಡಾ ನನ್ನನ್ನು ಹೀಗೆ ನೋಡಿದ್ದಾನೆ. ನಾವು ಒಟ್ಟಿಗೆ ಮಲಗಿದ್ದೇವೆ, ಕೊಠಡಿ ಹಂಚಿಕೊಂಡಿದ್ದೇವೆ ಎಂದು ತಿಳಿಸಿದರು.

ಈ ಇಬ್ಬರೂ ಆಟಗಾರರು 2000 ರ ದಶಕದ ಕೊನೆಯಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು, ಶರ್ಮಾ ಅವರು ಕೊಹ್ಲಿಗಿಂತ ಮುಂಚೆಯೇ ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸಿದ್ದರು. ಭಾರತದ ಪರ ಆಡಲು ಕರೆ ಬಂದಿದ್ದನ್ನು ತಿಳಿಸಿದ ಕ್ಷಣವನ್ನು ನೆನಪಿಸಿಕೊಂಡ ಇಶಾಂತ್, ಆತ ನನಗೆ ಒದ್ದು, 'ನಿನ್ನ ಹೆಸರು ಬಂದಿದೆ. ನೀನು ನಿಜವಾಗಿಯೂ ಭಾರತಕ್ಕಾಗಿ ಆಡುತ್ತೀಯಾ? ಎಂದು ಹೇಳಿದ್ದರು. ಬ್ರದರ್ ನನ್ನನ್ನು ಮಲಗಲು ಬಿಡು ಎಂದು ಕೊಹ್ಲಿಗೆ ಹೇಳಿದ್ದೆ ಎಂದು ಇಶಾಂತ್ ಸುಮಧುರ ಕ್ಷಣಗಳನ್ನು ಹಂಚಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT