ಎಂಎಸ್ ಧೋನಿ 
ಕ್ರಿಕೆಟ್

IPL 2025: ಎಂಎಸ್ ಧೋನಿ ಐಪಿಎಲ್‌ನಿಂದ ನಿವೃತ್ತಿ ಹೊಂದಬೇಕು; ವಿಶ್ವಕಪ್ ವಿಜೇತ ಮಾಜಿ ಆಟಗಾರ ಅಭಿಪ್ರಾಯ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಈ ಆವೃತ್ತಿಯ ಮಧ್ಯದಲ್ಲಿ ಗಾಯದಿಂದಾಗಿ ಹೊರಗುಳಿದ ನಂತರ, 43 ವರ್ಷದ ಧೋನಿ ಅವರು ತಂಡದ ನಾಯಕರಾದರು.

ಭಾರತದ ಮಾಜಿ ವೇಗಿ ಮತ್ತು 2007ರ ಟಿ 20 ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ, ಎಂಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹಿಂದೆ ಸರಿಯುವ ಸಮಯ ಬಂದಿದೆ ಎಂದಿದ್ದಾರೆ. ಧೋನಿಯ ಫಿಟ್ನೆಸ್ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ಈ ಹೇಳಿಕೆ ನೀಡಿದ್ದಾರೆ. ವಿಕೆಟ್‌ ಕೀಪಿಂಗ್ ವಿಚಾರದಲ್ಲಿ ಅವರು ಇನ್ನೂ ವೇಗವಾಗಿದ್ದರೂ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಐಕಾನ್ ಅವರ ಮೊಣಕಾಲು ಶಸ್ತ್ರಚಿಕಿತ್ಸೆಯ ನಂತರ ಮೊದಲಿನಂತೆ ಇಲ್ಲ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಈ ಆವೃತ್ತಿಯ ಮಧ್ಯದಲ್ಲಿ ಗಾಯದಿಂದಾಗಿ ಹೊರಗುಳಿದ ನಂತರ, 43 ವರ್ಷದ ಧೋನಿ ಅವರು ತಂಡದ ನಾಯಕರಾದರು. ಆದರೆ, ಐದು ಬಾರಿ ಚಾಂಪಿಯನ್ ಆಗಿರುವ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. 16 ವರ್ಷಗಳಲ್ಲಿ ಇದು ಮೂರನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್‌ ಅವಕಾಶ ಕಳೆದುಕೊಂಡಿದೆ.

CSK ಯ IPL 2025ರ ಆವೃತ್ತಿಯಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ ANI ಜೊತೆ ಮಾತನಾಡಿದ ಜೋಗಿಂದರ್, 'ಮಹಿ ಅವರ ಫಿಟ್ನೆಸ್ ಮಟ್ಟವನ್ನು ಪರಿಗಣಿಸಿ, ಅವರು ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಲು ಮೇಲಿನ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕು. ಆದರೆ, ಅವರು ವಿಶ್ರಾಂತಿ ಪಡೆಯುವ ಸಮಯ ಬಂದಿದೆ ಎಂದು ನಾನು ನಂಬುತ್ತೇನೆ' ಎಂದು ಹೇಳಿದರು. ಕಳೆದ ತಿಂಗಳು ಚೆಪಾಕ್‌ನಲ್ಲಿ ಧೋನಿ ಅವರ ಕುಟುಂಬ ಹಾಜರಿದ್ದು, ಬ್ಯಾಟಿಂಗ್ ಕ್ರಮಾಂಕದಲ್ಲಿ ಅವರ ಹಿಂಬಡ್ತಿಯೊಂದಿಗೆ, ಧೋನಿಯ ನಿವೃತ್ತಿಯ ಬಗ್ಗೆ ಊಹಾಪೋಹಗಳು ಕೇಳಿಬಂದಿವೆ.

ಹಲವು ವದಂತಿಗಳ ನಡುವೆಯೂ ಧೋನಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಕೆಕೆಆರ್ ವಿರುದ್ಧದ ಗೆಲುವಿನ ನಂತರ, 'ಈ ಐಪಿಎಲ್ ಮುಗಿದ ನಂತರ, ನನ್ನ ದೇಹವು ಈ ಒತ್ತಡವನ್ನು ತಡೆದುಕೊಳ್ಳುತ್ತದೆಯೇ ಎಂದು ನೋಡಲು ನಾನು ಇನ್ನೂ 6-8 ತಿಂಗಳು ಶ್ರಮಿಸಬೇಕು. ಈಗ ನಿರ್ಧರಿಸಲು ಏನೂ ಇಲ್ಲ" ಎಂದು ಹೇಳಿದರು.

ಸಿಎಸ್‌ಕೆ ತಂಡದ ಒಳಗಿನವರಿಗೆ ಧೋನಿ ಐಪಿಎಲ್ 2026 ರಲ್ಲಿಯೂ ಮುಂದುವರಿಯಬಹುದು ಎಂಬ ನಂಬಿಕೆ ಇದೆ. ಏಕೆಂದರೆ, ಫ್ರಾಂಚೈಸಿಗೆ ಇನ್ನೂ ಬಗೆಹರಿಯದ ಸಮಸ್ಯೆಗಳು ಇವೆ. ಇದರಿಂದಾಗಿ ಧೋನಿ ಹೊರನಡೆಯುವುದು ಅವರಿಗೆ ಇನ್ನಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಅವರ ನಾಯಕತ್ವ, ಡ್ರೆಸ್ಸಿಂಗ್ ಕೋಣೆಯಲ್ಲಿನ ಪ್ರಭಾವ ಮತ್ತು ಕ್ರೀಡಾಂಗಣಗಳಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸುವ ಅವರ ಸಾಮರ್ಥ್ಯವು ಅವರನ್ನು ಮತ್ತೊಂದು ಆವೃತ್ತಿಗೆ ತಂಡದೊಂದಿಗೆ ಇರಿಸಿಕೊಳ್ಳುವಲ್ಲಿ ಗಮನಾರ್ಹ ಅಂಶಗಳಾಗಿವೆ.

ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಧೋನಿ '10 ಓವರ್‌ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ' ಎಂದು ಒಪ್ಪಿಕೊಂಡಿದ್ದಾರೆ. ಇತ್ತೀಚಿನ ಮೊಣಕಾಲು ಶಸ್ತ್ರಚಿಕಿತ್ಸೆ ಮತ್ತು ವಯಸ್ಸು ಹೆಚ್ಚಾಗುತ್ತಿರುವುದರಿಂದ, ಮುಂಬರುವ ತಿಂಗಳುಗಳಲ್ಲಿ ಈ ಐಪಿಎಲ್ ಧೋನಿ ಅವರ ಕೊನೆಯ ಐಪಿಎಲ್ ಆಗಲಿದೆಯೇ ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT