ದೆಹಲಿ: ದೆಹಲಿಯಲ್ಲಿ ನಡೆದ ಐಪಿಎಲ್ 2025 ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 110 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ತಂಡದ ಬ್ಯಾಟ್ಸ್ ಮನ್ ಗಳು ಅಬ್ಬರದ ಬ್ಯಾಟಿಂಗ್ ನಿಂದ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 278 ರನ್ ಗಳಿಸಿ ಕೆಕೆಆರ್ (KKR) ತಂಡಕ್ಕೆ 279 ರನ್ ಗಳ ಗುರಿ ನೀಡಿತ್ತು.
ಕೆಕೆಆರ್ ತಂಡದ ಬ್ಯಾಟ್ಸ್ ಮನ್ ಗಳ ವೈಫಲ್ಯದಿಂದಾಗಿ ತಂಡ ವೇಗವಾಗಿ ವಿಕೆಟ್ ಗಳನ್ನು ಕಳೆದುಕೊಂಡಿತು. ಆರಂಭಿಕ ಆಟಗಾರರಾದ ಕ್ವಿಂಟನ್ ಡಿ ಕಾಕ್ 13 ಎಸೆತಗಳಲ್ಲಿ 9 ರನ್ ಗಳಿಸಿದರೆ, ಸುನಿಲ್ ನರೈನ್ 16 ಎಸೆತಗಳಲ್ಲಿ 31 ರನ್ ಗಳಿಸಿದರು, ಅಜಿಂಕ್ಯಾ ರೆಹಾನೆ ಸಹ 8 ಎಸೆತಗಳಲ್ಲಿ 15 ರನ್ ಗಳಿಸಿ ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು 2 ಅಂಕಿ ರನ್ ದಾಟಲೂ ಸಾಧ್ಯವಾಗದೇ, ಕೋಲ್ಕತ್ತಾ ತಂಡ 18.4 ಎಸೆತಗಳಲ್ಲಿ 168 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ಎಸ್ ಆರ್ ಹೆಚ್ ತಂಡದ ಪರ ಹೆನ್ರಿಕ್ ಕ್ಲಾಸೆನ್ 39 ಎಸೆತಗಳಿಗೆ 105 ರನ್ ಗಳಿಸಿ ಅತ್ಯುತ್ತಮ ಬ್ಯಾಟ್ಸ್ಮನ್ ಎನಿಸಿದರು. ಟ್ರಾವಿಸ್ ಹೆಡ್ 40 ಎಸೆತಗಳಿಗೆ 76 ರನ್ ಗಳಿಸಿದರು.