ರಜತ್ ಪಾಟಿದಾರ್ 
ಕ್ರಿಕೆಟ್

IPL 2025: ಫೈನಲ್ ಗೆ RCB; 'ರಾಯಲ್' ಅಭಿಮಾನಿಗಳಿಗೆ ರಜತ್ ಪಾಟಿದಾರ್ ನೀಡಿದ ಸಂದೇಶ ಏನು?

"ನಾನು ಆರ್‌ಸಿಬಿ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಚಿನ್ನಸ್ವಾಮಿ ಮಾತ್ರವಲ್ಲ, ನಾವು ಎಲ್ಲಿಗೆ ಹೋದರೂ ನಮ್ಮ ತವರಿನಲ್ಲಿದಂತೆ ಭಾಸವಾಗುತ್ತದೆ.

ಬೆಂಗಳೂರು: ಚಂಡೀಗಢದ ಮುಲ್ಲನಪುರದಲ್ಲಿ ನಿನ್ನೆ ನಡೆದ ಐಪಿಎಲ್ 2025 ಕ್ವಾಲಿಫೈಯರ್-1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿ ಫೈನಲ್ ಗೆ ಲಗ್ಗೆ ಇಡುವಲ್ಲಿ ಬೆಂಬಲಿಸಿದ ಆರ್ ಸಿಬಿ ಅಭಿಮಾನಿಗಳಿಗೆ ರಜತ್ ಪಾಟಿದಾರ್ ಸಂದೇಶ ನೀಡಿದ್ದಾರೆ.

ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಮಾತನಾಡಿದ RCB ನಾಯಕ, ಹೋದಲ್ಲೆಲ್ಲಾ ತಂಡವನ್ನು ಬೆಂಬಲಿಸುತ್ತಿರುವುದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ಅಭಿಮಾನಿಗಳನ್ನು ತಂಡವೂ ಪ್ರೀತಿಸುತ್ತಿದೆ. ಇನ್ನೊಂದು ಪಂದ್ಯವಷ್ಟೇ ಎಲ್ಲರೂ ಒಟ್ಟಿಗೆ ಸಂಭ್ರಮಾಚರಣೆ ಮಾಡೋಣ ಎಂದರು.

"ನಾನು ಆರ್‌ಸಿಬಿ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಚಿನ್ನಸ್ವಾಮಿ ಮಾತ್ರವಲ್ಲ, ನಾವು ಎಲ್ಲಿಗೆ ಹೋದರೂ ನಮ್ಮ ತವರಿನಲ್ಲಿದಂತೆ ಭಾಸವಾಗುತ್ತದೆ. ನಾವೆಲ್ಲರೂ ನಿಮ್ಮನ್ನು ಪ್ರೀತಿಸುತ್ತೇವೆ. ಇನ್ನು ಒಂದೇ ಒಂದು ಪಂದ್ಯ ಮಾತ್ರ. ಎಲ್ಲರೂ ಒಟ್ಟಿಗೆ ಆಚರಿಸೋಣ" ಎಂದು ಪಾಟಿದಾರ್ ಹೇಳಿದರು.

ಬೌಲಿಂಗ್ ಪ್ಲಾನ್ ನಿಖರವಾಗಿತ್ತು. ಸುಯಶ್ ಬೌಲಿಂಗ್ ಅದ್ಭುತವಾಗಿತ್ತು. ಅದೇ ರೀತಿ ಪಿಲ್ ಸಾಲ್ಟ್ ಬಗ್ಗೆಯೂ ಕೊಂಡಾಡಿದ ಪಾಟಿದಾರ್, ನಾನು ಅವರ ದೊಡ್ಡ ಅಭಿಮಾನಿ. ಬಹುತೇಕ ಪಂದ್ಯದಲ್ಲಿ ಇದೇ ರೀತಿ ಅವರು ಆಡಿದ್ದಾರೆ ಎಂದು ತಿಳಿಸಿದರು.

ಆರ್ ಸಿಬಿ ಇದೀಗ ಜೂನ್ 3 ರಂದು ಅಹಮದಾಬಾದಿನಲ್ಲಿ ನಡೆಯಲಿರುವ ಫೈನಲ್ ಪಂದ್ಯದತ್ತ ಕಾತುರದಿಂದ ಕಾಯುತ್ತಿದ್ದು, ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯುವ ವಿಶ್ವಾಸದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT