ಜಯ್ ಶಾ ಕಾಲಿಗೆರಗಿದ ಹರ್ಮನ್ ಪ್ರೀತ್ ಕೌರ್ 
ಕ್ರಿಕೆಟ್

Video: ಟ್ರೋಫಿ ಸ್ವೀಕಾರ ವೇಳೆ ಕಾಲಿಗೆರಗಲು ಮುಂದಾದ ನಾಯಕಿ Harmanpreet Kaur; ಜಯ್ ಶಾ ಪ್ರತಿಕ್ರಿಯೆಗೆ ವ್ಯಾಪಕ ಮೆಚ್ಚುಗೆ!

ಸತತ ಮೂರು ಸೋಲುಗಳ ಬಳಿಕ ಟೀಂ ಇಂಡಿಯಾ ಟೂರ್ನಿಯಿಂದಲೇ ಹೊರಬೀಳುವ ಆತಂಕವಿತ್ತು. ಆದರೆ ಭಾರತ ಮಹಿಳಾ ತಂಡ ಭರ್ಜರಿ ಕಮ್ ಬ್ಯಾಕ್ ಮಾಡಿ ಸೆಮೀಸ್ ಲಗ್ಗೆ ಇಟ್ಟಿತ್ತು.

ಮುಂಬೈ: ಭಾನುವಾರ ನಡೆದ 2025ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ತನ್ನ ಚೊಚ್ಚಲ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ.

ಸತತ ಮೂರು ಸೋಲುಗಳ ಬಳಿಕ ಟೀಂ ಇಂಡಿಯಾ ಟೂರ್ನಿಯಿಂದಲೇ ಹೊರಬೀಳುವ ಆತಂಕವಿತ್ತು. ಆದರೆ ಭಾರತ ಮಹಿಳಾ ತಂಡ ಭರ್ಜರಿ ಕಮ್ ಬ್ಯಾಕ್ ಮಾಡಿ ಸೆಮೀಸ್ ಲಗ್ಗೆ ಇಟ್ಟಿತ್ತು.

ಸೆಮಿ ಫೈನಲ್ ನಲ್ಲಿ ಕೂಡ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಅದ್ಫುತ ಚೇಸಿಂಗ್ ಮಾಡಿ ಫೈನಲ್ ಗೇರಿತ್ತು. ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾವನ್ನೂ ಮಣಿಸಿ ಭಾರತ ತಂಡ ತನ್ನ ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿದೆ.

ಜಯ್ ಶಾ ಕಾಲಿಗೆರಗಿದ ಹರ್ಮನ್ ಪ್ರೀತ್ ಕೌರ್

ಇನ್ನು ಪಂದ್ಯ ಮುಕ್ತಾಯದ ಬಳಿಕ ಪ್ರಶಸ್ತಿ ಸ್ವೀಕಾರ ವೇಳೆ ಹರ್ಮನ್ ಪ್ರೀತ್ ಕೌರ್ ಐಸಿಸಿ ಅಧ್ಯಕ್ಷ ಜಯ್ ಶಾ ಕಾಲಿಗೆರಗಿದ ಘಟನೆ ಕೂಡ ನಡೆಯಿತು. ವಾಡಿಕೆಯಂತೆ ಐಸಿಸಿ ಅಧ್ಯಕ್ಷ ಜಯ್ ಶಾ ಪ್ರಶಸ್ತಿ ನೀಡಲು ವೇದಿಕೆಯ ಮೇಲಿದ್ದರು. ಈ ವೇಳೆ ಪ್ರಶಸ್ತಿ ಸ್ವೀಕಾರಕ್ಕೆ ಬಂದ ಹರ್ಮನ್ ಪ್ರೀತ್ ಕೌರ್, ಜಯ್ ಶಾ ಅವರ ಕೈ ಕುಲುಕಿ ಬಳಿಕ ಕಾಲಿಗೆರಗಿದರು.

ಜಯ್ ಶಾ ಪ್ರತಿಕ್ರಿಯೆಗೆ ವ್ಯಾಪಕ ಶ್ಲಾಘನೆ!

ಅತ್ತ ಹರ್ಮನ್ ಪ್ರೀತ್ ಕಾಲಿಗೆರಗಲು ಮುಂದಾಗುತ್ತಿದ್ದಂತೆಯೇ ಅವರನ್ನು ತಡೆದ ಜಯ್ ಶಾ ಅವರೂ ಕೂಡ ಬಗ್ಗಿ ಕಾಲಿಗೆ ಬೀಳದಂತೆ ಮನವಿ ಮಾಡಿದರು.

ಹಲವು ವರ್ಷಗಳಿಂದ ಭಾರತೀಯ ಕ್ರಿಕೆಟ್‌ನ ಬೆಳವಣಿಗೆಯಲ್ಲಿ ಜಯ್ ಶಾ ದೊಡ್ಡ ಪಾತ್ರ ವಹಿಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿಯಾಗಿ, ಮಹಿಳಾ ಕ್ರಿಕೆಟ್‌ನಲ್ಲಿ ಅನೇಕ ಸುಧಾರಣೆಗಳಿಗೆ ಶಾ ಕಾರಣರಾಗಿದ್ದಾರೆ.

ಇದರಲ್ಲಿ ಮಹಿಳಾ ಕ್ರಿಕೆಟಿಗರಿಗೆ ಪುರುಷ ಸಹ ಆಟಗಾರರಂತೆಯೇ ಪಂದ್ಯ ಶುಲ್ಕವನ್ನು ಖಾತರಿಪಡಿಸುವ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ವೇತನ ಸಮಾನತೆಯನ್ನು ತರುವ ಮಹತ್ವದ ನಿರ್ಧಾರ ಕೈಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿಕೆ. ಶಿವಕುಮಾರ್‌ ನಿರ್ಧಾರ..!

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!