ನವದೆಹಲಿ: ಐಸಿಸಿ ಮಹಿಳಾ ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಬಂಪರ್ ಬಹುಮಾನ ಘೋಷಿಸಿದೆ. ತಂಡದ ಎಲ್ಲ ಆಟಗಾರರಿಗೂ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಟಾಟಾ ಸಿಯೆರಾ ಎಸ್‌ಯುವಿ ಕಾರುಗಳನ್ನು (Sierra SUVs) ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದೆ.
ಇದು ತಂಡದ ಐತಿಹಾಸಿಕ ವಿಜಯದ ಸಂಭ್ರಮದ ಸಂಕೇತವಾಗಿದೆ. ಆಟಗಾರರ ಸ್ಥಿರತೆ, ದೃಢನಿಶ್ಚಯ ಮತ್ತು ಭಾರತೀಯ ಕ್ರೀಡೆಗೆ ನೀಡಿದ ಕೊಡುಗೆಯನ್ನು ಗೌರವಿಸುತ್ತದೆ' ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
'ಅದಮ್ಯ ಚೈತನ್ಯ ಮತ್ತು ಸ್ಪೂರ್ತಿದಾಯಕ ಆಟದ ಗೌರವವಾಗಿ ಎಲ್ಲಾ ಆಟಗಾರರಿಗೆ ಸಿಯೆರಾದ ಉನ್ನತ-ಮಟ್ಟದ ಕಾರುಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದು ಕಂಪನಿ ಹೇಳಿದೆ. ನವೆಂಬರ್ 25 ರಂದು ಕಾರು ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಈ ಘೋಷಣೆ ಹೊರಬಿದ್ದಿದೆ. ಐಕಾನಿಕ್ ಮಾಡೆಲ್ ಭಾರತೀಯ ಮಾರುಕಟ್ಟೆಗೆ ಮತ್ತೆ ಹೊಸ ರೂಪದಲ್ಲಿ ಮರಳುತ್ತಿದೆ.
ಭಾರತ ತಂಡದ ಗೆಲುವು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ ನೀಡುವ ನಂಬಿಕೆ ಮತ್ತು ದೃಢಸಂಕಲ್ಪದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶೈಲೇಶ್ ಚಂದ್ರ ಹೇಳಿದ್ದಾರೆ.
ಮುಂಬರುವ ಸಿಯೆರಾ ಕಾರು ಅದ್ಬುತವಾಗಿದ್ದು, ಇದು ತಂಡ ಸಂಭ್ರಮಿಸಿದಂತೆ ಶಕ್ತಿ ಮತ್ತು ಚೈತನ್ಯವನ್ನು ಸಾಕಾರಗೊಳಿಸುತ್ತದೆ ಎಂದು ಟಾಟಾ ಮೋಟಾರ್ಸ್ ಕಂಪನಿ ಹೇಳಿದೆ.