ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿಯರು 
ಕ್ರಿಕೆಟ್

ವಿಶ್ವಕಪ್ ಗೆಲುವು ಬೆನ್ನಲ್ಲೇ ಭಾರತ ತಂಡದ ಆಟಗಾರ್ತಿಯರ 'ಬ್ರಾಂಡ್ ವಾಲ್ಯೂ' ಭಾರಿ ಏರಿಕೆ! ಯಾರಿಗೆ ಎಷ್ಟು ಗೊತ್ತಾ?

ಆಟೋಮೊಬೈಲ್ ಕಂಪನಿಗಳಿಂದ ಹಿಡಿದು ಬ್ಯಾಂಕುಗಳವರೆಗೆ ಮತ್ತು ಶಿಕ್ಷಣ ಸಂಸ್ಥೆಗಳು, ಜೀವನಶೈಲಿಗೆ ಸಂಬಂಧಿಸಿದ ಸೌಂದರ್ಯವರ್ಧಕಗಳು ಮತ್ತು ಶಿಕ್ಷಣ ಸಂಸ್ಥೆಗಳ ಪ್ರಚಾರಕ್ಕೆ ಒಪ್ಪಂದ ಮಾಡಿಕೊಳ್ಳಲು ಅನೇಕ ಸಂಸ್ಥೆಗಳು ಕಾಯುತ್ತಿವೆ.

ನವದೆಹಲಿ: ಇದೇ ಮೊದಲ ಬಾರಿಗೆ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಚೊಚ್ಚಲ ಟ್ರೋಫಿ ಗೆದ್ದ ಭಾರತ ಮಹಿಳಾ ತಂಡದ ಆಟಗಾರ್ತಿಯರ ಬ್ರ್ಯಾಂಡ್ ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಹೌದು.. ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದ ಭಾರತ ಕ್ರಿಕೆಟ್ ಆಟಗಾರ್ತಿಯರ ಮೌಲ್ಯ ಏರಿಕೆಯಾಗಿದೆ.

ಇದಕ್ಕೆ ಇಂಬು ನೀಡುವಂತೆ ಆಟೋಮೊಬೈಲ್ ಕಂಪನಿಗಳಿಂದ ಹಿಡಿದು ಬ್ಯಾಂಕುಗಳವರೆಗೆ ಮತ್ತು ಶಿಕ್ಷಣ ಸಂಸ್ಥೆಗಳು, ಜೀವನಶೈಲಿಗೆ ಸಂಬಂಧಿಸಿದ ಸೌಂದರ್ಯವರ್ಧಕಗಳು ಮತ್ತು ಶಿಕ್ಷಣ ಸಂಸ್ಥೆಗಳ ಪ್ರಚಾರಕ್ಕೆ ಒಪ್ಪಂದ ಮಾಡಿಕೊಳ್ಳಲು ಅನೇಕ ಸಂಸ್ಥೆಗಳು ಕಾಯುತ್ತಿವೆ. ಹೀಗಾಗಿ ಆಟಗಾರ್ತಿಯರ ಬ್ರಾಂಡ್ ಮೌಲ್ಯ ಗಣನೀಯವಾಗಿ ಏರಿಕೆಯಾಗಿದೆ ಎಂದು ಹೇಳಲಾಗಿದೆ.

ಸ್ಮೃತಿ ಮಂಧಾನ, ಶಫಾಲಿ ವರ್ಮಾ ಮತ್ತು ಜೆಮಿಮಾ ರಾಡ್ರಿಗಸ್‌ರಂತಹ ತಾರಾ ಆಟಗಾರ್ತಿಯರ ಮಾರುಕಟ್ಟೆ ಮೌಲ್ಯ ಶೇ 50ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ. ಆಟಗಾರ್ತಿಯರನ್ನು ನಿರ್ವಹಿಸುವ ಸಂಸ್ಥೆಗಳ ಪ್ರಕಾರ, ಆಟಗಾರ್ತಿಯರ ಬ್ರ್ಯಾಂಡ್ ಮೌಲ್ಯ 1 ಕೋಟಿಗೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಈ ಕುರಿತು ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಆಟಗಾರರ ನಿರ್ವಹಿಸುವ ಬೇಸ್‌ಲೈನ್ ವೆಂಚರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ತುಹಿನ್ ಮಿಶ್ರಾ, 'ನಾವು ತಾರಾ ಆಟಗಾರ್ತಿಯರ ಬ್ರ್ಯಾಂಡ್ ಮೌಲ್ಯ ಶೇ 25 ರಿಂದ 55 ರಷ್ಟು ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದೇವೆ. ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ್ತಿಯರಿಗೆ ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು.

ಈ ವಿಶ್ವಕಪ್ ಗೆಲುವು ಮಾರುಕಟ್ಟೆಯಲ್ಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಮೌಲ್ಯವನ್ನು ನಿಜವಾಗಿಯೂ ಹೆಚ್ವು ಮಾಡುತ್ತದೆ. ಈ ಸಂದರ್ಭದಲ್ಲಿ ಸಂಸ್ಥೆಗಳು ಅಲ್ಪಾವಧಿಯ ಪ್ರಚಾರಕ್ಕಿಂತ ದೀರ್ಘಾವಧಿಯ ಒಪ್ಪಂದ ಮಾಡಿಕೊಳ್ಳಲು ಎದುರು ನೋಡುತ್ತವೆ’ ಎಂದು ಹೇಳಿದರು.

ಅಂತೆಯೇ ಶಫಾಲಿ ವರ್ಮಾ ಮತ್ತು ಜೆಮಿಮಾ ಅವರನ್ನು ನಿರ್ವಹಿಸುವ ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಕರಣ್ ಯಾದವ್ ಪ್ರತಿಕ್ರಿಯಿಸಿ, 'ನಾವು ಸಣ್ಣ ಪ್ರಮಾಣದ ಏರಿಕೆ ಕಾಣುತ್ತಿದ್ದೇವೆ. ದೊಡ್ಡ ಮಟ್ಟದ ಒಪ್ಪಂದಗಳ ಮೌಲ್ಯ 2 ರಿಂದ 3 ಪಟ್ಟು ಹೆಚ್ಚಾಗಿವೆ. ಜೆಮಿಮಾ ಅವರ ಬ್ರ್ಯಾಂಡ್ ಮೌಲ್ಯ ಸುಮಾರು 60 ಲಕ್ಷದಿಂದ 1.5 ಕೋಟಿ ರೂಗೆ ಏರಿಕೆ ಕಂಡಿದೆ. ಶಫಾಲಿ ಸುಮಾರು 40 ಲಕ್ಷದಿಂದ 1 ಕೋಟಿಗೆ ಏರಿದ್ದಾರೆ' ಎಂದು ಹೇಳಿದರು.

ಅಂತೆಯೇ ಇದು ಕೇವಲ ಟ್ರೋಫಿ ಗೆದ್ದಿದ್ದರಿಂದ ಮಾತ್ರ ಆಗಿದ್ದಲ್ಲ. ಅವರು ಸಾರ್ವಜನಕವಾಗಿ ಕಾಣಿಸಿಕೊಳ್ಳುವುದು, ಭಾಗವಹಿಸುವಿಕೆ, ಸಾಂಸ್ಕೃತಿಕ ವ್ಯಾಪ್ತಿ ಮತ್ತು ಪ್ರೇಕ್ಷಕರ ಜೊತೆ ಅವರು ಕಾಣಿಸಿಕೊಳ್ಳುವುದು ಈ ಎಲ್ಲಾ ಅಂಶಗಳಿಂದ ಸಾಧ್ಯವಾಗಿದೆ. ಪ್ರಸ್ತುತ ದಿನಗಳಲ್ಲಿ ಮಹಿಳಾ ಕ್ರಿಕೆಟರ್‌ಗಳು ಪುರುಷ ಆಟಗಾರರು ನೀಡುತ್ತಿದ್ದ ಜಾಹಿರಾತು ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ.

ಇದಕ್ಕೆ ಕಾರಣ, ಅವರನ್ನು ಅನುಸರಿಸುತ್ತಿದ್ದವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು. ಉದಾಹರಣೆಗೆ ಸ್ಮೃತಿ ಮಂದಾನ ಹ್ಯುಂಡೇ, ಗಲ್ಫ್ ಆಯಿಲ್, ಎಸ್‌ಬಿಐ ಬ್ಯಾಂಕ್, ಪಿಎನ್‌ಬಿ ಮೆಟ್‌ಲೈಫ್ ಮುಂತಾದ ಬ್ರಾಂಡ್‌ಗಳೊಂದಿಗೆ ಒಪ್ಪಂದ ಹೊಂದಿದ್ದಾರೆ. ಇವು ಸಾಂಪ್ರದಾಯಿಕವಾಗಿ ಪುರುಷ ಪ್ರಾಬಲ್ಯದ ಸಂಸ್ಥೆಗಳು ಎಂದು ಮಿಶ್ರಾ ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸರಗೂರು: ಮಾನವ, ದನಗಳ ಕೊಂದಿದ್ದ ಹುಲಿ ಕೊನೆಗೂ ಸೆರೆ, ಸಚಿವ ಈಶ್ವರ್ ಖಂಡ್ರೆ ಹೇಳಿದ್ದೇನು?

'ಯುದ್ಧ ಭುಗಿಲೆದ್ದರೆ ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ನಮಗಿದೆ': ಆಫ್ಘಾನಿಸ್ತಾನ, ಪಾಕಿಸ್ತಾನ ಜೊತೆ ಶಾಂತಿ ಮಾತುಕತೆ ಮತ್ತೆ ವಿಫಲ

'vote chori': ರಾಜ್ಯದ 1.12 ಕೋಟಿ ಜನರಿಂದ 'ಕೈ' ಸಹಿ ಸಂಗ್ರಹ, ನ.10ಕ್ಕೆ ಹೈಕಮಾಂಡ್'ಗೆ ಸಲ್ಲಿಕೆ

ಜಾರ್ಜಿಯಾದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ನ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ಗಳ ಬಂಧನ, ಗಡೀಪಾರಿಗೆ ಸಿದ್ಧತೆ

ಆನೇಕಲ್: ಸಲಿಂಗ ಕಾಮಕ್ಕೆ ಅಡ್ಡಿ ಎಂದು ಮಗು ಹತ್ಯೆ, ಕೊನೆಗೂ ಆರೋಪಿ ಮಹಿಳೆಯರ ಬಂಧನ

SCROLL FOR NEXT